)
ಅಶ್ವಿನಿಗೆ ಅಶ್ಲೀಲ ಮೆಸೇಜ್ ಮಾಡಿದ ರಾಘವೇಂದ್ರನ ಹೆಣ ಹಾಕಿದ ಗುರುರಾಜ ಅಂಡ್ ಗ್ಯಾಂಗ್!
ಲಾಡ್ಜ್ ಏಜೆಂಟ್ ರಾಘವೇಂದ್ರ ನಾಪತ್ತೆಯಾಗಿ ಕೊಲೆಯಾದ ರಹಸ್ಯ ಬಯಲಾಗಿದೆ. ವೇಶ್ಯಾವಾಟಿಕೆ ದಂಧೆಯಲ್ಲಿ ಈತನ ಪಾತ್ರ ಹಾಗೂ ಸಂತ್ರಸ್ತೆಯೊಬ್ಬಳ ಜೀವನದಲ್ಲಿ ಬಂದ ಗುರುರಾಜನ ಪ್ರವೇಶ ಈ ಕೊಲೆಯ ಹಿಂದಿನ ಕಾರಣವಾಗಿದೆ.
ಆತ ದೂರದ ಊರಿನಿಂದ ಬಂದು ಲಾಡ್ಜ್ ಒಂದರಲ್ಲಿ ಕೆಲಸ ಮಾಡುತ್ತಿದ್ದನು. ಇತ್ತಿಚೆಗೆ ಆ ಕೆಲಸ ಬಿಟ್ಟು ಲಾಡ್ಜ್ಗಳಿಗೆ ಗ್ರಾಹಕರನ್ನ ತಂದು ಬಿಡುವ ಕೆಲಸ ಮಾಡುತ್ತಿದ್ದನು. ಅದಕ್ಕೆ ಆತನಿಗೆ ಒಳ್ಳೆ ಕಮಿಷನ್ ಕೂಡ ಸಿಗುತ್ತಿತ್ತು. ಈತನ ಹೆಂಡತಿ ಮಕ್ಕಳು ಊರಿನಲ್ಲೇ ಇದ್ದರು. ಆದರೆ ಆವತ್ತೊಂದು ದಿನ ಇದ್ದಕ್ಕಿದ್ದಂತೆ ನಾಪತ್ತೆಯಾಗಿಬಿಟ್ಟಿದ್ದನು. ಹೆಂಡತಿ ಕಾಲ್ ಮಡಿದರೆ ಫೋನ್ ಸ್ವಿಚ್ ಅಫ್. ಮೂರು ತಿಂಗಳು ಆತನಿಗಾಗಿ ಹೆಂಡತಿ ಹುಡುಕಾಡುತ್ತಾಳೆ. ಆದರೆ ಎಲ್ಲೂ ಅವನ ಸುಳಿವಿಲ್ಲ. ಮೂರು ತಿಂಗಳು ಬಿಟ್ಟು ಪೊಲೀಸ್ ಠಾಣೆಗೆ ಹೋಗಿ ದೂರು ನೀಡುತ್ತಾಳೆ. ಪೊಲೀಸರೂ ಅವನಿಗಾಗಿ ಎರಡು ತಿಂಗಳು ಹುಡುಕಾಡುತ್ತಾರೆ.. ಆಗಲೂ ಏನೂ ಪ್ರಯೋಜನವಾಗೋದಿಲ್ಲ. ಆದ್ರೆ ತಮ್ಮದೇ ಮಾಹಿತಿದಾರನಿಂದ ಬಂದ ಒಂದು ಮಾಹಿತಿ ಇಡೀ ಕೇಸ್ ಟ್ರೇಸ್ ಆಗುವಂತೆ ಮಾಡುತ್ತದೆ. ಹಾಗಾದರೆ ಆವತ್ತು ಮಿಸ್ ಆದವನು ಮತ್ತೆ ಸಿಕಿದ್ನಾ..? ಆತ ಎಲ್ಲಿಗೆ ಹೋಗಿದ್ದ ಎನ್ನುವ ಟ್ವಿಸ್ಟ್ ಇಲ್ಲಿದೆ ನೋಡಿ..
ಕಳೆದ 5 ತಿಂಗಳ ಹಿಂದೆ ಮಿಸ್ಸಿಂಗ್ ಆಗಿದ್ದ ರಾಘವೇಂದ್ರ ಕೊಲೆಯಾಗಿದ್ದಾನೆ ಅನ್ನೋದು ಕನ್ಫರ್ಮ್ ಆಗಿತ್ತು. ಆದರೆ ಈ ಕಿರಾತಕರು ಅವನನ್ನ ಕೊಂದಿದ್ದೇಕೆ.? ಆವತ್ತು ಈತನನ್ನ ಕಿಡ್ನ್ಯಾಪ್ ಮಾಡುವಾಗ ಕಾರಿನಲ್ಲಿದ್ದ ಆ ಮಹಿಳೆ ಯಾರು.? ಒಂದು ಡೆಡ್ಲಿ ಮರ್ಡರ್ ಹಿಂದಿನ ಕಥೆ ಬಿಚ್ಚಿಕೊಳ್ಳುತ್ತದೆ. ರಾಘವೇಂದ್ರ ವೇಶ್ಯವಾಟಿಕೆ ದಂಧೆ ನಡೆಸುತ್ತಿದ್ದ. ಆತನ ದಂಧೆಯಲ್ಲಿ ಅದೊಬ್ಬ ಸಂತ್ರಸ್ತೆಯೂ ಇದ್ದಳು. ಆತ ಹೇಳಿದ ಕಡೆಯಲ್ಲೆಲ್ಲಾ ಆಕೆ ಹೋಗಿ ಬರುತ್ತಿದ್ದಳು. ಆವತ್ತೊಂದು ದಿನ ಗಿರಾಕಿಯಂತೆ ಬಂದ ಗುರುರಾಜನಿಗೆ ಆ ಹೆಣ್ಣುಮಗಳು ಇಷ್ಟವಾಗಿಬಿಡ್ತಾಳೆ. ಈ ದಂಧೆ ಬಿಟ್ಟು ಬಾ ಇನ್ಮುಂದೆ ನಾನು ನಿನ್ನ ನೋಡಿಕೊಳ್ಳುತ್ತೇನೆ ಎಂದಿದ್ದನು.
ಕಂಡ ಕಂಡವರಿಗೆ ಹಣಕ್ಕಾಗಿ ಸೆರಗು ಹಾಸುತ್ತಿದ್ದ ಮಹಿಳೆ ನನ್ನ ಜೀವನಕ್ಕೆ ಒಂದು ಆಸೆರೆ ಸಿಗ್ತು ಅಂತ ಅಂದುಕೊಂಡು ಗುರುರಾಜನ ಜೊತೆ ಹೊರಟುಬಿಟ್ಟಳು. ಆದರೆ ಯಾವಾಗ ಆಕೆ ರಾಘವೇಂದ್ರನ ಸಹವಾಸ ಬಿಟ್ಟಳೋ ಆಗ ಈತ ಸಿಟ್ಟಾಗಿಬಿಡ್ತಾನೆ. ನಂತರ ರಾಘವೇಂದ್ರ ಮಹಿಳೆಗೆ ಅಶ್ಲೀಲವಾಗಿ ಮೆಸೆಜ್ ಮಾಡೋದಕ್ಕೆ ಶುರು ಮಾಡುತ್ತಾನೆ. ಆತನ ಮೆಸೇಜ್ ವಿಷಯವನ್ನ ಆ ಮಹಿಳೆ ಗುರುರಾಜನಿಗೆ ಹೇಳುತ್ತಾಳೆ. ಅಷ್ಟೇ ಗುರುರಾಜ ತನ್ನ ಸ್ನೇಹಿತರನ್ನ ಕರೆದುಕೊಂಡು ರಾಘವೇಂದ್ರನಿಗೆ ಬುದ್ಧಿ ಕಲಿಸೋದಕ್ಕೆ ಹೋಗುತ್ತಾನೆ. ಆದರೆ, ಆತನಿಗೆ ಬುದ್ಧಿ ಕಲಿಸೋ ಬರದಲ್ಲಿ ಆತನನ್ನ ಕೊಂದೇಬಿಡುತ್ತಾರೆ.
ತಪ್ಪು ಮಾಡಿದವನು ನೀರು ಕುಡಿಯಲೇ ಬೇಕು.. ಕೊಲೆ ಮಾಡಿದವನು ಶಿಕ್ಷೆ ಅನುಭವಿಸಲೇಬೇಕು.. ಅಶ್ವಿನಿಗೆ ಬಾಳು ಕೊಡುವ ಗುರುರಾಜನ ಉದ್ದೇಶವೇನೋ ಒಳ್ಳೆಯದ್ದೇ ಆಗಿತ್ತು. ಆದರೆ ಆಕೆಗೆ ಮೆಸೆಜ್ ಮಾಡಿದ ಅಂತ ರಾಘವೇಂದ್ರನನ್ನ ಕೊಲೆ ಮಾಡೋದನ್ನ ಯಾರೂ ಒಪ್ಪೋಕೆ ಆಗೋದಿಲ್ಲ. ಆರೋಪಿಗಳಿಗೆ ತಕ್ಕ ಶಿಕ್ಷೆಯಾಗಲಿ ಅಂತ ಹೇಳುತ್ತಾ ಇವತ್ತಿನ ಎಪಿಸೋಡ್ ಮುಗಿಸುತ್ತಿದ್ದೇವೆ..