)
ಮಾಜಿ ಪ್ರೇಯಸಿಗೆ ಮೆಸೇಜ್ ಮಾಡಿದ್ದಕ್ಕೆ ಥಳಿತ, ಡಿ-ಗ್ಯಾಂಗ್ ಮಾದರಿಯಲ್ಲೇ ಹುಡುಗರ ಕ್ರೌರ್ಯ
ಮಾಜಿ ಪ್ರೇಯಸಿಗೆ ಮೆಸೇಜ್ ಮಾಡಿದ್ದಕ್ಕೆ ಇಂಜಿನಿಯರಿಂಗ್ ವಿದ್ಯಾರ್ಥಿಯ ಮೇಲೆ ಅಪ್ರಾಪ್ತ ಯುವಕರ ಗುಂಪೊಂದು ಹಲ್ಲೆ ನಡೆಸಿದೆ. ಯುವಕನನ್ನು ಬೆತ್ತಲೆಗೊಳಿಸಿ, ವಿಡಿಯೋ ಮಾಡಿ, ಹಿಂಸಿಸಿದ್ದಾರೆ. ಈ ಘಟನೆ ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣವನ್ನು ನೆನಪಿಗೆ ತರುತ್ತದೆ.
ಬೆಂಗಳೂರು (ಜು.08): ತಾನು ಪ್ರೀತಿ ಮಾಡಿದ್ದ ಮಾಜಿ ಪ್ರೇಯಸಿಗೆ ಮೆಸೇಜ್ ಮಾಡಿದ ಕಾರಣಕ್ಕಾಗಿ, ಅಪ್ರಾಪ್ತ ಯುವಕರ ಗುಂಪೊಂದು ಇಂಜಿನಿಯರಿಂಗ್ ವಿದ್ಯಾರ್ಥಿಯ ಮೇಲೆ ಭೀಕರವಾಗಿ ಹಲ್ಲೆ ನಡೆಸಿದ ಘಟನೆ ಬೆಳಕಿಗೆ ಬಂದಿದೆ. ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ನೆನಪಿಗೆ ತರುವಂತೆ ಈ ಕೇಸ್ ಕೂಡ 'ಡಿ-ಗ್ಯಾಂಗ್' ಮಾದರಿಯ ಪೈಶಾಚಿಕ ಕ್ರೌರ್ಯವನ್ನು ಎತ್ತಿ ತೋರಿಸಿದೆ.
ಕುಶಾಲ್ ಎನ್ನುವ ಯುವಕ ತನ್ನ ಮಾಜಿ ಪ್ರೇಯಸಿಗೆ ಅಶ್ಲೀಲ ಮೆಸೇಜ್ ಕಳುಹಿಸುತ್ತಿದ್ದ ಎನ್ನಲಾಗಿದ್ದು, ಇದನ್ನು ಯುವತಿ ತನ್ನ ಹೊಸ ಬಾಯ್‌ಫ್ರೆಂಡ್ ಹೇಮಂತ್‌ಗೆ ತಿಳಿಸಿದ್ದಳು. ಇದರಿಂದ ಆಕ್ರೋಶಗೊಂಡ ಹೇಮಂತ್ ತನ್ನ ಸ್ನೇಹಿತರನ್ನು ಸೇರಿಸಿ ಒಂದು ಗ್ಯಾಂಗ್ ರಚಿಸಿದ್ದು, ಕುಶಾಲ್‌ಗೆ ಪಾಠ ಕಲಿಸಲು ಸೋಲದೇವನಹಳ್ಳಿ ಬಳಿಯ ಒಂದು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಯುವಕನನ್ನು ಬೆತ್ತಲೆಗೆಳಿಸಿ, ಅವನನ್ನು ಓಡಾಡಿಸಿ, ಅಶ್ಲೀಲವಾಗಿ ವಿಡಿಯೋ ಶೂಟ್ ಮಾಡಿ ಹಲ್ಲೆ ನಡೆಸಿದ್ದಾರೆ. ನಂತರ, ಕುಶಾಲ್‌ನ ಹಿಂದಿನ ಗೆಳತಿಯನ್ನು ಕರೆಸಿ, ಅವಳ ಮುಂದೆ ಮತ್ತೆ ಅವನಿಗೆ ಬಾರಿಸಲು ಹೇಳಿ ಮಾನಸಿಕವಾಗಿ ದೈಹಿಕ ಹಾಗೂ ಮಾನಸಿಕವಾಗಿ ಕ್ರೂರವಾಗಿ ಹಿಂಸಿಸಿದ್ದಾರೆ. ಈ ವಿದ್ವಂಸಕಾರಿ ಕೃತ್ಯದಲ್ಲಿ ಅಪ್ರಾಪ್ತ ವಯಸ್ಸಿನ ಮಕ್ಕಳೂ ಭಾಗಿಯಾಗಿದ್ದಾರೆ ಎನ್ನುವುದು ಗಮನಾರ್ಹ.
ಒಂದೇ ಕಾಲೇಜು, ಒಂದೇ ಸ್ನೇಹಿತರು – ಆದರೆ ಕ್ರೌರ್ಯ ಭಿನ್ನ:
ಕುಶಾಲ್ ಮತ್ತು ಆರೋಪಿಗಳು ಎಲ್ಲರೂ ಒಂದೇ ಕಾಲೇಜಿನಲ್ಲಿ ಪಿಯು ಶಿಕ್ಷಣ ಪಡೆದಿದ್ದಾರೆ. ಇಂಜಿನಿಯರಿಂಗ್ ಕೋರ್ಸ್‌ಗೆ ಸೇರಿಕೊಂಡಿದ್ದಾರೆ. ಈ ವಯಸ್ಸಿನಲ್ಲೇ ಅಸಹ್ಯ ಕ್ರೌರ್ಯದಲ್ಲಿ ತೊಡಗಿದ್ದಾರೆ. ಒಬ್ಬಳ ಪ್ರೀತಿಗಾಗಿ ಮತ್ತೊಬ್ಬನಿಗೆ ರಾಕ್ಷಸೀಯ ಕೃತ್ಯ ಎಸಗಿದ ಈ ಪ್ರಕರಣವು ಇಂದು ಬೆಂಗಳೂರಿನ ಯುವಪೀಳಿಗೆಗೆ ಆತ್ಮಾವಲೋಕನ ಮಾಡಿಸಬೇಕಾದ ಅಗತ್ಯವಿದೆ. ಹಲ್ಲೆಗೊಳಗಾದ ಯುವಕ ಕುಶಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೂವರು ಅಪ್ರಾಪ್ತರು ಸೇರಿದಂತೆ ಹಲವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಅವರು ಈ ಕೃತ್ಯವನ್ನು ಶೂಟ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಂಡಿದ್ದಾರೆ. ವಿಡಿಯೋ ವೈರಲ್ ಆದ ಬಳಿಕ ಪೊಲೀಸರು ಕ್ರಮ ಕೈಗೊಂಡಿದ್ದಾರೆ.