ಮಲೆ ಮಹದೇಶ್ವರ ಬೆಟ್ಟ ವನ್ಯಜೀವಿ ವಿಭಾಗ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ 5 ಹುಲಿಗಳ ಸಾವು ಪ್ರಕರಣಕ್ಕೆ ಸಂಬಂಧಿಸಿ ಕರ್ತವ್ಯ ಲೋಪ ಎಸಗಿದ ಕಾರಣಕ್ಕಾಗಿ ಮೂವರು ಅರಣ್ಯ ಅಧಿಕಾರಿಗಳನ್ನು ಕಡ್ಡಾಯ ರಜೆ ಮೇಲೆ ಕಳುಹಿಸಿ ಅರಣ್ಯ ಪಡೆ ಮುಖ್ಯಸ್ಥರು ಆದೇಶಿಸಿದ್ದಾರೆ.
ಹಾಲಿನ ದರ ಏರಿಕೆ ಸೇರಿದಂತೆ ಕರ್ನಾಟಕದ ಸಾಲು ಸಾಲು ಬೆಲೆ ಏರಿಕೆಯಾಗುತ್ತಿದೆ. ಇದೀಗ ಬೆಂಗಳೂರಿಗರಿಗೆ ಮತ್ತೊಂದು ದರ ಏರಿಕೆ ಶಾಕ್ ಎದುರಾಗಿದೆ. ಶೀಘ್ರದಲ್ಲೇ ಬೆಂಗಳೂರು ಆಟೋ ದರ ಏರಿಕೆಯಾಗುತ್ತಿದೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇನ್ನು ಪಂದ್ಯ ನಡೆಸುವುದು ಕಷ್ಟವಾಗಲಿದೆ. ಆರ್ಸಿಬಿ ಕಾಲ್ತುಳಿತ ಪ್ರಕರಣದಿಂದ ಇದೀಗ ಕ್ರೀಡಾಂಗಣಕ್ಕೀ ಶಾಕ್ ಎದುರಾಗಿದೆ. ಅಗ್ನಿಶಾಮಕ ದಳ ಸೂಚನೆಯಂತೆ ಚಿನ್ನಸ್ವಾಮಿ ಕ್ರೀಡಾಂಗಣದ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ.
ಬೆಂಗಳೂರಿನಲ್ಲಿ ಮನೆಮಾಲೀಕರೊಬ್ಬರು ಬಾಡಿಗೆದಾರರ ಠೇವಣಿಯಿಂದ ₹60,000ಕ್ಕೂ ಹೆಚ್ಚು ಹಣವನ್ನು ಕಡಿತಗೊಳಿಸಿರುವ ಆರೋಪ ಕೇಳಿಬಂದಿದ್ದು, ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಪೇಯಿಂಟಿಂಗ್, ದಲ್ಲಾಳಿ ಶುಲ್ಕ, ತುಕ್ಕು ಹಿಡಿದ ಅಡುಗೆಮನೆ ರ್ಯಾಕ್ನಂತಹ ಕಾರಣ ನೀಡಿ ಠೇವಣಿ ಕಡಿತಗೊಳಿಸಲಾಗಿದೆ.
ಅನಾರೋಗ್ಯಪೀಡಿತ ತಾಯಿ ಮತ್ತು ಮಗನ ಆರೈಕೆಗಾಗಿ ವೃದ್ಧೆಯನ್ನು ಕೊಲೆಗೈದು ಚಿನ್ನಾಭರಣ ದೋಚಿದ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಆರೋಪಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಬೆಂಗಳೂರು ನಿವಾಸಿಯೊಬ್ಬರು ತಮ್ಮ ಬೆಳಗಿನ ಜಾವದ ಪ್ರಯಾಣದಲ್ಲಿ ಎದುರಿಸಿದ ಎರಡು ಆತಂಕಕಾರಿ ಘಟನೆಗಳನ್ನು ರೆಡ್ಡಿಟ್ನಲ್ಲಿ ಹಂಚಿಕೊಂಡಿದ್ದಾರೆ. ಮುಂಜಾನೆ ಟ್ರಾಫಿಕ್ ಜಾಮ್ ಮತ್ತು ರಸ್ತೆ ಅಪಘಾತದಿಂದಾಗಿ ನಗರದ ಮೂಲಸೌಕರ್ಯದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದ್ದಾರೆ.
ಬೆಂಗಳೂರಿನಲ್ಲಿ ಮಹಿಳೆಯೊಂದಿಗೆ ಲಿವ್ಇನ್ನಲ್ಲಿದ್ದ ಅನ್ಯಕೋಮಿನ ವ್ಯಕ್ತಿಯಿಂದ ಕೊಲೆ. ಮಹಿಳೆಯ ಶವವನ್ನು ಕಸದ ಲಾರಿಗೆ ಎಸೆದು ಪರಾರಿ ಆಗಿದ್ದ ಆರೋಪಿ ಸಂಶುದ್ದೀನ್ ಬಂಧನ. ಆದರೆ, ಈ ಕೇಸಿನಲ್ಲಿದೆ ರೋಚಕ ಟ್ವಿಸ್ಟ್!