ಧರ್ಮಸ್ಥಳ ಹೂತಿಟ್ಟ ಶವ ಪ್ರಕರಣದ ಎಸ್ಐಟಿ ತನಿಖೆ ನಡುವೆ ಮಹತ್ವದ ಬೆಳವಣಿಗೆಯಾಗಿದೆ. ಎಸ್ಐಟಿ ತನಿಖೆ ಮುಖ್ಯಸ್ಥ ಜವಾಬ್ದಾರಿ ಹೊತ್ತಿರುವ ಪ್ರಣವ್ ಮೊಹಂತಿ ಎಸ್ಐಟಿಯಿಂದ ಹೊರಬರುವ ಸಾಧ್ಯತೆ ಇದೆ.
ಬೆಂಗಳೂರು (ಜು.30) ಧರ್ಮಸ್ಥಳದ ಶವ ಹೂಚತಿಟ್ಟ ಪ್ರಕರಣದ ತನಿಖೆ ತೀವ್ರವಾಗಿ ನಡೆಯುತ್ತಿದೆ. ನೇತ್ರಾವತಿ ಸ್ನಾನಘಟ್ಟದ ಸುತ್ತ ಮುತ್ತ ಮುಸುಕುದಾರಿ ದೂರುದಾರ ಹಲವು ಶವಗಳ ಹೂತಿಟ್ಟ ಸ್ಥಳ ಗುರುತಿಸಿದ್ದಾನೆ. ಈ ಸ್ಥಳಗಳಲ್ಲಿ ಕಳೇಬರವನ್ನು ಹುಡುಕುವ ಸಲುವಾಗಿ ಅಗೆಯುವ ಕಾರ್ಯಾಚರಣೆ ನಡೆಯುತ್ತಿದೆ.ಇದರ ನಡುವೆ ಮಹತ್ವದ ಬೆಳವಣಿಗೆಯಾಗಿದೆ. ಎಸ್ಐಟಿ ಮುಖ್ಯಸ್ಥ ಜವಾಬ್ದಾರಿ ಹೊತ್ತಿರುವ ಪ್ರಣಪ್ ಮೊಹಂತಿ ಇದೀಗ ತಮ್ಮ ಜವಾಬ್ದಾರಿಯಿಂದ ಬಿಡುಗಡೆಯಾಗುವ ಸಾಧ್ಯತೆ ಇದೆ. ಕೇಂದ್ರದ ಸೇವೆಗೆ ಕೆಲ ಐಪಿಎಸ್ ಅಧಿಕಾರಿಗಳ ಪಟ್ಟಿಯನ್ನು ಕೇಂದ್ರ ಸರ್ಕಾರ ಸಿದ್ಧಪಡಿಸಿದೆ. ಈ ಪಟ್ಟಿಯಲ್ಲಿ ಪ್ರಣವ್ ಮೊಹಂತಿ ಹೆಸರಿದೆ.
ಕೇಂದ್ರ ಸರ್ಕಾರದ ಪಟ್ಟಿಯಲ್ಲಿ 16ನೇ ಹೆಸರು ಪ್ರಣವ್ ಮೊಹಂತಿ
ಧರ್ಮಸ್ಥಳ ಶವ ಹೂತಿಟ್ಟ ಹೈಪ್ರೋಫೈಲ್ ಕೇಸ್ ತನಿಖೆ ನಡೆಸುತ್ತಿರುವ ಪ್ರಣವ್ ಮೊಹಂತಿ, ಎಸ್ಐಟಿ ತಂಡದ ಮುಖ್ಯಸ್ಥರಾಗಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಇಂದು ಧರ್ಮಸ್ಥಳದ ನೇತ್ರಾವತಿ ಸ್ತಾನಘಟ್ಟದ ಸಮೀಪದ ತನಿಖಾ ಸ್ಥಳಕ್ಕೆ ಪ್ರಣವ್ ಮೊಹಂತಿ ಭೇಟಿ ನೀಡುತ್ತಿದ್ದಾರೆ. ಆದರೆ ಇದರ ನಡುವೆ ಕೇಂದ್ರ ಸರ್ಕಾರ ಕೇಂದ್ರ ಸೇವೆಗೆ ಐಪಿಎಸ್ ಅಧಿಕಾರಿಗಳನ್ನು ಕರೆಯಿಸಿಕೊಳ್ಳಲು ಪಟ್ಟಿ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ 16ನೇ ಹಸರಾಗಿ ಪ್ರಣವ್ ಮೊಹಂತಿ ಹೆಸರು ಉಲ್ಲೇಖಿಸಲಾಗಿದೆ.
ಕೇಂದ್ರದ ಪಟ್ಟಿಗೆ ಸಂಪುಟ ಅನುಮೋದನೆ
ಧರ್ಮಸ್ಥಳ ಪ್ರಕರಣದ ತನಿಖೆ ನಡೆಸುತ್ತಿರುವ ಪ್ರಣವ್ ಮೊಹಂತಿ ಕೇಂದ್ರ ಸೇವೆಗೆ ತೆರಳಲು ನಿರ್ಧರಿಸಿದರೆ, ಎಸ್ಐಟಿ ತಂಡದಿಂದ ಬಿಡುಗಡೆಯಾಗಲಿದ್ದಾರೆ. ಇದಕ್ಕೆ ಪ್ರಣವ್ ಮೊಹಂತಿ ಹಾಗೂ ರಾಜ್ಯ ಸರ್ಕಾರದ ಒಪ್ಪಿಗೆ ಅಗತ್ಯ. ಕೆಲ ಐಪಿಎಸ್ ಅಧಿಕಾರಿಗಳನ್ನು ಕೆರಯಿಸಿಕೊಳ್ಳಲು ಕೇಂದ್ರ ಸರ್ಕಾರ ಪಟ್ಟಿ ಸಿದ್ಧಪಡಿಸಿದೆ. ಈ ಪಟ್ಟಿಗೆ ಕೇಂದ್ರ ಸಂಪುಟ ಅನುಮೋದನೆ ನೀಡಿದೆ. ಆದರೆ ರಾಜ್ಯ ಸಸರ್ಕಾರ ನಿರಾಕರಿಸಿದರೆ ಪ್ರಣವ್ ಮೊಹಂತಿ ರಾಜ್ಯ ಸೇವೆಯಲ್ಲೇ ಉಳಿದುಕೊಳ್ಳಬಹುದು. ರಾಜ್ಯ ಸರ್ಕಾರ ಹಾಗೂ ಪ್ರಣವ್ ಮೊಹಂತಿ ಇಬ್ಬರು ಒಪ್ಪಿಗೆ ಸೂಚಿಸಿದರೆ ಕೇಂದ್ರ ಸೇವೆಗೆ ತೆರಳುವ ಸಾಧ್ಯತೆ ಇದೆ.
ಕೇಂದ್ರದಲ್ಲಿ ಉನ್ನತ ಹುದ್ದೆ ಜವಾಬ್ದಾರಿ ನಿರ್ವಹಿಸಿರುವ ಪ್ರಣವ್ ಮೊಹಂತಿ
ಪ್ರಣವ್ ಮೊಹಂತಿ ಕೇಂದ್ರ ಸೇವೆಗೆ ಬುಲಾವ್ ನೀಡುತ್ತಿರುವುದು ಇದೇ ಮೊದಲಲ್ಲ. ಈಗಾಲೇ ಪ್ರಣವ್ ಮೊಹಂತಿ ಕೇಂದ್ರದಲ್ಲಿ ಸೇವೆ ನೀಡಿದ್ದಾರೆ. ಒಂದು ಬಾರಿ ಕೇಂದ್ರದಲ್ಲಿ ಸೇವೆ ಸಲ್ಲಿಸಿ ಬಳಿಕ ಮತ್ತೆ ರಾಜ್ಯ ಸೇವೆಗೆ ವಾಪಾಸ್ಸಾಗಿದ್ದಾರೆ. ಆಧಾರ್ ಇಲಾಖೆಯಲ್ಲಿ ಉನ್ನತ ಹುದ್ದೆಯಲ್ಲಿ ಕೆಲಸ ಮಾಡಿದ್ದ ಪ್ರಣವ್ ಮೊಹಂತಿ, ಇದೀಗ ಎರಡನೇ ಬಾರಿಗೆ ಸೇವೆಗೆ ತೆರಳುವ ಸಾಧ್ಯತೆ ಇದೆಯಾ ಅನ್ನೋ ಚರ್ಚೆಗಳು ಶುರುವಾಗಿದೆ.
ಧರ್ಮಸ್ಥಳ ತನಿಖೆಗೆ ಮೊಹಂತಿ ಮುಖ್ಯಸ್ಥ
ಧರ್ಮಸ್ಥಳದ ಸುತ್ತು ಮುತ್ತ ನೂರಾರು ಶವ ಹೂತಿಟ್ಟ ಆರೋಪದ ಕುರಿತು ರಾಜ್ಯ ಸರ್ಕಾರ ಎಸ್ಐಟಿ ರಚನೆ ಮಾಡಿತ್ತು. ಈ ಎಸ್ಐಟಿ ಮುಖ್ಯಸ್ಥರಾಗಿ ಪ್ರಣವ್ ಮೊಹಂತಿ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಇಂದು ಪ್ರಣವ್ ಮೊಹಾಂತಿ ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ತನಿಖಾ ಸ್ಥಳಕ್ಕೆ ಭೇಟಿ ನೀಡುತ್ತಿದ್ದಾರೆ.
