ಸುರಪುರ: ಮುಕ್ತ ವ್ಯಾಪಾರ ಒಪ್ಪಂದ ವಿರೋಧಿಸಿ ರೈತರಿಂದ ಪ್ರತಿಭಟನೆ

ಕೇಂದ್ರ ಸರ್ಕಾರದ ನಿರ್ಧಾರದಿಂದ ರೈತರ ಬದುಕು ಸರ್ವನಾಶ | ರಾಜ್ಯ ರೈತ ಸಂಘದಿಂದ ಪ್ರತಿಭಟನೆ|  ಈ ಒಪ್ಪಂದಕ್ಕೆ ಪ್ರಧಾನಿ ಒಪ್ಪಿಗೆ ನೀಡಿದರೆ ರೈತರ ಬದುಕು ಸರ್ವನಾಶ| ಆದ್ದರಿಂದ ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವದ ಮುಕ್ತ ವ್ಯಾಪಾರ ಒಪ್ಪದಿಂದ ಕೃಷಿ ಕ್ಷೇತ್ರವುನ್ನು ಹೊರಗಿಡಬೇಕು ಎಂದು ಒತ್ತಾಯ| 

Opposition to Free Trade Agreement in Surapura in Yadgir District

ಸುರಪುರ[ಅ.25]: ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ (ಆರ್‌ಸಿಇಪಿ) ಮುಕ್ತ ವ್ಯಾಪಾರ ಒಪ್ಪಂದ ವಿರೋಧಿಸಿ, ಭಾರತೀಯ ರೈತರನ್ನು ಉಳಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಸದಸ್ಯರು ತಾಲೂಕು ಕಚೇರು ಎದುರು ಗುರುವಾರ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ರೈತ ಸಂಘದ ಜಿಲ್ಲಾಧ್ಯಕ್ಷ ಅಯ್ಯಣ್ಣ ಹಾಲುಭಾವಿ, ಮುಕ್ತ ವ್ಯಾಪಾರ ಒಪ್ಪಂದಕ್ಕೆ ಏಷ್ಯಾ ದೇಶಗಳಾದ ಚೀನಾ, ಜಪಾನ್, ದಕ್ಷಿಣ ಕೋರಿಯಾ, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್ ಭಾರತದೊಂದಿಗೆ ಮಾತುಕತೆ ನಡೆಸುತ್ತಿವೆ. 

ಈ ಒಪ್ಪಂದಕ್ಕೆ ಪ್ರಧಾನಿಯವರು ಒಪ್ಪಿಗೆ ನೀಡಿದರೆ ರೈತರ ಬದುಕು ಸರ್ವನಾಶವಾಗುತ್ತದೆ. ಆದ್ದರಿಂದ ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವದ ಮುಕ್ತ ವ್ಯಾಪಾರ ಒಪ್ಪದಿಂದ ಕೃಷಿ ಕ್ಷೇತ್ರವುನ್ನು ಹೊರಗಿಡಬೇಕು ಎಂದು ಒತ್ತಾಯಿಸಿದರು. ಕರ್ನಾಟಕ ರಾಜ್ಯ ರೈತ ಸಂಘದ ಮಹಿಳಾ ಘಟಕ ರಾಜ್ಯ ಕಾರ್ಯದರ್ಶಿ ಮಹಾದೇವಿ ಬೇವಿನಾಳಮಠ, ಯಾದಗಿರಿ ಜಿಲ್ಲಾದ್ಯಂತ ಅತಿವೃಷ್ಟಿ, ಅನಾವೃಷ್ಟಿ ಹಾಗೂ ಕೃಷ್ಣಾ ನದಿ ನೆರೆಹಾವಳಿ ಸಂಭವಿಸಿದರೂ ಇದುವರೆಗೆ ರೈತರಿಗೆ ಸಂದಾಯವಾಗಿಲ್ಲ. ಎಕರೆ 50 ಸಾವಿರ ರೂ. ನೀಡುವಂತೆ ರಾಜ್ಯ ರೈತ ಸಂಘ ಮನವಿ ಮಾಡಿದರೂ ಕ್ರಮ ತೆಗೆದುಕೊಂಡಿಲ್ಲ. ಕೂಡಲೇ ರೈತರಿಗೆಪ ರಿಹಾರ ಧನ ವಿತರಿಸಬೇಕು ಎಂದು ಆಗ್ರಹಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ತಾಲೂಕು ಅಧ್ಯಕ್ಷ ಪ್ರಧಾನ ಹಣಮಂತರಾಯ ಮಡಿವಾಳ, ನೆರೆ ಹಾವಳಿ ಹಾಗೂ ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಮುಂಗಾರು ಬೆಳೆ ಸಂಪೂರ್ಣವಾಗಿ ಕೈಕೊಟ್ಟಿದೆ. ಮುಂದೆ ಮಾಡಿಕೊಳ್ಳುವ ಬೇಸಿಗೆ ಬೆಳೆಗೆ 2020 ಏಪ್ರಿಲ್-30 ರವರೆಗೆ ನೀರು ಕೊಡಬೇಕು. ಹಾಗಾದಾಗ ಮಾತ್ರ ರೈತರು ಉಸಿರಾಡಲು ಸಾಧ್ಯ. ಕಾಲುವೆಗೆ ನೀರು ಬಿಡುವ ಮೊದಲು ಎಲ್ಲ ಮುಖ್ಯ ಕಾಲುವೆ, ವಿತರಣಾ ಕಾಲುವೆಗಳನ್ನು ದುರಸ್ತಿ ಪಡಿಸಬೇಕು. ಇಲ್ಲದಿದ್ದರೆ ಕಾಲುವೆ ಹರಿ ಬಿಟ್ಟನೀರು ವೃತ್ತ ಪೋಲಾಗುತ್ತದೆ. ಈ ಬಗ್ಗೆ ಕೆಬಿಜೆನ್ನೆಲ್‌ ಅಧಿಕಾರಿಗಳು ಗಮನ ಹರಿಸಬೇಕು ಎಂದು ಒತ್ತಾಯಿಸಿದರು.

ಬೇಸಿಗೆ ಬೆಳೆ ಬೆಳೆಯಲು ಪಂಪ್‌ಸೆಟ್ ನಿತ್ಯ 12 ಗಂಟೆ ವಿದ್ಯುತ್ ಪೂರೈಸಬೇಕು. ಈಗಾಗಲೇ ದಿನಕ್ಕೆ 4 ತಾಸು ವಿದ್ಯುತ್ ಪೂರೈಕೆಯಾಗುತ್ತಿದ್ದು,ಇದರಿಂದ ರೈತರ ಪಂಪ್‌ಸೆಟ್‌ಗಳ ಮೂಲಕ ಬೆಳೆ ಬೆಳೆದುಕೊಳ್ಳಲು ತೊಂದರೆಯಾಗುತ್ತದೆ. ನಿತ್ಯ 8 ಗಂಟೆ ತ್ರಿಫೇಸ್ ವಿದ್ಯುತ್ ಪೂರೈಸಬೇಕು ಎಂದು ಆಗ್ರಹಿಸಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವುಶರಣಸಾಹುಕಾರ, ಜಿಲ್ಲಾ ಉಪಾಧ್ಯಕ್ಷ ತಿಪ್ಪಣ್ಣಜಂಪಾ, ಪರಮಣ್ಣ ಮೇಟಿ, ಶಿವಲಿಂಗಯ್ಯಬೇವಿನಾಳಮಠ, ಸಹೇಬಗೌಡ ಮದಲಿಂಗನಾಹಾಳ, ಪಂಚಾಕ್ಷರಿ ಹಿರೇಮಠ, ವೆಂಕಟೇಶ ಬಳಿ ಚಕ್ರ, ರುದ್ರಯ್ಯ ಮೇಟಿ, ಬಸವರಾಜ ಬೂದಿಹಾಳ, ಹುಣಸಗಿ ಮಾನಪ್ಪ ಪೂಜಾರಿ, ಶರಣಮ್ಮ,ಗೋವಿಂದ ಪತ್ತಾರ, ವೆಂಕಟೇಶ ಕುಪಗಲ್‌ಇತರರು ಇದ್ದರು.

Latest Videos
Follow Us:
Download App:
  • android
  • ios