ಯಾದಗಿರಿ[ನ.7]: ಬಿಜೆಪಿ ಹಾಗೂ ಜೆಡಿಎಸ್ ಒಳ ಒಪ್ಪಂದವಿಲ್ಲ ಎಂದು ಪ್ರಸಕ್ತ ರಾಜ್ಯ ರಾಜಕೀಯದಲ್ಲಿನ ಬೆಳವಣಿಗೆಗಳ ಬಗ್ಗೆ ರಾಜ್ಯ ಪ್ರವಾಸೋದ್ಯ, ಕನ್ನಡ ಮತ್ತು ಸಂಸ್ಕೃತಿ, ಪ್ರಾಚ್ಯವಸ್ತು ಇಲಾಖೆಗಳ ಹಾಗೂ ಸಕ್ಕರೆ ಇಲಾಖೆ ಸಚಿವ ಸಿ.ಟಿ. ರವಿ ಅವರು ಹೇಳಿದ್ದಾರೆ. 

ಇಲಾಖೆ ಪ್ರಗತಿ ಪರಿಶೀಲನೆ ಸಭೆ ಹಿನ್ನೆಲೆಯಲ್ಲಿ ಬುಧವಾರ ಆಗಮಿಸಿದ್ದ ಅವರು ಮಾತನಾಡಿ, ಬಿಜೆಪಿ ಹಾಗೂ ಜೆಡಿಎಸ್‌ ನಡುವೆ ಯಾವುದೇ ಒಳ ಒಪ್ಪಂದವಿಲ್ಲ,ಅದರ ಅವಶ್ಯಕತೆಯೂ ನಮಗಿಲ್ಲ. ಯಾವ ಪಾರ್ಟಿ (ಪಕ್ಷ) ಜೊತೆಗೂ ನಮ್ಮ ಸಂಬಂಧವಿಲ್ಲಎಂದು ಸ್ಪಷ್ಟಪಡಿಸಿದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ರಾಜ್ಯ ರಾಜಕಾರಣದಿಂದ ಸಿಎಂ ಬಿಎಸ್ವೈ ಅವರನ್ನು ಮುಕ್ತಗೊಳಿಸಿ, ಕೇರಳ ರಾಜ್ಯಪಾಲರನ್ನಾಗಿಸಲು ಬಿಜೆಪಿ ಹೈಕಮಾಂಡ್ ಚಿಂತನೆ ನಡೆಸುತ್ತಿದೆ ಎಂದು ಬುಧವಾರ ಮಧ್ಯಾಹ್ನ ಮಾಧ್ಯಮಳೆದುರು ಮಾತನಾಡಿದ್ದ ಗುರುಮಠಕಲ್ ಶಾಸಕ ನಾಗನಗೌಡ ಕಂದಕೂರು ಅವರ ಹೇಳಿಕೆಗಳನ್ನು ತಳ್ಳಿ ಹಾಕಿದ ಸಿ. ಟಿ.ರವಿ, ಸಿಎಂ ಭವಿಷ್ಯದ ಬಗ್ಗೆ ಬಹಳಷ್ಟು ಮಾತನಾಡುತ್ತಿದ್ದಾರೆ. ಅವರಿಗೆ ಮೊದಲು ತಮ್ಮ ಭವಿಷ್ಯ ತಿಳಿದುಕೊಳ್ಳಲಿ ಎಂದು ಟಾಂಗ್‌ ನೀಡಿದರು.

ನ್ಯಾಯ ಸಿಗುವ ನಂಬಿಕೆಯಿದೆ: 

ಅಯೋಧ್ಯೆ ತೀರ್ಪು ಬಹಳ ವರ್ಷದ ನಿರೀಕ್ಷೆ. ಭಾರತದ ಮುಸ್ಲಿಂ ಸಮುದಾಯ, ಇಲ್ಲಿನ ಹಿಂದೂಗಳ ಜೊತೆ ಸೇರಿ ಅಯೋಧ್ಯೆಯ ನಿರ್ಮಾಣಕ್ಕೆ ಮುಂದಾಗುತ್ತಾರೆ ಅನ್ನೋ ನಂಬಿಕೆಯಿತ್ತು. ದುರದೃಷ್ಟವಶಾತ್ ಅದು ಆಗಲಿಲ್ಲ. ಈಗ, ನ್ಯಾಯಾಲಯದಲ್ಲಿಯಾದರೂ ನ್ಯಾಯಸಿಗುವ ನಂಬಿಕೆ ಇದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. 

ಪಠ್ಯ ಪುಸ್ತಕದಲ್ಲಿ ಟಿಪ್ಪು ಇತಿಹಾಸ: 

ಬ್ರಿಟಿಷರ ವಿರುದ್ಧ ಹೋರಾಡಿದವರೆಲ್ಲಾ ಸ್ವಾತಂತ್ರ್ಯ ಹೋರಾಟಗಾರರಲ್ಲ. ಪಠ್ಯ ವಾಸ್ತವವಾಗಿ ಕೂಡಿರಬೇಕು, ಸತ್ಯ ಸಂಗತಿಯನ್ನು ತಿಳಿಸಬೇಕು ಎಂದು ಪಠ್ಯ ಪುಸ್ತಕಗಳಲ್ಲಿ ಟಿಪ್ಪು ಅಧ್ಯಾಯದ ವಿಚಾರವಾಗಿ ಮಾತನಾಡಿದರು. ಟಿಪ್ಪು ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ್ದು ನಿಜ. ಹಾಗಂತ, ಬ್ರಿಟಿಷರ ವಿರುದ್ಧ ಹೋರಾಡಿದವರೆಲ್ಲಾ ಸ್ವಾತಂತ್ರ್ಯ ಹೋರಾಟಗಾರರಲ್ಲ. ಪರ್ಶಿಯನ್ ಭಾಷೆಯನ್ನು ಟಿಪ್ಪು ಆಡಳಿತ ಭಾಷೆಯನ್ನಾಗಿಸಲುನಿ ರ್ಧರಿಸಿದ್ದ. ಟಿಪ್ಪು ಆಡಳಿತ ಎರಡು ಮೂರು ತಲೆಮಾರಿಗೆ ಮುಂದುವರಿದಿದ್ದರೆ ಕನ್ನಡ ಉಳಿಯುತ್ತಿರಲಿಲ್ಲ, ಎಲ್ಲ ಪರ್ಶಿಯನ್‌ ಮಯವಾಗುತ್ತಿತ್ತು ಎಂದು ಆತಂಕ ವ್ಯಕ್ತಪಡಿಸಿದರು. ಟಿಪ್ಪು ಶ್ರೀರಂಗಪಟ್ಟಣಕ್ಕೆ ಮತ್ತು ಶೃಂಗೇರಿಮಠಕ್ಕೆ ದಾನ ಕೊಟ್ಟಿದ್ದು ಎಷ್ಟು ಸತ್ಯವೋ, ಕ್ರಿಶ್ಚಿಯನ್ ಹಾಗೂ ಕೊಡವರ ಹತ್ಯೆ ವಿಚಾರವೂ ಅಷ್ಟೇ ಸತ್ಯ. ಈ ಇತಿಹಾಸವನ್ನೂ ಪಠ್ಯದಲ್ಲಿ ತಿಳಿಸಬೇಕು. ಆಗ ಅದು ಟಿಪ್ಪುವಿನ ನಿಜವಾದ ಇತಿಹಾಸ ವಾಗುತ್ತೆ, ಅದನ್ನು ಬಿಟ್ಟು ತಮಗೆ ಬೇಕಾದ ರೀತಿ ಇತಿಹಾಸ ತಿರುಚಿದರೆ ಹೇಗೆ ಎನ್ನುವ ಮೂಲಕ, ಪಠ್ಯ ಪುಸ್ತಕಗಳಲ್ಲಿ ಟಿಪ್ಪು ಇತಿಹಾಸದ ಅಧ್ಯಾಯಕ್ಕೆ ಸರ್ಕಾರ ಅಂತ್ಯ ಹಾಡುವ ಬಗ್ಗೆ ಸೂಚ್ಯ ನೀಡಿದಂತಿತ್ತು.