ಸುರಪುರ[ನ.2]: ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಗೆ ಅನರ್ಹ ಶಾಸಕರು ಆಧಾರ ಸ್ತಂಭವಾಗಿದ್ದು, ಅವರ ರಾಜೀನಾಮೆಯಿಂದಲೇ ರಾಜ್ಯ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಸಾಧ್ಯವಾಗಿದೆ ಎಂದು ಸುರಪುರ ಶಾಸಕ ಹಾಗೂ ಬಿಜೆಪಿ ಪರಿಶಿಷ್ಟ ಪಂಗಡಗಳ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ನರಸಿಂಹ ನಾಯಕ(ರಾಜೂಗೌಡ) ಅವರು ಹೇಳಿದ್ದಾರೆ. 

ನಗರದ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇನ್ನೇನಿದ್ದರೂ ನ.4 ರಂದು ಸುಪ್ರೀಂಕೋರ್ಟ್‌ ನೀಡುವ ತೀರ್ಪಿನ ಬಳಿಕ ಅನರ್ಹ ಶಾಸಕರು ಆಕಾಂಕ್ಷಿಗಳ ಪಟ್ಟಿಯನ್ನು ಹೈಕಮಾಂಡ್ ಹಾಗೂ ರಾಜ್ಯಾಧ್ಯಕ್ಷರು, ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಿರ್ಧರಿಸಲಾಗುತ್ತದೆ. ಅನರ್ಹ ಶಾಸಕರ ಹಿತರಕ್ಷಣೆಗೆ ಸರ್ಕಾರ ಬದ್ಧವಾಗಿದೆ. ಬಿಜೆಪಿ ಸರ್ಕಾರ ರಚನೆಗೆ ಅನರ್ಹ ಶಾಸಕರೇ ಕಾರಣರಾಗಿದ್ದಾರೆಂದು ಒತ್ತಿ ಹೇಳಿದ ರಾಜೂಗೌಡ, ಅವರಿಗೆ ತೊಂದರೆಯಾಗದ ರೀತಿ ಸರ್ಕಾರ ನಡೆದುಕೊಳ್ಳಲಾಗುವುದು. ಕೋರ್ಟ್ ನಿರ್ಧಾರವನ್ನು ಆಧರಿಸಿ ಮುಂಬರುವ ದಿನಗಳಲ್ಲಿ ಪಕ್ಷದ ಹೈಕಮಾಂಡ್ ಸೂಕ್ತ ನಿರ್ಣಯ ಕೈಗೊಳ್ಳಲಿದೆ ಎಂದರು.

ಅಸಮಾಧಾನ ಸಹಜ: 

ಅನರ್ಹರನ್ನು ಪಕ್ಷದಲ್ಲಿ ಸೇರಿಸಿಕೊಂಡು ಟಿಕೆಟ್ ನೀಡುವುದರಿಂದ ಮೂಲ ಕಾರ್ಯಕರ್ತರಲ್ಲಿಅಸಮಾಧಾನ ಉಂಟಾಗುವುದು ಸಹಜ. ಕೆಲ ಸಂದರ್ಭಗಳಲ್ಲಿ ವೈಯಕ್ತಿಕ ಹಿತಾಸಕ್ತಿಯನ್ನು ಬದಿಗಿಡಬೇಕಾಗುತ್ತದೆ. ಪಕ್ಷಕ್ಕಿಂತ ವ್ಯಕ್ತಿ ದೊಡ್ಡವನಲ್ಲ. ಹೀಗಾಗಿ ಪಕ್ಷಕ್ಕಾಗಿ ಕಾರ್ಯಕರ್ತರು ತ್ಯಾಗ ಮಾಡಲೇಬೇಕಾಗುತ್ತದೆ. ಬಿಜೆಪಿ ತತ್ವ, ಸಿದ್ಧಾಂತ ಒಪ್ಪಿ ಬಂದವರನ್ನು ಎಂದಿಗೂ ಕೈಬಿಡುವ ಪ್ರಶ್ನೆಯೇ ಇಲ್ಲ. ಈ ಹಿಂದೆ ಕ್ಷೇತ್ರದಲ್ಲಿ ಸೋತವರು ಅನರ್ಹರಿಗೆ ಸ್ಥಾನ ಬಿಟ್ಟು ಕೊಡುವ ಅನಿವಾರ್ಯತೆ ಇದೆ. ಇದರಿಂದ ಅಸಮಾಧಾನವಾಗುವುದು ಸಹಜ. ಅಸಮಾಧಾನಗೊಂಡವರನ್ನು ಸಮಾಧಾನ ಪಡಿಸುವ ಕೆಲಸ ರಾಷ್ಟ್ರ ನಾಯಕರು, ಪಕ್ಷದ ರಾಜ್ಯಾಧ್ಯಕ್ಷರು, ಮುಖ್ಯಮಂತ್ರಿಗಳು ಮಾಡಲಿದ್ದಾರೆ ಎನ್ನುವ ಮೂಲಕ, ಅನರ್ಹರಿಗೆ ಟಿಕೆಟ್ ಪಕ್ಕಾ ಅನ್ನೋ ಮುನ್ಸೂಚನೆ ನೀಡಿದಂತಿತ್ತು. ಪರಿಶಿಷ್ಟ ಪಂಗಡ ಸಮುದಾಯ ಎಲ್ಲೆಡೆಯಿದ್ದು, ಉಪಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಡುವಂತೆ ಸಮುದಾಯದ ಜನರಲ್ಲಿ ಮನವಿ ಮಾಡಿಕೊಳ್ಳಲಾಗುತ್ತದೆ. ಪಕ್ಷ ಸೂಚಿಸಿದಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಪ್ರಚಾರ ಮಾಡಲು ಹೋಗುವೆ. ಉಪ ಚುನಾವಣೆಯ ಎಲ್ಲ ಕ್ಷೇತ್ರಗಳಲ್ಲಿಯೂಬಿಜೆಪಿ ಜಯ ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪೈಪ್‌ಲೈನ್ ದುರಸ್ತಿಗೆ 3.31 ಕೋಟಿ

ಸುರಪುರ: ನಗರಕ್ಕೆ ಶಾಶ್ವತ ಕುಡಿಯುವನೀರು ಪೂರೈಸುವ ಪೈಪ್‌ಲೈನ ದುರಸ್ತಿಹಾಗೂ ಏರ್‌ವಾಲ್ ಸೋರುವಿಕೆತಡೆಗಟ್ಟುವುದುಸೇರಿದಂತೆ ಇತರೆದುರಸ್ತಿ ಕಾಮಗಾರಿ ಕೈಕೈಗೆತ್ತಿಕೊಳ್ಳಲು 3.31 ಕೋಟಿ ರು.ಗಳ ಬಿಡುಗಡೆಯಾಗಿದ್ದು,ಈಗಾಗಲೇ ಕಾಮಗಾರಿಗಾಗಿ ಟೆಂಡರ್‌ ಕರೆಯಲಾಗಿದೆ ಎಂದು ಹೇಳಿದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ದುರಸ್ತಿ ಕಾಮಗಾರಿಮುಗಿದ ಬಳಿಕ ನಗರದಲ್ಲಿ ಉಂಟಾಗುವ ಕುಡಿಯವ ನೀರಿನ ಕೊರತೆ ನೀಗಲಿದೆ. ಪಟ್ಟಣದಲ್ಲಿ ಪೋಲಾಗುವ ನೀರನ್ನು ತಡೆಗಟ್ಟಬೇಕು. ಪ್ರತಿ ಹನಿ ನೀರು ಅಮೂಲ್ಯವಾಗಿದೆ ಎಂದು ಮನವಿ ಮಾಡಿದರು. ವಾಟರ್ ಫಿಲ್ಟರ್ ಬೆಡ್ ಸಮರ್ಪಕವಾಗಿಕಾ ರ್ಯನಿರ್ವಹಿಸುತ್ತಿಲ್ಲ. ಈ ಸಮಸ್ಯೆ ನಿವಾರಣೆಗಾಗಿ 4  ಕೋಟಿ ರು.ಗಳ ಟೆಂಡರ್‌ ಕರೆಯಲಾಗುವುದು. ಈ ಕಾಮಗಾರಿಯಿಂದ ನಗರಕ್ಕೆ ಶುದ್ಧ ಕುಡಿಯುವ ನೀರು ಸರಬರಾಜು ಆಗಲಿದೆ. ಕುಡಿಯುವ ನೀರು ಸರಬರಾಜು ಮಾಡುವ ಶೆಳ್ಳಗಿ ಹತ್ತಿರದ ಪಂಪ್‌ಹೌಸ್‌ನ ಎಕ್ಸ್‌ಪ್ರೆಸ್ ಲೈನ್‌ನ ಹೊಸ ಜೋಡೆಣೆಗೆ 91 ಲಕ್ಷ ರು.ಗಳ ಮೀಸಲಿರಿಸಲಾಗಿದೆ. ಇದರಿಂದ ಕುಡಿಯುವ ನೀರಿನ ವ್ಯತ್ಯಯದಲ್ಲಿ ಆಗುವ ಸಮಸ್ಯೆ ಸರಿಹೋಗಲಿದೆ ಎಂದು ತಿಳಿಸಿದರು.ಹ ಸನಾಪುರದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಹೊಸದಾಗಿ ಕೊಳವೆ ಬಾವಿ ಕೊರೆಯಿಸಿ ರಂಗಂಪೇಟ, ತಿಮ್ಮಾಪುರ, ದಿವಳಗುಡ್ಡ, ಸತ್ಯಂಪೇಟ ಸೇರಿದಂತೆ ವಿವಿಧ ವಾರ್ಡ್‌ಗಳಿಗೆ ನೀರು ಸರಬರಾಜು ಮಾಡುವ ಯೋಜನೆ ರೂಪಿಸಲಾಗಿದೆ. ಹಸನಾಪುರದ ಕೆರೆಯಿಂದ ಶಾಶ್ವತ ನೀರು ಸರಬರಾಜು ಮಾಡಲು ಕ್ರಿಯಾ ಯೋಜನೆ ಸಿದ್ಧಪಡಿಸಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.