Asianet Suvarna News Asianet Suvarna News

ಹೂತ ಹೆಣಗಳ ಬಗೆಯುತ್ತಿರುವ ಯುವಕರು; ಈ ದೇಶದಲ್ಲಿ ಸ್ಮಶಾನಕ್ಕೂ ಪೋಲೀಸರ ಕಣ್ಗಾವಲು

ಮಾನವ ಮೂಳೆಪುಡಿಯಿಂದ ತಯಾರಿಸುವ ಈ ಡ್ರಗ್ ಗಂಟೆಗಟ್ಟಲೆ ಜನರನ್ನು ವಾಸ್ತವದಿಂದ ಬೇರ್ಪಡಿಸುತ್ತದೆ. ಈ ಕಾರಣಕ್ಕಾಗಿ ಡ್ರಗ್ಸ್ ತಯಾರಿಕೆಗೆ ಸ್ಮಶಾನವನ್ನೇ ಬಗೆಯುತ್ತಿದ್ದಾರೆ ಯುವಕರು. ಇದೀಗ ಈ ವ್ಯಸನ ದೇಶವು ತುರ್ತು ಪರಿಸ್ಥಿತಿ ಘೋಷಣೆ ಮಾಡುವ ಮಟ್ಟಕ್ಕೆ ಬೆಳೆದಿದೆ. 

Zombie Drug Craze In Sierra Leone leads to emergency skr
Author
First Published Apr 7, 2024, 12:59 PM IST

ಪಶ್ಚಿಮ ಆಫ್ರಿಕಾದ ದೇಶ ಸಿಯೆರಾ ಲಿಯೋನ್‌ನಲ್ಲಿ ಪೋಲೀಸರು ಸ್ಮಶಾನಗಳ ಕಾವಲು ಕಾಯುತ್ತಾ ನಿಂತಿದ್ದಾರೆ. ಇಂಥದೊಂದು ಸ್ಥಿತಿಗೆ ಕಾರಣ ಇಲ್ಲಿನ ಯುವಜನರು ಸ್ಮಶಾನಗಳಲ್ಲಿ ಹೂಳಿದ ಹೆಣಗಳನ್ನು ಬಗೆದು, ಅವುಗಳ ಮೂಳೆಗಳನ್ನು ಸಂಗ್ರಹಿಸುವ ಪ್ರವೃತ್ತಿ ಹೆಚ್ಚಿರುವುದು!

ಅರೆ, ಇವರ್ಯಾಕೆ ಮೂಳೆ ಕದಿಯುತ್ತಾರೆ ಎಂದು ಗೊಂದಲವಾಯ್ತಾ? ಮಾನವ ಮೂಳೆಗಳ ಪುಡಿ ಸೇರಿದಂತೆ ವಿವಿಧ ವಿಷಕಾರಿ ವಸ್ತುಗಳ ಮಿಶ್ರಣದಿಂದ ಇವರೊಂದು ಡ್ರಗ್ಸ್ ತಯಾರಿಸುತ್ತಾರೆ. ಕುಶ್ ಎಂದು ಕರೆಯಲ್ಪಡುವ ಸೈಕೋಆಕ್ಟಿವ್ ವಸ್ತು ಹಲವು ಗಂಟೆಗಳ ಕಾಲ ವ್ಯಕ್ತಿಗಳನ್ನು ಸಮ್ಮೋಹನ ಸ್ಥಿತಿಯಲ್ಲಿಡುತ್ತಂತೆ! ಇದನ್ನು ಜೊಂಬಿ ಡ್ರಗ್ ಎಂದು ಕೂಡಾ ಹೇಳಲಾಗುತ್ತದೆ. 


 

ಈ ಡ್ರಗ್ಸ್ ವ್ಯಸನ ದೇಶದ ಯುವಜನರಲ್ಲಿ ಹೆಚ್ಚುತ್ತಿದ್ದು, ಇದರ ಪೂರೈಕೆಗಾಗಿ ಮಾನವ ಮೂಳೆಗಳು ಅಗತ್ಯವಿದೆ. ಈ ಮೂಳೆಗಳಲ್ಲಿರು ಗಂಧಕವು ಡ್ರಗ್ಸ್‌ಗೆ ಹೆಚ್ಚಿನ ಸಮ್ಮೋಹನ ಶಕ್ತಿ ನೀಡುತ್ತದೆ. ಅದನ್ನು ಸಂಗ್ರಹಿಸಲು ಸ್ಮಶಾನಗಳಿಗೆ ಎಡತಾಕುತ್ತಿರುವ ಹಾದಿ ತಪ್ಪಿದ ಯುವಜನರ ಹಾವಳಿ ತಪ್ಪಿಸಲು ಸ್ಮಶಾನಗಳಿಗೆ ಪೋಲೀಸ್ ಕಾವಲು ಇಡಲಾಗಿದೆ.

Zombie Drug Craze In Sierra Leone leads to emergency skr

ತುರ್ತು ಪರಿಸ್ಥಿತಿ
ಸಿಯೆರಾ ಲಿಯೋನ್‌ನ ಅಧ್ಯಕ್ಷ ಜೂಲಿಯಸ್ ಮಾದಾ ಬಯೋ ಈ ಪರಿಸ್ಥಿತಿಯನ್ನು ಮಾದಕ ದ್ರವ್ಯಗಳು ಮತ್ತು ಇತರ ವಸ್ತುಗಳ ವ್ಯಾಪಕ ಬಳಕೆಯಿಂದ ತಂದಿರುವ 'ಅಸ್ತಿತ್ವದ ಬೆದರಿಕೆ' ಎಂದು ವಿವರಿಸಿದ್ದಾರೆ. 'ಕುಶ್' - ಗಾಂಜಾ, ಫೆಂಟನಿಲ್, ಟ್ರಮಾಡಾಲ್ ಮತ್ತು ಫಾರ್ಮಾಲ್ಡಿಹೈಡ್‌ನಿಂದ ಮಾಡಲ್ಪಟ್ಟ ಹೆಚ್ಚು ವ್ಯಸನಕಾರಿ ಡ್ರಗ್ ಕಾಕ್‌ಟೈಲ್‌ನ ದುರುಪಯೋಗದ ಸಾಂಕ್ರಾಮಿಕ ರೋಗದ ಬಗ್ಗೆ ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದಾರೆ. ನಿರ್ದಿಷ್ಟವಾಗಿ ಕುಶ್‌ನ ಹಾನಿಕಾರಕ ಪರಿಣಾಮಗಳನ್ನು ಒತ್ತಿ ಹೇಳಿದ್ದಾರೆ. ದೇಶದ ಅನೇಕ ಪ್ರದೇಶಗಳಲ್ಲಿ ಈಗ ಈ ವ್ಯಸನಿಗಳಿಗಾಗಿ ಪುನರ್ವಸತಿ ಸೌಲಭ್ಯಗಳನ್ನು ತೆರೆಯಲು ಉಪಕ್ರಮಗಳು ಚಾಲನೆಯಲ್ಲಿವೆ.

600 ರೂ.ಗಿಂತ ಕಡಿಮೆ ಮೌಲ್ಯದ ಉತ್ಪನ್ನಗಳಿಗಾಗಿ ಶುರುವಾಯ್ತು ಅಮೇಜಾನ್ ಬಜಾರ್!
 

ಬಹುಅಂಗಾಂಗ ವೈಫಲ್ಯ
ಸರಿಸುಮಾರು ಆರು ವರ್ಷಗಳ ಹಿಂದೆ ದೇಶದಲ್ಲಿ ಕುಶ್‌ನ ಹೊರಹೊಮ್ಮುವಿಕೆಯು ಗಮನಾರ್ಹವಾದ ಸಾಮಾಜಿಕ ಮತ್ತು ಆರೋಗ್ಯದ ಪರಿಣಾಮಗಳನ್ನು ಪ್ರೇರೇಪಿಸಿದೆ. ಕುಶ್ ನೂರಾರು ಸಾವುಗಳನ್ನು ಉಂಟುಮಾಡಿದೆ ಮತ್ತು ಹಲವಾರು ಬಳಕೆದಾರರಿಗೆ ಮಾನಸಿಕವಾಗಿ ಹಾನಿಯನ್ನುಂಟು ಮಾಡಿದೆ. ನೂರಾರು ಯುವಕರು ಔಷಧದಿಂದ ಉಂಟಾದ ಅಂಗಾಂಗ ವೈಫಲ್ಯದಿಂದ ಸಾವನ್ನಪ್ಪಿದ್ದಾರೆ.

2020 ಮತ್ತು 2023ರ ನಡುವೆ ಸಿಯೆರಾ ಲಿಯೋನ್ ಮನೋವೈದ್ಯಕೀಯ ಆಸ್ಪತ್ರೆಯಲ್ಲಿ ಕುಶ್‌ಗೆ ಸಂಬಂಧಿಸಿದ ಕಾಯಿಲೆಗಳ ದಾಖಲಾತಿಗಳು ಸುಮಾರು 4,000 ಪ್ರತಿಶತದಷ್ಟು ಏರಿದೆ. ಹೆಚ್ಚಿನವರು 18-25 ವರ್ಷ ವಯಸ್ಸಿನ ಯುವಕರು.

Follow Us:
Download App:
  • android
  • ios