* ಪಾಕ್‌-ಭಾರತ ಗಡಿ ನಿಯಂತ್ರಣ ರೇಖೆಯ ಬಳಿ ಮಾತಾ ಶಾರದಾ ದೇವಾಲಯ * ಶಾರದಾ ದೇಗುಲ ನಿರ್ಮಾಣ ಆರಂಭ* ಈ ದೇವಾಲಯ ನಿರ್ಮಾಣ ಯೋಜನೆಗೆ 2021 ಡಿಸೆಂಬರ್‌ನಲ್ಲಿ ಶಂಕುಸ್ಥಾಪನೆ

ಜಮ್ಮು(ಮಾ.29): ಉತ್ತರ ಕಾಶ್ಮೀರದ ತೀತ್ವಾಲ್‌ನ ಪಾಕ್‌-ಭಾರತ ಗಡಿ ನಿಯಂತ್ರಣ ರೇಖೆಯ ಬಳಿ ಮಾತಾ ಶಾರದಾ ದೇವಾಲಯ ಹಾಗೂ ಕೇಂದ್ರದ ನಿರ್ಮಾಣ ಕಾರ್ಯವನ್ನು ಆರಂಭಿಸಲಾಗಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

ಈ ದೇವಾಲಯ ನಿರ್ಮಾಣ ಯೋಜನೆಗೆ 2021 ಡಿಸೆಂಬರ್‌ನಲ್ಲಿ ಶಂಕುಸ್ಥಾಪನೆ ನೆರವೇರಿಸಲಾಗಿತ್ತು. ಇದಕ್ಕೆ ಶೃಂಗೇರಿಯ ಮಠ ಅನುಮೋದನೆ ನೀಡಿದ್ದು, ಕರ್ನಾಟಕದ ಬಿಡದಿಯಲ್ಲಿ ದೇವಾಲಯ ನಿರ್ಮಾಣಕ್ಕೆ ಬೇಕಾದ ಕಲ್ಲುಗಳನ್ನು ಕೆತ್ತಲಾಗುತ್ತಿದೆ.

‘ಉತ್ತರ ಕಾಶ್ಮೀರದ ಕುಪ್ವಾರಾ ಜಿಲ್ಲೆಯಲ್ಲಿರುವ ಈ ದೇವಾಲಯವನ್ನು ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿರುವ ಶತಮಾನಗಳಷ್ಟುಹಳೆಯದಾದ ಶಾರದಾಪೀಠ ದೇವಾಲಯ ಪುನರುಜ್ಜೀವನಗೊಳಿಸುವ ಉದ್ದೇಶದಿಂದ ನಿರ್ಮಾಣ ಮಾಡಲಾಗುತ್ತಿದೆ. ದೇವಾಲಯ ನಿರ್ಮಾಣ ಮಾಡುವ ಸ್ಥಳದಲ್ಲಿ ಪೂಜೆಯನ್ನು ಕೈಗೊಳ್ಳಲಾಗಿತ್ತು. ದೇಶದ ವಿವಿಧ ಭಾಗದಲ್ಲಿರುವ ಕಾಶ್ಮೀರಿ ಹಿಂದೂಗಳು ಹಾಗೂ ಸಿಖ್ಖರು ಭಾಗವಹಿಸಿದ್ದರು’ ಎಂದು ಸೇವ್‌ ಶಾರದಾ ಸಮಿತಿಯ ಅಧಿಕಾರಿಗಳು ಹೇಳಿದ್ದಾರೆ.