ಟರ್ಕಿ(ಸೆ.03): ಉಕ್ರೇನ್‌ನ ಮಹಿಳೆಯೊಬ್ಬಳ ವರ್ತನೆ ಜನರನ್ನು ಬೆಚ್ಚಿ ಬೀಳಿಸಿದೆ. ವಿಮಾನದೊಳಗೆ ಸೆಕೆಯಾಗುತ್ತದೆ ಎಂದು ಆಕೆ ತುರ್ತು ನಿರ್ಗಮನ ದ್ವಾರ ತೆರೆದು ವಿಂಗ್ ಮೇಲೆ ನಡೆದಾಡಿದ್ದಾಳೆ. ಆಕೆಯ ಈ ವರ್ತನೆ ಕಂಡ ಏರ್‌ಲೈನ್ಸ್‌ ಆಕೆಯನ್ನು ಬ್ಲ್ಯಾಕ್‌ಲಿಸ್ಟ್ ಮಾಡಿದೆ. 

ಸದ್ಯ ಈ ವಿಡಿಯೋ ಭಾರೀ ವೈರಲ್ ಆಗುತ್ತಿದ್ದು, ಈ ಸಂಬಂಧ ಉಕ್ರೇನ್ ಇಂಟರ್‌ನ್ಯಾಷನಲ್ ಏರ್‌ಲೈನ್ಸ್ ಪ್ರತಿಕ್ರಿಯಿಸುತ್ತಾ ಮಹಿಳೆ ತುರ್ತು ನಿರ್ಗಮನ ದ್ವಾರ ತೆರೆದು ವಿಂಗ್ ಮೇಲೆ ನಡೆದಾಡಲಾರಂಭಿಸಿದ್ದಳು ಎಂದಿದ್ದಾರೆ. ದ ಸನ್ ವರದಿಯನ್ವಯ ಟರ್ಕಿಯಿಂದ ಹೊರಟ  ವಿಮಾನ ಉಕ್ರೇನ್‌ನ ಕೀವ್‌ ನಗರದಲ್ಲಿ ಇಳಿದ ಬಳಿಕ ಮಹಿಳೆ ತನಗೆ ಸೆಕೆಯಾಗುತ್ತಿದೆ ಎಂದು ದೂರಿದ್ದಳು. ಅಲ್ಲೇ ಗಾಳಿ ಬರಲೆಂದು ಬೋಯಿಂಗ್  737-86N ವಿಮಾನದ ಒಂದು ತುರ್ತು ನಿರ್ಗಮನ ದ್ವಾರ ಓಪನ್ ಮಾಡಿ ವಿಮಾನದ ರೆಕ್ಕೆ ಮೇಲೆ ನಡೆದಾಡಿದ್ದಾಳೆ.

Ladbible ವರದಿಯನ್ವಯ ವಿಮಾನದಲ್ಲಿದ್ದ ಮತ್ತೊಬ್ಬ ಪ್ರಯಾಣಿಕ ಈ ಬಗ್ಗೆ ಮಾಹಿತಿ ನೀಡುತ್ತಾ ವಿಮಾನ ಇಳಿದಿತ್ತು. ಸರಿಸುಮಾರು ಎಲ್ಲಾ ಪ್ರಯಾಣಿಕರು ಇಳಿದಿದ್ದರು.. ಮಹಿಳೆಯೂ ಬರುತ್ತಿದ್ದಳು. ಆದರೆ ಅಷ್ಟರಲ್ಲೇ ಆಕೆ ಎಎಮರ್ಜನ್ಸಿ ಎಕ್ಸಿಟ್ ದ್ವಾರ ತೆರೆದು, ವಿಂಗ್ ಮೇಲೆ ಓಡಾಡಿದ್ದಾಳೆ ಎಂದಿದ್ದಾರೆ. ಆಕೆ ಜೊತೆ ಆಕೆಯ ಇಬ್ಬರು ಮಕ್ಕಳೂ ಇದ್ದರು ಎಂದಿದ್ದಾರೆ.