Asianet Suvarna News Asianet Suvarna News

#Coronachallenge : ವಿಮಾನದ ಟಾಯ್ಲೆಟ್ ಸೀಟ್ ನೆಕ್ಕಿದ ಮಾಡೆಲ್

ಟಿಕ್ ಟಾಕ್‌ನಲ್ಲಿ ಹೊಸ ಚಾಲೇಂಜ್ ಶುರುವಾಗಿದ್ದು, ಮಾಡೆಲ್ ಓರ್ವಳು ಟಾಯ್ಲೆಟ್ ಸೀಟ್ ನೆಕ್ಕಿದ್ದು, ನೆಟ್ಟಿಗರು ಆಕೆಗೆ ಛೀಮಾರಿ ಹಾಕಿದ್ದಾರೆ. 

Woman licks plane toilet seat for coronavirus challenge
Author
Bengaluru, First Published Mar 18, 2020, 2:45 PM IST

ನವದೆಹಲಿ [ಮಾ.18]:  ಎಲ್ಲೆಡೆ ಇದೀಗ ಕೊರೋನಾ ಎಂಬ ಮಹಾಮಾರಿ ತನ್ನ ಆರ್ಭಟ ಮೆರೆಯುತ್ತಿದೆ. ವಿಶ್ವದಾದ್ಯಂತ ಸಾವಿರಾರು ಜೀವಗಳನ್ನು ಬಲಿಪಡೆಯುತ್ತಿದೆ. ಇದರ ಬೆನ್ನಲ್ಲೇ ಇದೀಗ  ಟಿಕ್ ಟಾಕ್ ನಲ್ಲಿ ಹೊಸ ಸವಾಲೊಂದು ಟ್ರೆಂಡ್ ಆಗುತ್ತಿದೆ. ಅದೇ #Coronachallenge

ಕೊರೋನಾ ಚಾಲೇಂಜ್  ಮೊದಲು ಮಾಡಿದ್ದು ಆವಾ ಲೂಯಿಸ್ ಎನ್ನುವ ಮಹಿಳೆ. ಆವಾ ಮಾಡಿರುವ ವೈರಲ್ ಆಗುತ್ತಿದ್ದಂತೆ ಇನ್ನೋರ್ವ ಯುವತಿ ಈ ಚಾಲೇಂಜ್ ಸ್ವೀಕರಿಸಿದ್ದು, ಆಕೆಗೆ ನೆಟ್ಟಿಗರು ಛೀಮಾರಿ ಹಾಕುತ್ತಿದ್ದಾರೆ. 

22 ವರ್ಷದ ಮಿಯಾಮಿ ಎನ್ನುವ ಮಾಡೆಲ್ #Coronachallenge ಹೆಸರಿನಲ್ಲಿ ವಿಮಾನದ ಟಾಯ್ಲೆಟ್ ಸೀಟ್ ನೆಕ್ಕಿದ್ದಾಳೆ.  ವಿಮಾನವನ್ನು ಎಷ್ಟು ನೀಟಾಗಿ ಇಡಬೇಕೆಂದು ಜನಕ್ಕೆ ಗೊತ್ತು ಎಂದು ಕ್ಯಾಪ್ಶನ್ ನೀಡಿದ್ದಾಳೆ.

ಕುದುರೆಗೂ ಕೊರೋನಾ ವೈರಸ್‌ ಕಾಟ: ಹಾರ್ಸ್‌ಗೂ ಮಾಸ್ಕ್!..

 ಆಕೆ ಟಾಯ್ಲೆಟ್ ಕಮೋಡ್ ಸೀಟ್ ನೆಕ್ಕಿ, ವಿಡಿಯೋ ಮಾಡಿ ಪೋಸ್ಟ್ ಮಾಡಿದ್ದಾರೆ.  ಈ ವಿಡಿಯೋ ನೋಡಿದ ನೆಟ್ಟಿಗರು ಆಕೆಗೆ ವಾಗ್ದಾಳಿ ನಡೆಸಿದ್ದಾರೆ. 

ಈಗಾಗಲೇ ವಿಶ್ವದಾದ್ಯಂತ ಲಕ್ಷಾಂತರ ಮಂದಿ ಸೋಂಕಿಗೆ ತುತ್ತಾಗಿದ್ದು, ಸಾವಿರಾರು ಮಂದಿ ಬಲಿಯಾಗಿದ್ದಾರೆ.  ಈ ವೇಳೆ ಸ್ವಚ್ಛತೆ ಆದ್ಯತೆ ನೀಡಲು ಎಲ್ಲೆಡೆ ಪ್ರಚಾರ ನಡೆಸಲಾಗುತ್ತಿದ್ದು ಇದೇ ವೇಳೆ ಪ್ರಚಾರಕ್ಕಾಗಿ ಮಾಡೆಲ್ ಹುಚ್ಚಾಟ ಮೆರೆದಿದ್ದಾಳೆ. 

Follow Us:
Download App:
  • android
  • ios