ಗಿನ್ನೆಸ್ ವಿಶ್ವ ದಾಖಲೆ ಪುಟ ಸೇರಿದ ಯುವತಿ ಹೈಹೀಲ್ಡ್ ಧರಿಸಿ ಹಗ್ಗದ ಮೇಲೆ ಬ್ಯಾಲೆನ್ಸ್ ಓಲ್ಗಾ ಹೆನ್ರಿ ಎಂಬ ಅಥ್ಲೀಟ್‌ನಿಂದ ಸಾಧನೆ
ಹೈಹೀಲ್ಡ್ ಧರಿಸಿ ಹಗ್ಗದ ಮೇಲೆ ಹಾರುತ್ತಾ ಕೆಳಗೆ ಬೀಳದೆಯೇ ಬ್ಯಾಲೆನ್ಸ್ ಮಾಡುವ ಮೂಲಕ ಯುವತಿಯೊಬ್ಬಳು ಸಾಧನೆ ಮಾಡಿದ್ದು, ಯುವತಿಯ ಈ ಸಾಧನೆ ಈಗ ಗಿನ್ನೆಸ್ ವಿಶ್ವ ದಾಖಲೆ ಪುಟ ಸೇರಿದೆ. ಗಿನ್ನೆಸ್ ವಿಶ್ವ ದಾಖಲೆ (Guinness World Record)ಸಮಿತಿ ನಿರ್ವಹಿಸುವ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಯುವತಿ ಹಗ್ಗದ ಮೇಲೆ ಹೈ ಹೀಲ್ಡ್ ಧರಿಸಿ ಜಿಗಿಯುತ್ತಾ ಬ್ಯಾಲೆನ್ಸ್ ಮಾಡುವ ವಿಡಿಯೋವನ್ನು ಪೋಸ್ಟ್ ಮಾಡಲಾಗಿದ್ದು, ವಿಡಿಯೋ ವೈರಲ್ ಆಗಿದೆ. ಅಥ್ಲೀಟ್ ಆಗಿರುವ ಓಲ್ಗಾ ಹೆನ್ರಿ ಎಂಬುವವರೇ ಈ ಸಾಧನೆ ಮಾಡಿದ ಯುವತಿ.
ಎತ್ತರದ ಚಪ್ಪಲಿ ಅಥವಾ ಹೈಹೀಲ್ಡ್ ಧರಿಸಿ ನಮಗೂ ಸೇರಿದಂತೆ ಬಹುತೇಕರಿಗೆ ಸಮತಟ್ಟಾದ ನೆಲದಲ್ಲಿ ಸಾಮಾನ್ಯವಾಗಿ ನಡೆಯುವುದಕ್ಕೆ ಕಷ್ಟವಾಗುತ್ತದೆ. ಇಂತಹದರಲ್ಲಿ ಈ ಮಹಿಳೆ ಹಗ್ಗದ ಮೇಲೆ ಪೆನ್ಸಿಲ್ ಚೂಪಿನ ಹೈ ಹೀಲ್ಡ್ ಧರಿಸಿ ಜಿಗ್ಗಿಯುತ್ತಿದ್ದು, ಎಲ್ಲಿಯೂ ಬ್ಯಾಲೆನ್ಸ್ ತಪ್ಪಿ ಕೆಳಗೆ ಬೀಳದಂತೆ ತನ್ನ ದೇಹವನ್ನು ನಿಯಂತ್ರಿಸುತ್ತಾಳೆ.
ಈ ಮೂಲಕ ಅಥ್ಲೀಟ್ ಓಲ್ಗಾ ಹೆನ್ರಿ (Olga Henry) ಇತಿಹಾಸವನ್ನು ಸೃಷ್ಟಿಸಿದ್ದಾರೆ. ಹೈ ಹೀಲ್ಸ್‌ನಲ್ಲಿ ಧರಿಸಿ ಹಗ್ಗದ ಮೇಲೆ ಅತೀ ಹೆಚ್ಚು ಬೌನ್ಸ್ ಮಾಡುವ ಮೂಲಕ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ತನ್ನ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಆಕೆ ಒಂದೇ ನಿಮಿಷದಲ್ಲಿ ಈ ಸಾಹಸ ಮಾಡಿದ್ದು, ಅಮೆರಿಕಾದ (USA)ಕ್ಯಾಲಿಫೋರ್ನಿಯಾದಲ್ಲಿರುವ (California) ಸಾಂಟಾ ಮೋನಿಕಾ ಬೀಚ್‌ನಲ್ಲಿ ( Santa Monica Beach) ಅವರು ತಮ್ಮ ಈ ಕೌಶಲ್ಯವನ್ನು ಪ್ರದರ್ಶಿಸಿದ್ದಾರೆ. ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್‌ನ ಸಮಿತಿಯ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆ ಓಲ್ಗಾ ಹೆನ್ರಿಯ ಸಾಹಸವನ್ನು ಪೋಸ್ಟ್ ಮಾಡಿದ್ದು, ಓಲ್ಗಾ ಹೈ ಹೀಲ್ಸ್ ಧರಿಸಿ ಹಗ್ಗದ ಮೇಲೆ ಕೌಶಲ್ಯದಿಂದ ಜಿಗಿಯುವುದನ್ನು ಕಾಣಬಹುದು. ಈ ವಿಡಿಯೋವನ್ನು ಮೂರು ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದು, ಮಹಿಳೆಯ ಸಾಹಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕಳೆದ ತಿಂಗಳು ಇರಾನ್ ಪ್ರಜೆಯೋರ್ವ (Iran) ತನ್ನ ದೇಹದ ತುಂಬಾ 85 ಚಮಚಗಳನ್ನು ಬ್ಯಾಲೆನ್ಸ್ ಮಾಡಿ ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಿದ್ದ. 50 ವರ್ಷದ ಅಬೋಲ್ಫಾಜ್ಲ್ ಸಬರ್ ಮೊಖ್ತಾರಿ (Abolfazl Saber Mokhtari) ತನ್ನ ದೇಹದ ಮೇಲೆ 85 ಚಮಚಗಳನ್ನು ಏಕಕಾಲದಲ್ಲಿ ನಿಲ್ಲಿಸಿ ಸಮತೋಲ ಕಾಯ್ದುಕೊಂಡಿದ್ದಾನೆ. ಇದಕ್ಕೂ ಮೊದಲು ಸ್ಪೇನ್‌ನ ಮಾರ್ಕೋಸ್ ರುಯಿಜ್ ಸೆಬಾಲೋಸ್ (Marcos Ruiz Ceballos) ಅವರು ತಮ್ಮ ದೇಹದ ಮೇಲೆ 64 ಚಮಚಗಳನ್ನು ಇರಿಸಿ ಇಂತಹ ದಾಖಲೆಯೊಂದನ್ನು ಮಾಡಿದ್ದರು. ಆದರೆ ಈಗ ಇರಾನ್ ಪ್ರಜೆ ಆ ದಾಖಲೆಯನ್ನು ಮುರಿದಿದ್ದಾರೆ.
ಗಿನ್ನಿಸ್ ಪುಟ ಸೇರಿದ ಭಾರಿ ಗಾತ್ರದ ಸ್ಟ್ರಾಬೆರಿ
ಆದಾಗ್ಯೂ, ಈ ದಾಖಲೆಯನ್ನು ಮುರಿಯುವುದು ಮೊಖ್ತಾರಿಗೆ ಸುಲಭವೇನು ಆಗಿರಲಿಲ್ಲ. ಈ ಸಾಧನೆ ಮಾಡುವ ಮೊದಲು ಅವರು ಇದಕ್ಕಾಗಿ ಎರಡು ಬಾರಿ ಪ್ರಯತ್ನಿಸಿ ವಿಫಲರಾಗಿದ್ದರು. ದಾಖಲೆಯ ನಿಯಮಗಳ ಪ್ರಕಾರ, ಸ್ಪೂನ್‌ಗಳು ನಿರ್ದಿಷ್ಟ ಸಮಯದವರೆಗೆ ದೇಹದ ಮೇಲೆ ಸಮತೋಲನದಲ್ಲಿರಬೇಕು. ಆದಾಗ್ಯೂ, ತೇವಾಂಶ ಮತ್ತು ಸುಡುವ ತಾಪಮಾನದಿಂದಾಗಿ ಅವರ ದೇಹದಿಂದ ಕೆಲವು ಚಮಚಗಳು ಬಿದ್ದವು. ಆದರೆ ಅವರು ತಮ್ಮ ಪ್ರಯತ್ನವನ್ನು ಕೈ ಬಿಡಲಿಲ್ಲ, ಪರಿಣಾಮ ಮೂರನೇ ಪ್ರಯತ್ನದಲ್ಲಿ ಅವರು ದಾಖಲೆಯನ್ನು ಮುರಿಯಲು ಯಶಸ್ವಿಯಾದರು.