Asianet Suvarna News Asianet Suvarna News

ಸ್ಮಶಾನದ ಹೊರಗೆ ಅಸ್ಥಿಪಂಜರದೊಂದಿಗೆ ಮಹಿಳೆಯ ಆಟ, ಪ್ರತ್ಯಕ್ಷದರ್ಶಿ ಬಿಚ್ಚಿಟ್ಟ ಆಘಾತಕಾರಿ ಕಥೆ

* ಮಾನವ ಅಸ್ಥಿಪಂಜರದ ಜೊತೆ ಮಹಿಳೆಯ ನೃತ್ಯ

* ದೃಶ್ಯ ನೋಡಿ ಕಂಗಾಲಾದ ಸ್ಥಳೀಯರು

* 50 ವರ್ಷದಿಂದ ಮುಚ್ಚಿದೆ ಸ್ಮಶಾನ

woman dressed as nun dances with dog and human sketeton next to graveyard pod
Author
Bangalore, First Published Sep 12, 2021, 5:08 PM IST
  • Facebook
  • Twitter
  • Whatsapp

ಬ್ರಿಟನ್(ಸೆ.12): ಸೋಶಿಯಲ್ ಮೀಡಿಯಾದಲ್ಲಿ ಶಾಕಿಂಗ್ ಫೋಟೋ ಒಂದು ವೈರಲ್ ಆಗುತ್ತಿದೆ. ಸನ್ಯಾಸಿನಿಯ ಉಡುಪಿನಲ್ಲಿ ಸ್ಮಶಾನದ ಬಳಿ, ಮಹಿಳೆಯೊಬ್ಬಳು ನಾಯಿ ಮತ್ತು ಮನುಷ್ಯನ ಅಸ್ಥಿಪಂಜರಗದೊಂದಿಗೆ ನೃತ್ಯ ಮಾಡುತ್ತಿರುವುದು ಚಿತ್ರದಲ್ಲಿ ಕಾಣಬಹುದು. ಡೈಲಿ ಸ್ಟಾರ್ ಪ್ರಕಾರ, ಈ ಚಿತ್ರವು ಇಂಗ್ಲೆಂಡಿನ ಸ್ಮಶಾನದ ಬಳಿ ಕಂಡು ಬಂದ ದೃಶ್ಯವಾಗಿದೆ. ಇಲ್ಲಿನ ಸ್ಮಶಾನದಲ್ಲಿ ಮಹಿಳೆಯೊಬ್ಬರು ಹೀಗೆ ವರ್ತಿಸುತ್ತಾರೆಂದು ಅನೇಕ ಮಂದಿ ಹೇಳಿದ್ದರು. ಆದರೀಗ ಆ ಮಹಿಳೆಯ ಫೋಟೋ ಕೂಡಾ ಬಹಿರಂಗೊಂಡಿದ್ದು, ನೋಡುಗರನ್ನು ಅಚ್ಚರಿಗೀಡು ಮಾಡಿದೆ. 

ಪ್ರತ್ಯಕ್ಷದರ್ಶಿ ಬಿಚ್ಚಿಟ್ಟ ಆಘಾತಕಾರಿ ಕಥೆ

ಇದನ್ನು ಕಂಡ ಪ್ರತ್ಯಕ್ಷದರ್ಶಿಯೊಬ್ಬರು"ಹಳೆಯ ಹಲ್ ಜನರಲ್ ಸ್ಮಶಾನದ ಬಳಿ ಹಾದುಹೋಗುವಾಗ, ಈ ದೃಶ್ಯ ನೋಡಿ ಆಚ್ಚರಿಗೀಡಾಗಿದ್ದಾನೆ. ಅಲ್ಲದೇ ಅಲ್ಲಿಂದ ಓಡಾಡುತ್ತಿದ್ದ ವಾಹನಗಳೂ ವೇಗ ಕಡಿಮೆ ಮಾಡಿ ಅಲ್ಲೇನಾಗುತ್ತಿದೆ ಎಂದು ತಿಳಿದುಕೊಳ್ಳುವ ಕುತೂಹಲದಲ್ಲಿದ್ದರು. 

ಹಲ್ ಲೈವ್ ನ ವರದಿಯ ಪ್ರಕಾರ, ತಲೆಗೆ ಸ್ಕಾರ್ಪ್‌ ಧರಿಸಿ, ಸನ್ಯಾಸಿನಿಯಂತೆ ಕಾಣುತ್ತಿದ್ದ ಮಹಿಳೆ ಮಾನವ ಅಸ್ಥಿಪಂಜರದೊಂದಿಗೆ ಸಂತೋಷದಿಂದ ನೃತ್ಯ ಮಾಡುತ್ತಿದ್ದಳು, ಅತ್ತ ನಾಯಿ ಕೂಡಾ ಆಕೆ ಜೊತೆ ಆಟವಾಡುತ್ತಿತ್ತು. ಇನ್ನು ಈ ದೃಶ್ಯದ ಬಗ್ಗೆ ಮಾಹಿತಿ ಕೊಟ್ಟ ವ್ಯಕ್ತಿ ಖುದ್ದು ತಾನೇ ಈ ಫೋಟೋ ಸೆರೆ ಹಿಡಿದಿದ್ದಾನೆ.   ಅಲ್ಲದೇ ಆ ಮಹಿಳೆ ಸ್ಮಶಾನ ಬಳಿ ಇದ್ದ ಹೈಮರ್ಸ್ ಶಾಲೆಗೆ ತಿರುವಿಲ್ಲಿ ನಿಂತು ಅಸ್ಥಿಪಂಜರದೊಂದಿಗೆ ನೃತ್ಯ ಮಾಡುತ್ತಿದ್ದಳು ಎಂದಿದ್ದಾನೆ. 

50 ವರ್ಷದಿಂದ ಈ ಸ್ಮಶಾನಕ್ಕೆ ಬೀಗ

ಇನ್ನು ಅದೇ ರಸ್ತೆಯಲ್ಲಿ ಹಾದು ಹೋಗುತ್ತಿದ್ದ ಇನ್ನೂ ಕೆಲವರು ಈ ಫೋಟೋ ಸೆರೆ ಹಿಡಿದಿದ್ದು, ಸೆಪ್ಟೆಂಬರ್ 11 ರ ಶನಿವಾರ ಮಧ್ಯಾಹ್ನ ಈ ದೃಶ್ಯ ಕಂಡು ಬಂದಿರುವುದಾಗಿ ವಿವರಿಸಿದ್ದಾರೆ. ಹಲ್ ಜನರಲ್ ಸ್ಮಶಾನವನ್ನು ಸುಮಾರು 50 ವರ್ಷಗಳಿಂದ ಬಳಸಲಾಗುತ್ತಿಲ್ಲ. ಆದರೂ ಇದು ನಗರದ ಅತ್ಯಂತ ಐತಿಹಾಸಿಕ ಸ್ಥಳಗಳಲ್ಲಿ ಒಂದಾಗಿದೆ. 1847 ರಲ್ಲಿ ನಿರ್ಮಿಸಲಾದ ಈ ಸ್ಮಶಾನವನ್ನು 1972 ರಲ್ಲಿ ಮುಚ್ಚಲಾಗಿತ್ತು. ಅಲ್ಲಿ ಕಾಲರಾದಿಂದ ಮೃತಪಟ್ಟ ಸುಮಾರು 1,800 ಮಂದಿಯನ್ನು ಸಮಾಧಿ ಮಾಡಲಾಗಿತ್ತು.  

Follow Us:
Download App:
  • android
  • ios