ಲಿಕ್ಕರ್ ಶಾಪ್‌ಗೆ ನುಗ್ಗಿದ ಕಾಡು ಪ್ರಾಣಿ ರಾಕೂನ್, ಎಣ್ಣೆ ಕುಡಿದು ಫುಲ್ ಟೈಟಾಗಿ ಶೌಚಾಲಯದಲ್ಲಿ ಫ್ಲ್ಯಾಟ್, ಇದು ಅಚ್ಚರಿಯಾದರೂ ಸತ್ಯ. ಅಷ್ಟಕ್ಕೂ ಈ ಕಾಡು ಪ್ರಾಣಿ ಲಿಕ್ಕರ್ ಶಾಪ್‌ನಲ್ಲಿ ಎಣ್ಣೆ ಕುಡಿದಿದ್ದು ಹೇಗೆ?

ವರ್ಜಿನಿಯಾ (ಡಿ.03) ಲಿಕ್ಕರ್ ಶಾಪ್ ಮೇಲೆ,ಎಣ್ಣೆ, ಬಾರ್ ಮೇಲೆ ಬಹುತೇಕರಿಗೆ ವಿಶೇಷ ಪ್ರೀತಿ, ವ್ಯಾಮೋಹ. ಎಲ್ಲೇ ಆದರೂ ಸರಿ ಎಣ್ಣೆ ಇದೆ ಎಂದರೆ ಎರಡು ಪೆಗ್ ಕುಡಿದೇ ಮುಂದಕ್ಕೆ ಹೋಗುವ ಜಾಯಮಾನ. ಹೀಗೆ ದೊಡ್ಡ ಲಿಕ್ಕರ್ ಶಾಪ್ ನೋಡಿದ ಕಾಡು ಪ್ರಾಣಿ ರಾಕೂನ್ ನೇರವಾಗಿ ಎಂಟ್ರಿಕೊಟ್ಟಿದೆ. ಇಡೀ ಲಿಕ್ಕರ್ ಶಾಪ್ ತಿರುಗಾಡಿ ಯಾವೆಲ್ಲಾ ಎಣ್ಣೆ ಇದೆ ಎಂದು ನೋಡಿದೆ. ಬಳಿಕ ಅಣ್ಣಾ ಎರಡೇ ಎರಡು ಪೆಗ್ ಎಂದು ಒಂಚೂರು ಟೇಸ್ಟ್ ನೋಡಿದೆ. ಕುಡಿದ ಎಣ್ಣೆ ಎಟಿಗೆ ಕಾಡು ಪ್ರಾಣಿ ಅಲ್ಲೆ ಬಾತ್‌ರೂಂನಲ್ಲಿ ಪಾಚಿಕೊಂಡಿದೆ. ಇದು ನಡೆದ ಘಟನೆ, ಅಮೆರಿಕದ ವರ್ಜಿನಿಯಾದಲ್ಲಿ ಈ ಘಟನೆ ನಡೆದಿದೆ.

ಲಿಕ್ಕರ್ ಶಾಪ್‍‌ಗೆ ಎಂಟ್ರಿಕೊಟ್ಟ ರಾಕೂನ್ ಅವಾಂತರ

ವರ್ಜಿನಿಯಾದ ಅತೀ ದೊಡ್ಡ ಲಿಕ್ಕರ್ ಶಾಪ್ ಅದು. ಇದರ ಸುತ್ತ ಮುತ್ತ ಕಾಡು, ಮರಗಿಡ, ಹಣ್ಣಿನ ಗಿಡಿಗಳು ಇವೆ. ಬೆಳಗ್ಗೆ ಸಿಬ್ಬಂದಿಗಳು ಲಿಕ್ಕರ್ ಶಾಪ್ ತೆರೆದಾಗ ಗಾಬರಿಯಾಗಿದ್ದಾರೆ. ಕಾರಣ ಲಕ್ಷ ಲಕ್ಷ ಬೆಲೆಯ ಮದ್ಯದ ಬಾಟಲಿಗಳು ಕೆಳಕ್ಕೆ ಬಿದ್ದಿದೆ. ಹಲವು ಬಾಟಲಿ ಪುಡಿ ಪುಡಿಯಾಗಿದೆ. ಮದ್ಯಗಳು ಚೆಲ್ಲಿ ಹೋಗಿದೆ. ಸಿಬ್ಬಂದಿಗಳು ಗಾಬರಿಗೊಂಡಿದ್ದಾರೆ. ಕರೆ ಮಾಡಿ ಮಾಲೀಕರಿಗೆ, ಇತರ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದಾರೆ. ಎಲ್ಲರೂ ಓಡೋಡಿ ಬಂದಿದ್ದಾರೆ.

ರಾತ್ರಿ ವೇಳೆ ಎಂಟ್ರಿ ಕೊಟ್ಟ ಪುಟ್ಟ ಕಳ್ಳ

ರಾಕೂನ್ ಅಮೆರಿಕದಲ್ಲಿ ಕಂಡುಬರುವ ಕಾಡು ಪ್ರಾಣಿ. ಹೆಚ್ಚಾಗಿ ರಾತ್ರಿ ವೇಳೆ ಈ ಪ್ರಾಣಿಗಳ ಓಡಾಟ. ಹೀಗಾಗಿ ರಾತ್ರಿಚರ ಪ್ರಾಣಿಯಾಗಿ ಗುರುತಿಸಿಕೊಂಡಿದೆ. ಸಿಬ್ಬಂದಿಗಳು, ಮಾಲೀಕರು ಎಲ್ಲಾ ತಡಕಾಡಿದಾಗ ಒಂದೇ ಒಂದು ಬಾಟಲಿ ಕಳ್ಳತನವಾಗಿಲ್ಲ. ಆದರೆ ಹಲವು ಬಾಟಲಿಗಳು ಪುಡಿ ಪುಡಿಯಾಗಿದೆ. ಬಾಗಿಲು ಮುರಿದಿಲ್ಲ, ಹಣದ ಲಾಕರ್ ಹಾಗೇ ಇದೆ. ಹಾಗಾದರೆ ಮದ್ಯದ ಬಾಟಲಿ ಪುಡಿ ಮಾಡಿದ್ದು ಯಾರು ಎಂದು ಎಲ್ಲಾ ಕಡೆ ಹುಡುಕಾಟ ಶುರುವಾಗಿದೆ. ಈ ಪೈಕಿ ಶೌಚಾಲಯದಲ್ಲಿ ನೋಡಿದಾಗ ರಾತ್ರಿ ಕಳ್ಳನ ಅಸಲಿ ಆಟ ಬಯಲಾಗಿದೆ. ಶೌಚಾಲಯದಲ್ಲಿ ಫುಲ್ ಟೈಟಾಗಿ ರಾಕೂನ್ ಪ್ರಾಣಿ ಮಲಗಿರುವುದು ಪತ್ತೆಯಾಗಿದೆ.

Scroll to load tweet…

ಲಿಕ್ಕರ್ ಶಾಪ್‌ಗೆ ನುಗ್ಗಿ ಅತ್ತಿಂದ್ದಿತ್ತ ಓಡಿದ ರಾಕೂನ್

ಸಿಕ್ಕ ಸಣ್ಣ ಗ್ಯಾಪ್ ಮೂಲಕ ರಾಕೂನ್ ಲಿಕ್ಕರ್ ಶಾಪ್‌ಗೆ ಒಳಗೆ ನುಗ್ಗಿದೆ. ಎಲ್ಲೆಡೆ ಬಾಟಲಿ, ಭಯದಿಂದ ಅತ್ತ ಇತ್ತ ಓಡಾಡಿದೆ. ಈ ಓಟಾದಲ್ಲಿ ಹಲವು ಬಾಟಲಿಗಳು ಕೆಳಕ್ಕೆ ಬಿದ್ದು ಪುಡಿ ಪುಡಿಯಾಗಿದೆ. ಮದ್ಯಗಳು ನೀರಿನಂತೆ ಹರಿದಿದೆ. ಹೊರಬರಲು ಪ್ರಯತ್ನಿಸಿದರೂ ರಾಕೂನ್‌ಗೆ ಸಾಧ್ಯವಾಗಿಲ್ಲ. ಭಯದಿಂದ ಇಡೀ ಲಿಕ್ಕರ್ ಶಾಪ್ ಓಡಾಡಿ ಹೊರಬರಲು ಪ್ರಯತ್ನಿಸಿದೆ. ಅಷ್ಟೊತ್ತಿಗೆ ರಾಕೂನ್‌ಗೆ ಬಾಯಾರಿಕೆ, ಹಸಿವು ಎಲ್ಲವೂ ಆಗಿದೆ. ಹೀಗಾಗಿ ಕೆಳಕ್ಕೆ ಬಿದ್ದ ಬಾಟಲಿಯಿಂದ ಹರಿಯುತ್ತಿದ್ದ ಮದ್ಯವನ್ನು ಕುಡಿದಿದೆ. ಲಕ್ಷಾಂತರ ಮೌಲ್ಯದ ಮದ್ಯ ತನ್ನ ಗಾತ್ರ, ತನ್ನ ದೇಹಕ್ಕಿಂತ ಹೆಚ್ಚೇ ಕುಡಿದಿದೆ. ಪರಿಣಾಮ ಶೌಚಾಲಯದ ಮೇಲಿರುವ ಗ್ಯಾಪ್ ಮೂಲಕ ಹೊರಕ್ಕೆ ಹೋಗುವ ರಾಕೂನ್ ಪ್ರಯತ್ನಕ್ಕೆ ಅಡ್ಡಿಯಾಯಾಗಿದೆ. ಶೌಚಾಲಯದ ತಲುಪಿದ್ದೆ ರಾಕೂನ್ ಪಾಚಿಕೊಂಡಿದೆ.