ಹೊಸ ಸೋಷ್ಯಲ್ ಮೀಡಿಯಾ ಟ್ರೆಂಡ್ ಅಲರ್ಟ್; ಹಕ್ಕಿಯಂತೆ ನಟಿಸುತ್ತಿರುವ ಯುವಕರು!
ಚೀನಾದ ಯುವಕರು ಹೊಸ ಸೋಷ್ಯಲ್ ಮೀಡಿಯಾ ಟ್ರೆಂಡ್ ಸೃಷ್ಟಿಸುತ್ತಿದ್ದಾರೆ. ಅವರು ತಮ್ಮನ್ನು ತಾವು ಹಕ್ಕಿಯಂತೆ ಭಾವಿಸಿ ನಟಿಸುತ್ತಿದ್ದಾರೆ. ಕಾರಣ ಏನ್ ಗೊತ್ತಾ?
ಚೀನಾದಲ್ಲಿ ಯುವಕರು ಹಕ್ಕಿಯಂತೆ ಕುಳಿತುಕೊಳ್ಳುವುದು, ಮರದಲ್ಲಿ ನೇತಾಡುವುದು, ಕೂಗುವುದು ಮಾಡುತ್ತಾ ಹೊಸ ಸಾಮಾಜಿಕ ಮಾಧ್ಯಮ ಟ್ರೆಂಡ್ ಸೃಷ್ಟಿಸಿದ್ದಾರೆ. ಇವರ ಈ ಫೋಟೋಗಳು ವೈರಲ್ ಆಗುತ್ತಿವೆ. ಇಷ್ಟಕ್ಕೂ ಇವರು ಹೀಗೇಕೆ ಹಕ್ಕಿಯಂತೆ ಕುಳಿತುಕೊಳ್ಳುತ್ತಿದ್ದಾರೆ ಗೊತ್ತಾ?
ಚೀನಾದಲ್ಲಿ ಕುಖ್ಯಾತ ಬೆಳಗ್ಗೆ 9ರಿಂದ ರಾತ್ರಿ 9ರವರೆಗೆ ವಾರದ 6 ದಿನಗಳು ಕೆಲಸ ಮಾಡೋ ಸಂಸ್ಕೃತಿ ಇದೆ. ಅಂದರೆ ವಾರಕ್ಕೆ 72 ಗಂಟೆಗಳ ಕಾಲ ಕೆಲಸ ಮಾಡಬೇಕು. ಈ 'ಹಕ್ಕಿಯಾಗಿರುವುದರ' ಹಿಂದಿನ ಕಲ್ಪನೆಯು ದೀರ್ಘ ಗಂಟೆಗಳ ಅಧ್ಯಯನ ಅಥವಾ ಕೆಲಸದಿಂದ ಮುಕ್ತವಾಗಿರುವುದರ ಬಯಕೆ ಸೂಚಿಸುತ್ತದೆಯಂತೆ.
ಅಬ್ಬಬ್ಬಾ ಶಾರೂಖ್ ಆಸ್ತಿ ಇಷ್ಟೊಂದಾ! ಭಾರತದ ಅತಿ ಶ್ರೀಮಂತ ನಟರ ಸಂಭಾವನೆ, ಆಸ್ತಿ ಮೌಲ್ಯವೆಷ್ಟು?
ಫ್ರೀ ಬರ್ಡ್ ಆಗಿ ಹಾರಾಡಿಕೊಂಡಿರಲು ಬಿಡಿ ಎಂಬ ಬಯಕೆಯನ್ನು ಈ ಯುವಜನತೆ ಪ್ರದರ್ಶಿಸುತ್ತಿದ್ದಾರೆ. ಟಿಕ್‌ಟಾಕ್‌ನಂತಹ ವೀಡಿಯೋ ಪ್ಲಾಟ್‌ಫಾರ್ಮ್‌ಗಳು, ಯುವಕರು ಮತ್ತು ಯುವತಿಯರು ತಮ್ಮ ದೇಹವನ್ನು ದೊಡ್ಡ ಗಾತ್ರದ ಟೀ-ಶರ್ಟ್‌ಗಳಿಗೆ ಸಿಲುಕಿಸುವ, ಪೀಠೋಪಕರಣಗಳ ಮೇಲೆ ಕುಳಿತುಕೊಳ್ಳುವ, ತಮ್ಮ ರೆಕ್ಕೆಗಳನ್ನು ಬೀಸುವ ಮತ್ತು ಚಿಲಿಪಿಲಿ ಮಾಡುವ ವೀಡಿಯೊಗಳಿಂದ ತುಂಬಿವೆ ಎಂದು ಬಾಬೆಲ್‌ಫಿಶ್ ಏಷ್ಯಾ ವರದಿ ಮಾಡಿದೆ.
ಈ ಬಗ್ಗೆ ಒಬ್ಬರು ಚೀನಾದ ಯುವಕರು ಕಾಮೆಂಟ್ ಮಾಡಿದ್ದು, 'ನನಗೆ ಕೆಲಸ ಮಾಡಲು ಇಷ್ಟವಿಲ್ಲ, ನಾನು ಹಕ್ಕಿಯಂತೆ ಸ್ವತಂತ್ರನಾಗಿರಲು ಬಯಸುತ್ತೇನೆ' ಎಂದು ಹೇಳಿದ್ದಾರೆ. ಮತ್ತೊಬ್ಬರು 'ಇಲ್ಲಿ ಯವ್ವನವು ಬೇಸಿಗೆಯ ಕನಸಾಗಿದೆ' ಎಂದು ಖೇದ ವ್ಯಕ್ತಪಡಿಸಿದ್ದಾರೆ. 'ಬದುಕು ಅನುಭವಿಸಲು ಸಮಯವೇ ಇಲ್ಲದಂಥ ಇಂಥ ಕೆಲಸದ ಸಂಸ್ಕೃತಿ ಯಾರಿಗೆ ಬೇಕು ಸ್ವಾಮಿ?' ಎಂದು ಮತ್ತೊಬ್ಬರು ಹೇಳಿದ್ದಾರೆ.
'ಹೃದಯ ಇಟ್ಕೋ, ನಿದ್ದೆ ವಾಪಸ್ ಕೊಟ್ಬಿಡು' ರಾಹುಲ್ ಮೋದಿ ಜೊತೆ ಪ್ರೀತಿ ಒಪ್ಪಿಕೊಂಡ ಶ್ರದ್ಧಾ ಕಪೂರ್
ಚೀನಾದಲ್ಲಿ ಯುವಕರು ಸಾಮಾಜಿಕ ಮಾಧ್ಯಮದಲ್ಲಿ ದೇಶದ ಕೆಲಸದ ಸಂಸ್ಕೃತಿಯ ಬಗ್ಗೆ ತಮ್ಮ ಹತಾಶೆಯನ್ನು ಹೊರಹಾಕುತ್ತಿರುವುದು ಇದೇ ಮೊದಲಲ್ಲ. 2022 ರಲ್ಲಿ, ಬೈ ಲ್ಯಾನ್ (ಅದು ಕೊಳೆಯಲಿ) ಎಂಬ ಪದವು ವ್ಯಾಪಕವಾಗಿ ಹರಡಿತು. Dazed ಪ್ರಕಾರ, ಪರಿಕಲ್ಪನೆಯು NBA ವಿಡಿಯೋ ಗೇಮ್ ಸಮುದಾಯದಲ್ಲಿ ಹುಟ್ಟಿಕೊಂಡಿತು. ಗೆಲ್ಲುವ ಸಾಧ್ಯತೆಗಳು ಕಡಿಮೆ ಇರುವಾಗ ಉದ್ದೇಶಪೂರ್ವಕವಾಗಿ ಪಂದ್ಯವನ್ನು ಬಿಟ್ಟು ತೆರಳುವ ಅಭ್ಯಾಸವನ್ನು ಇದು ಉಲ್ಲೇಖಿಸುತ್ತದೆ, ಆದರೆ ಇದು ಚೀನೀ ಕೆಲಸದ ಸಂಸ್ಕೃತಿಯೊಂದಿಗೆ ಬೆಳೆಯುತ್ತಿರುವ ಅಸಮಾಧಾನವನ್ನು ಪ್ರದರ್ಶಿಸಲು ಬೆಳೆದಿದೆ.
ಒಟ್ಟಿನಲ್ಲಿ ಚೀನೀ ಜನತೆ ಇಷ್ಟವಿಲ್ಲದಿದ್ದರೂ ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೂ ದುಡಿಯಲೇಬೇಕಾದ ಯಾಂತ್ರಿಕತೆಗೆ ಅನಿವಾರ್ಯವಾಗಿ ಒಡ್ಡಿಕೊಳ್ಳುತ್ತಿದ್ದಾರೆ.