ಏಪ್ರಿಲ್ 10 ರಂದು ನ್ಯೂಯಾರ್ಕ್‌ನ ಹಡ್ಸನ್ ನದಿಯಲ್ಲಿ ಹೆಲಿಕಾಪ್ಟರ್ ದುರಂತ ಸಂಭವಿಸಿ, ಸ್ಪೇನ್‌ನ ಸೀಮೆನ್ಸ್‌ನ ಅಧ್ಯಕ್ಷ ಅಗಸ್ಟಿನ್ ಎಸ್ಕೋಬಾರ್ ಕುಟುಂಬ ಸೇರಿ ಆರು ಜನರು ಮೃತಪಟ್ಟಿದ್ದಾರೆ. 36 ವರ್ಷದ ಪೈಲಟ್ ಸೀನ್ ಜಾನ್ಸನ್, ನೇವಿ ಸೀಲ್ ಅನುಭವಿಯಾಗಿದ್ದು, ಸೆಲೆಬ್ರಿಟಿಗಳ ಮಾಜಿ ಅಂಗರಕ್ಷಕರಾಗಿದ್ದರು. ಇಂಧನ ಕೊರತೆಯಿಂದಾಗಿ ದುರಂತ ಸಂಭವಿಸಿದೆ ಎಂದು ಶಂಕಿಸಲಾಗಿದೆ. ತನಿಖೆ ನಡೆಯುತ್ತಿದೆ.

ಏಪ್ರಿಲ್‌ 10ರಂದು ನ್ಯೂಯಾರ್ಕ್ ನಗರದ ಹಡ್ಸನ್ ನದಿಯಲ್ಲಿ ಹೆಲಿಕಾಪ್ಟರ್‌ ದುರಂತವಾಗಿ 6 ಮಂದಿ ಸಾವನ್ನಪ್ಪಿದ್ದರು. ವಿಮಾನದಲ್ಲಿದ್ದವರಲ್ಲಿ ಸ್ಪೇನ್‌ನ ಸೀಮೆನ್ಸ್‌ನ ಅಧ್ಯಕ್ಷ ಮತ್ತು ಸಿಇಒ ಅಗಸ್ಟಿನ್ ಎಸ್ಕೋಬಾರ್, ಅವರ ಪತ್ನಿ ಮತ್ತು ಅವರ ಮೂವರು ಮಕ್ಕಳು ಸೇರಿದ್ದರು. ಇದೀಗ ಹೆಲಿಕಾಪ್ಟರ್‌ ಓಡಿಸುತ್ತಿದ್ದ ಪೈಲೆಟ್‌ ಯಾರು ಎಂಬುದು ಬಹಿರಂಗವಾಗಿದೆ. ಖಾಸಗಿ ಹೆಲಿಕಾಪ್ಟರ್‌ನ ಪೈಲಟ್ ಅನ್ನು 36 ವರ್ಷದ ಸೀನ್ ಜಾನ್ಸನ್ ಎಂದು ಗುರುತಿಸಲಾಗಿದೆ. ಅವರು ನೇವಿ ಸೀಲ್ ಅನುಭವಿಯಾಗಿದ್ದರು ಮಾತ್ರವಲ್ಲ ಸೆಲೆಬ್ರಿಟಿಗಳ ಮಾಜಿ ಅಂಗರಕ್ಷಕರಾಗಿದ್ದರು. ತಮ್ಮ ಮಗುವಿನ ಹುಟ್ಟುಹಬ್ಬವನ್ನು ಆಚರಿಸಲು ಬಾರ್ಸಿಲೋನಾದಿಂದ ನ್ಯೂಯಾರ್ಕ್‌ಗೆ ಬಂದ ಸೀಮೆನ್ಸ್‌ನ ಕಾರ್ಯನಿರ್ವಾಹಕ ಅಗಸ್ಟಿನ್ ಎಸ್ಕೋಬರ್ ಅವರ ಕುಟುಂಬದ ಐದು ಸದಸ್ಯರೊಂದಿಗೆ ಪೈಲೆಟ್‌ ಸೀನ್ ಜಾನ್ಸನ್ ಕೂಡ ದುರಂತ ಅಂತ್ಯ ಕಂಡಿದ್ದಾರೆ.

ಇತ್ತೀಚೆಗೆ ತಮ್ಮ ವಾಯುಯಾನ ವೃತ್ತಿಜೀವನವನ್ನು ಮುಂದುವರಿಸಲು ನ್ಯೂಯಾರ್ಕ್ ನಗರಕ್ಕೆ ತೆರಳಿದ್ದ ಜಾನ್ಸನ್, ಬಾರ್ಸಿಲೋನಾದಿಂದ ಸೀಮೆನ್ಸ್‌ ಸಿಇಒ ಸಹಿತ ಐದು ಮಂದಿ ಕುಟುಂಬದವರನ್ನು ಪ್ರವಾಸದ ಭಾಗವಾಗಿ ಮೇಲಿನಿಂದ ಭೂಮಿಯನ್ನು ನೋಡಲು ದೃಶ್ಯ ವೀಕ್ಷಣೆಗೆ ಕರೆದುಕೊಂಡು ಹೋದರು. ಬೆಲ್ 206 ಅನ್ನು ಚಾಲನೆ ಮಾಡುತ್ತಿದ್ದರು. ಅವರು ಈ ಹಿಂದೆ ಕೆಲಸದ ನಿಮಿತ್ತ ಇಲಿನಾಯ್ಸ್, ವರ್ಜೀನಿಯಾ ಮತ್ತು ಮೊಂಟಾನಾ ಸೇರಿದಂತೆ ಹಲವು ರಾಜ್ಯಗಳಲ್ಲಿ ವಾಸಿಸುತ್ತಿದ್ದರು.

ಹಾರಾಟದಲ್ಲಿರುವಾಗ ಕಳಚಿಬಿದ್ದ ರೆಕ್ಕೆಗಳು: ಹೆಲಿಕಾಪ್ಟರ್‌ ದುರಂತದಲ್ಲಿ ಸೀಮನ್ಸ್‌ ಕಂಪನಿ ಸಿಇಒ ಇಡೀ ಕುಟುಂಬ ಸಾವು!

ನನಗೆ ಮಾತುಗಳು ಬರುತ್ತಿಲ್ಲ. ಏನಾಯಿತು ಎಂದು ನನಗೂ ತಿಳಿದಿಲ್ಲ ಎಂದು ಅವರ ಪತ್ನಿ ಕ್ಯಾಥರಿನ್ ಜಾನ್ಸನ್ ಹೇಳಿದ್ದಾರೆ. ಜಾನ್ಸನ್ ಸದರ್ನ್ ಉತಾಹ್ ವಿಶ್ವವಿದ್ಯಾಲಯದಲ್ಲಿ ವಾಣಿಜ್ಯ ಪೈಲಟಿಂಗ್ ಅಧ್ಯಯನ ಮಾಡಿದ್ದು, ಎಂಬ್ರಿ-ರಿಡಲ್ ಏರೋನಾಟಿಕಲ್ ವಿಶ್ವವಿದ್ಯಾಲಯ - ವರ್ಲ್ಡ್‌ವೈಡ್‌ನಲ್ಲಿಯೂ ವ್ಯಾಸಂಗ ಮಾಡಿದ್ದಾರೆ. ಹೆಲಿಕಾಫ್ಟರ್‌ ನಲ್ಲಿ ಅಗಸ್ಟಿನ್ ಕುಟುಂಬವನ್ನು ಕರೆದುಕೊಂಡು ಹೋಗುವ ದಿನವೇ ತಮ್ಮ ಸೋಷಿಯಲಕ್‌ ಮೀಡಿಯಾದಲ್ಲಿ ಫೋಟೋ ಹಾಕಿದ್ದ ಜಾನ್ಸನ್ "ಎಲ್ಲವೂ ಒಟ್ಟಿಗೆ ಬಂದಾಗ" ಎಂಬ ಶೀರ್ಷಿಕೆಯನ್ನು ಕೊಟ್ಟಿದ್ದರು.

ಹೆಲಿಕಾಪ್ಟರ್ ಪತನಗೊಂಡಿದ್ದು ಹೇಗೆ?
ಅಪಘಾತಕ್ಕೆ ನಿಖರವಾದ ಕಾರಣ ತಿಳಿದಿಲ್ಲ ಆದರೆ ಹೆಲಿಕಾಪ್ಟರ್‌ನಲ್ಲಿ ಇಂಧನ ಕಡಿಮೆ ಇತ್ತು, ಹೀಗಾಗಿ ದುರ್ಘಟನೆ ನಡೆಯುವ ಕೆಲವೇ ನಿಮಿಷಗಳ ಮುನ್ನ ಜಾನ್ಸನ್ ಬೇಸ್‌ಗೆ ಕರೆ ಮಾಡಿ ಇಂಧನ ಪಡೆಯಲು ಹಿಂತಿರುಗುತ್ತಿದ್ದೇನೆ ಎಂದಿದ್ದರು. ಜನಪ್ರಿಯ ದೃಶ್ಯವೀಕ್ಷಣೆಯ ಮಾರ್ಗವನ್ನು ಅನುಸರಿಸಿ ಮ್ಯಾನ್‌ಹ್ಯಾಟನ್‌ನ ಡೌನ್‌ಟೌನ್ ಹೆಲಿಪೋರ್ಟ್‌ನಿಂದ ಮಧ್ಯಾಹ್ನ 2:59 ಕ್ಕೆ ಹೆಲಿಕಾಪ್ಟರ್ ಟೇಕ್ ಆಫ್ ಆಯ್ತು. ಪ್ರಸಿದ್ಧ ಸ್ಟ್ಯಾಚೂ ಆಫ್ ಲಿಬರ್ಟಿ ಪ್ರತಿಮೆಯನ್ನು ಸುತ್ತವರೆದ ನಂತರ ಅದು ಹಡ್ಸನ್ ನದಿಯ ಉದ್ದಕ್ಕೂ ಉತ್ತರಕ್ಕೆ ಹಾರಿ, ಮಧ್ಯಾಹ್ನ 3:08 ಕ್ಕೆ ಜಾರ್ಜ್ ವಾಷಿಂಗ್ಟನ್ ಸೇತುವೆ ಬಳಿ ತಲುಪಿತು. ನಂತರ ಅದು ನ್ಯೂಜೆರ್ಸಿ ಕರಾವಳಿಯ ಉದ್ದಕ್ಕೂ ದಕ್ಷಿಣಕ್ಕೆ ತಿರುಗಿತು, ಅದಾ ಸ್ವಲ್ಪ ಸಮಯದ ನಂತರ ಅದು ನಿಯಂತ್ರಣ ಕಳೆದುಕೊಂಡಿತು. ಮಧ್ಯಾಹ್ನ 3:17 ಕ್ಕೆ, ನ್ಯೂಜೆರ್ಸಿಯ ಹೊಬೊಕೆನ್‌ನಲ್ಲಿರುವ ಪಿಯರ್ ಎ ಪಾರ್ಕ್ ಬಳಿ ಅಪಘಾತ ಸಂಭವಿಸಿದೆ ಎಂದು 911 ಗೆ ಬಹು ಕರೆಗಳು ವರದಿ ಮಾಡಿವೆ. ರೆಕ್ಕೆಗಳು ಮುರಿದುಹೋಗುವ ಮೊದಲು ಹೆಲಿಕಾಪ್ಟರ್ ಗಾಳಿಯಲ್ಲಿ ನಿಂತಂತೆ ಕಂಡುಬಂದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

Bengaluru: 2160 ಕೋಟಿಗೆ ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಪಾಲು ಖರೀದಿಸಿದ ಕೆನಡಾ ಕೋಟ್ಯಧಿಪತಿ!

ಹೆಲಿಕಾಪ್ಟರ್ ಮಾಲೀಕತ್ವದ ಖಾಸಗಿ ಕಂಪನಿಯು ಹೆಲಿಕಾಪ್ಟರ್ ನಿರ್ವಹಣೆಯ ಬಗ್ಗೆ ಮತ್ತು 15 ನಿಮಿಷಗಳ ಹಾರಾಟದ ನಂತರವೇ ಕಡಿಮೆ ಇಂಧನ ಹೇಗೆ ಇತ್ತು ಎಂಬುದರ ಬಗ್ಗೆ ಸ್ಪಷ್ಟನೆ ನೀಡಿಲ್ಲ. ಬಲಿಯಾದವರಲ್ಲಿ ಸೀಮೆನ್ಸ್ ಸ್ಪೇನ್‌ನ ಅಧ್ಯಕ್ಷ ಅಗಸ್ಟಿನ್ ಎಸ್ಕೋಬಾರ್ ಮತ್ತು ಅವರ ಪತ್ನಿ ಮರ್ಸ್ ಕ್ಯಾಂಪ್ರುಬಿ ಮೊಂಟಲ್ ಮತ್ತು ಅವರ ಮೂವರು ಮಕ್ಕಳು ಸೇರಿದ್ದಾರೆ. 

ಅಪಘಾತದ ಕೆಲವು ಗಂಟೆಗಳ ನಂತರ, ಅಪಘಾತಕ್ಕೆ ಕೆಲವೇ ಕ್ಷಣಗಳ ಮೊದಲು ಪೈಲಟ್ ತನಗೆ ಇಂಧನ ಬೇಕು ಎಂದು ರೇಡಿಯೋ ಮೂಲಕ ತಿಳಿಸಿದ್ದರು ಎಂದು ನ್ಯೂಯಾರ್ಕ್ ಹೆಲಿಕಾಪ್ಟರ್‌ನ ಸಿಇಒ ಮೈಕೆಲ್ ರೋತ್ ಹೇಳಿದ್ದಾರೆ. ಅವರು ಬರಲು ಸುಮಾರು ಮೂರು ನಿಮಿಷಗಳು ಬೇಕಾಗಿತ್ತು, ಆದರೆ 20 ನಿಮಿಷಗಳ ನಂತರವೂ ಅವರು ಬರಲಿಲ್ಲ. ವಿಚಾರ ತಿಳಿದ ಬಳಿಕ ನಾವೂ ಆಘಾತಕ್ಕೊಳಗಾದೆವು ಎಂದರು.

 ಮಧ್ಯಾಹ್ನ 3:17 ರ ಹೊತ್ತಿಗೆ ತುರ್ತು ಕರೆಗಳು ಬರಲು ಪ್ರಾರಂಭಿಸಿದವು ಆರು ಮಂದಿ ಮೃತಪಟ್ಟಿದ್ದಾರೆ. ನಾಲ್ವರು ಸ್ಥಳದಲ್ಲೇ ಮತ್ತು ಇಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು NYPD ಆಯುಕ್ತೆ ಜೆಸ್ಸಿಕಾ ಟಿಶ್ ದೃಢಪಡಿಸಿದರು.