* ಭಾರತ್ ಬಯೋಟೆಕ್ ತಯಾರಿಸಿದ ಕೋವಿಡ್ -19 ಲಸಿಕೆ ಕೋವಾಕ್ಸಿನ್ ಪೂರೈಕೆ ಸ್ಥಗಿತ* ಲಸಿಕೆ ಪರಿಣಾಮಕಾರಿಯಾಗಿದೆ, ಯಾವುದೇ ಸುರಕ್ಷತೆಯ ಬಗ್ಗೆ ಭಯ ಬೇಡ* ಭಾರತ್ ಬಯೋಟೆಕ್‌ನಿಂದ ಯಾವುದೇ ಪ್ರತಿಕ್ರಿಯೆ ಇಲ್ಲ

ನವದೆಹಲಿ(ಏ.03): ‘ಕೋವ್ಯಾಕ್ಸಿನ್‌’ ಲಸಿಕೆ ನೀಡುವ ಭಾರತ್‌ ಬಯೋಟೆಕ್‌ಗೆ ಕೊಂಚ ಹಿನ್ನಡೆ ಆಗಿದೆ. ತಪಾಸಣೆ ವೇಳೆ ಲಸಿಕೆಯ ಉತ್ಪಾದನಾ ಗುಣಮಟ್ಟದಲ್ಲಿ ಕೊಂಚ ವ್ಯತ್ಯಾಸ ಕಂಡುಬಂದ ಕಾರಣ, ವಿಶ್ವಸಂಸ್ಥೆಯ ಮೂಲಕ ವಿದೇಶಗಳಿಗೆ ನಡೆಯುತ್ತಿರುವ ಕೋವ್ಯಾಕ್ಸಿನ್‌ ಪೂರೈಕೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಶನಿವಾರ ಸೂಚಿಸಿದೆ.

ಮಾಚ್‌ರ್‍ 14ರಿಂದ ಮಾ.22ರವರೆಗೆ ನಡೆದ ತಪಾಸಣೆ ವೇಳೆ ಕೊಂಚ ಕೊರತೆಗಳು ಕಂಡುಬಂದಿವೆ ಹಾಗೂ ಭಾರತ್‌ ಬಯೋಟೆಕ್‌, ತನ್ನ ಉತ್ಪಾದನಾ ಘಟಕಗಳನ್ನು ಉನ್ನತೀಕರಿಸಬೇಕಿದೆ. ಹೀಗಾಗಿ ಅಲ್ಲಿಯವರೆಗೆ ವಿತರಣೆಗೆ ವಿಶ್ವಸಂಸ್ಥೆ ತಡೆ ನೀಡಬೇಕು. ಈಗಾಗಲೇ ಕೋವ್ಯಾಕ್ಸಿನ್‌ ಖರೀದಿಸಿರುವ ದೇಶಗಳು ‘ಸೂಕ್ತ ಕ್ರಮ’ ಜರುಗಿಸಬೇಕು ಎಂದು ಅದು ತಿಳಿಸಿದೆ. ಆದರೆ ಆ ಸೂಕ್ತ ಕ್ರಮಗಳು ಏನು ಎಂಬುದರ ವಿವರಣೆಯನ್ನು ಅದು ನೀಡಿಲ್ಲ.

ಆದರೆ, ಲಸಿಕೆ ಪರಿಣಾಮಕಾರಿಯಾಗಿದ್ದು, ಅದರ ಸುರಕ್ಷತೆಯಲ್ಲಿ ಯಾವುದೇ ವ್ಯತ್ಯಾಸವಿಲ್ಲ ಎಂದು ಡಬ್ಲ್ಯುಎಚ್‌ಒ ಸ್ಪಷ್ಟಪಡಿಸಿದೆ. ಆದರೂ ಡಬ್ಲ್ಯುಎಚ್‌ಒ ಸೂಚನೆಯ ಕಾರಣ ಲಸಿಕೆ ವಿತರಣೆ ಮೇಲೆ ಕೊಂಚ ಪರಿಣಾಮ ಬೀರಲಿದೆ ಎನ್ನಲಾಗಿದೆ.

ಘಟಕ ಉನ್ನತೀಕರಣ- ಬಯೋಟೆಕ್‌:

ಈ ನಡುವೆ, ಭಾರತ್‌ ಬಯೋಟೆಕ್‌ ಪ್ರತಿಕ್ರಿಯೆ ನೀಡಿದ್ದು, ‘ಲಸಿಕೆ ಪರಿಣಾಮಕಾರಿಯಾಗಿದ್ದು, ಸುರಕ್ಷಿತವಾಗಿದೆ. ಲಸಿಕೆ ಪಡೆದವರ ಸರ್ಟಿಫಿಕೇಟ್‌ಗಳು ಕ್ರಮಬದ್ಧವಾಗೇ ಇರುತ್ತವೆ. ಆದರೆ ಘಟಕಗಳ ಉನ್ನತೀಕರಣ ಬಾಕಿ ಇದ್ದು, ಅದನ್ನು ಪೂರ್ತಿಗೊಳಿಸಲಾಗುವುದು’ ಎಂದು ಸ್ಪಷ್ಟಪಡಿಸಿದೆ

ಕೋವ್ಯಾಕ್ಸಿನ್ ಅನ್ನು ನವೀಕರಿಸಲಾಗುತ್ತಿದೆ
ಆದಾಗ್ಯೂ, WHO ಪರೀಕ್ಷೆಯ ಸಮಯದಲ್ಲಿ, ಲಸಿಕೆಯ ತುರ್ತು ಬಳಕೆಯ ದೃಷ್ಟಿಯಿಂದ ವಿಶ್ವ ಆರೋಗ್ಯ ಸಂಸ್ಥೆ (WHO) ನಡೆಸಿದ ತಪಾಸಣೆಯ ನಂತರ, ಲಸಿಕೆಯನ್ನು ಸುಧಾರಿಸುವ ಮತ್ತು ಅಭಿವೃದ್ಧಿಪಡಿಸುವ ಪ್ರಕ್ರಿಯೆಯ ಕುರಿತು ಸಂಶೋಧನೆ ಪ್ರಸ್ತುತ ಪರಿಸ್ಥಿತಿಗಳು ನಡೆಯುತ್ತಿವೆ.. ಪ್ರಸ್ತುತ ಸಂದರ್ಭಗಳೊಂದಿಗೆ ಬದಲಾಗುತ್ತಿರುವ ಜಾಗತಿಕ ಅವಶ್ಯಕತೆಗಳನ್ನು ಕೋವಾಕ್ಸಿನ್ ಪೂರೈಸುವುದನ್ನು ಇದು ಖಚಿತಪಡಿಸಿಕೊಳ್ಳಬೇಕು.

ಕೋವ್ಯಾಕ್ಸಿನ್ ತೆಗದೆುಕೊಂಡವರಿಗೆ ವಿದೇಶ ಪ್ರಯಾಣಕ್ಕೆ ಇಲ್ಲ ಅನುಮತಿ