Asianet Suvarna News Asianet Suvarna News

Covid-19: ಜಗತ್ತಿನಲ್ಲಿ ಕೋವಿಡ್‌ ಏರುಗತಿಯ ಇಳಿಕೆ: ವಿಶ್ವ ಆರೋಗ್ಯ ಸಂಸ್ಥೆ

ಕಳೆದ ವಾರ ಜಗತ್ತಿನಾದ್ಯಂತ 1.8 ಕೋಟಿಗೂ ಅಧಿಕ ಹೊಸ ಪ್ರಕರಣಗಳು ಪತ್ತೆಯಾಗಿವೆ. ಇದರಿಂದಾಗಿ ಸೋಂಕಿನ ಪ್ರಮಾಣ ಶೇ.20 ರಷ್ಟು ವೃದ್ಧಿಯಾಗಿದೆ. ಆದರೆ ಅದರ ಹಿಂದಿನ ವಾರ ಶೇ.50 ರಷ್ಟು ಪ್ರಕರಣ ಸಂಖ್ಯೆ ಹೆಚ್ಚಿತ್ತು. ಹೀಗಾಗಿ ಪ್ರಕರಣಗಳ ಏರುಗತಿ ಪ್ರಮಾಣ 30 ಪ್ರತಿಶತ ತಗ್ಗಿದಂತಾಗಿದೆ. 
 

WHO says Covid19 Decrease in the world gvd
Author
Bangalore, First Published Jan 20, 2022, 2:45 AM IST

ಜಿನೆವಾ (ಜ.20): ಕಳೆದ ವಾರ ಜಗತ್ತಿನಾದ್ಯಂತ 1.8 ಕೋಟಿಗೂ ಅಧಿಕ ಹೊಸ ಪ್ರಕರಣಗಳು (Covid19 Cases) ಪತ್ತೆಯಾಗಿವೆ. ಇದರಿಂದಾಗಿ ಸೋಂಕಿನ ಪ್ರಮಾಣ ಶೇ.20 ರಷ್ಟು ವೃದ್ಧಿಯಾಗಿದೆ. ಆದರೆ ಅದರ ಹಿಂದಿನ ವಾರ ಶೇ.50ರಷ್ಟು ಪ್ರಕರಣ ಸಂಖ್ಯೆ ಹೆಚ್ಚಿತ್ತು. ಹೀಗಾಗಿ ಪ್ರಕರಣಗಳ ಏರುಗತಿ ಪ್ರಮಾಣ 30 ಪ್ರತಿಶತ ತಗ್ಗಿದಂತಾಗಿದೆ. ಇದು ಒಮಿಕ್ರೋನ್‌ (Omicron) ರೂಪಾಂತರಿ ವೈರಸ್‌ನಿಂದ ಉಲ್ಬಣವಾಗಿದ್ದ ಸೋಂಕು ಪ್ರಮಾಣವು ಇಳಿಕೆ ಆಗುತ್ತಿರುವ ಸಂಕೇತ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ತಿಳಿಸಿದೆ.

ಸಾಂಕ್ರಾಮಿಕ ಕುರಿತ ವಾರದ ವರದಿಯಲ್ಲಿ, ಆಫ್ರಿಕಾ ಹೊರತಾಗಿ ಕಳೆದ ವಾರ ಎಲ್ಲಾ ದೇಶಗಳಲ್ಲಿ ಸೋಂಕು ಕಳೆದ ವಾರ ಏರಿದೆ. ಆಫ್ರಿಕಾದಲ್ಲಿ ಶೇ.33ರಷ್ಟುಇಳಿಕೆ ಕಂಡುಬಂದಿದೆ. ಅದರ ಹಿಂದಿನ ವಾರದಲ್ಲಿ ವಿಶ್ವದಲ್ಲಿ ಶೇ.50 ರಷ್ಟುಸೋಂಕಿನ ಪ್ರಮಾಣ ಹೆಚ್ಚಾಗಿತ್ತು. ಇದು ದಾಖಲೆ ಕೂಡ ಆಗಿತ್ತು. ಆದರೆ ಕಳೆದ ವಾರ ಶೇ.20ರಷ್ಟು  ಮಾತ್ರ ಏರಿದೆ ಎಂದು ಡಬ್ಲ್ಯುಎಚ್‌ಒ ವರದಿ ಹೇಳಿದೆ. ಒಮಿಕ್ರೋನ್‌ನಿಂದ ಅಮೆರಿಕ ಮತ್ತು ಬ್ರಿಟನ್‌ನಲ್ಲಿ ಗರಿಷ್ಠ ಪ್ರಮಾಣಕ್ಕೆ ತಲುಪಿದ್ದ ಸೋಂಕು ಪ್ರಮಾಣ ಅಷ್ಟೇ ವೇಗದಲ್ಲಿ ಇಳಿಕೆಯಾಗುತ್ತಿರುವ ಸೂಚನೆ ಲಭ್ಯವಾಗಿದೆ ಎಂದು ತಿಳಿಸಿದೆ. 

ಆದರೆ, ಸಾವಿನ ಪ್ರಮಾಣ ವಿಶ್ವದಲ್ಲಿ ಕಳೆದ ವಾರದಂತೆಯೇ ಇದೆ. ಒಟ್ಟು 4,500 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ ಎಂದಿದೆ. ಕಳೆದ ವಾರ ದಕ್ಷಿಣ ಏಷ್ಯಾದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಸೋಂಕು ಪತ್ತೆಯಾಗಿದೆ. ಇಲ್ಲಿ ಹೊಸ ಸೋಂಕಿನ ಪ್ರಮಾಣ ಶೇ.145ರಷ್ಟುಹೆಚ್ಚಿದೆ. ಮಧ್ಯ ಪ್ರಾಚ್ಯದಲ್ಲಿ ಶೇ.68ರಷ್ಟುಏರಿಕೆಯಾಗಿದೆ. ಅಮೆರಿಕ ಮತ್ತು ಯುರೋಪ್‌ನಲ್ಲಿ ಶೇ.17 ಮತ್ತು ಶೇ.10ರಷ್ಟು ಏರಿಕೆಯಾಗಿದೆ ಎಂದು ವಿವರಿಸಿದೆ.

Covid Free Countries: ಈ 10 ರಾಷ್ಟ್ರಗಳಲ್ಲಿ ಈವರೆಗೆ ಕೊರೋನಾದ ಒಂದೂ ಪ್ರಕರಣವಿಲ್ಲ!

ಭವಿಷ್ಯ ನುಡಿದ WHO ವಿಜ್ಞಾನಿಗಳು: ಕಳೆದ ಎರಡು ವರ್ಷಗಳಿಂದ ಜಗತ್ತನ್ನು ಕಾಡುತ್ತಿರುವ ಮಹಾಮಾರಿ ಕೊರೊನಾ ಸಾಂಕ್ರಾಮಿಕವು 2022 ರ ವೇಳೆಗೆ ಕೊನೆಗೊಳ್ಳುವ ನಿರೀಕ್ಷೆಯಿದೆ ಎಂದು WHO ವಿಜ್ಞಾನಿಗಳು ಭವಿಷ್ಯ ನುಡಿದಿದ್ದಾರೆ. 100 ಕ್ಕೂ ಹೆಚ್ಚು ವಿಶ್ವ ಆರೋಗ್ಯ ಸಂಸ್ಥೆಯ ವಿಜ್ಞಾನಿಗಳು ಕೊರೊನಾ ವೈರಸ್‌ನ ಭವಿಷ್ಯದ ಬಗ್ಗೆ ಪ್ರಮುಖ ಮುನ್ಸೂಚನೆಗಳನ್ನು ನೀಡಿ, ವರದಿಯೊಂದನ್ನು ತಯಾರಿಸಿದ್ದಾರೆ. 

2022 ರ ವೇಳೆಗೆ ಕೊರೊನಾದಿಂದ ಸಾಯುವವರ ಸಂಖ್ಯೆ ಶೂನ್ಯವಾಗಿರುತ್ತದೆ. 2022ರ ಸಮಯದಲ್ಲಿ ಪೂರ್ತಿ ನಿರ್ಮೂಲನೆಯಾಗುವುದಿಲ್ಲ, ಆದರೆ ಸಾಂಕ್ರಾಮಿಕ ರೋಗವು ಅಂತ್ಯವಾಗುತ್ತದೆ. ನಂತರದ ದಿನಗಳಲ್ಲಿ ಸಾಂಕ್ರಾಮಿಕ ರೋಗವು ಜ್ವರ-ಶೀತ ಕಾಯಿಲೆಯಂತೆಯೇ ಇರುತ್ತದೆ ಎಂದು ತನ್ನ ವರದಿಯಲ್ಲಿ ವಿಜ್ಞಾನಿಗಳ ತಂಡ ಉಲ್ಲೇಖಿಸಿದೆ.  2022 ರಲ್ಲಿ ಕೊರೊನಾದಂತಹ ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ಹಲವಾರು ಔಷಧಿಗಳನ್ನು ಅಭಿವೃದ್ಧಿಪಡಿಸಲಾಗುವುದು.ಇನ್ನು 3-4 ತಿಂಗಳಲ್ಲಿ ನೂರಾರು ಕೊರೊನಾ ಔಷಧಗಳು ಮಾರುಕಟ್ಟೆಗೆ ಬರಲಿದೆ. 

2022 ರ ಅಂತ್ಯದ ವೇಳೆಗೆ ಕೋವಿಡ್-19 ಮಹಾಮಾರಿಯು 2018 ರಲ್ಲಿ ಸ್ಪ್ಯಾನಿಷ್ ಜ್ವರ ಮತ್ತು 2009 ರಲ್ಲಿ ಹಂದಿ ಜ್ವರದಂತೆಯೇ  ನಿಧಾನವಾಗಿ ಮರೆಯಾಗಲಿದೆ. 99% ರೋಗಿಗಳು ಮನೆಯಲ್ಲಿಯೇ ಔಷಧಿ ಪಡೆದು ಗುಣಮುಖರಾಗಲಿದ್ದಾರೆ. ಮುಂದಿನ ದಿನಗಳಲ್ಲಿ ಜಗತ್ತು ಮಾಸ್ಕ್ ಮುಕ್ತವಾಗಲಿದೆ, ಆದರೆ ಅನಾರೋಗ್ಯದ ಜನರು  ಮಾಸ್ಕ್ ಧರಿಸಬೇಕಾಗುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ವಿಜ್ಞಾನಿಗಳ ತಂಡ ತಿಳಿಸಿದೆ.

Omicron Variant ಕಂಡು ಕೇಳರಿಯದ ವೇಗದಲ್ಲಿ ಹಬ್ಬುತ್ತಿದೆ ಓಮಿಕ್ರಾನ್

ಈ ಮಧ್ಯೆ ಸ್ಪುಟ್ನಿಕ್‌ - v (Sputnik V) ಲಸಿಕೆ ರೂಪಾಂತರಿ ಕೊರೊನಾ ಒಮಿಕ್ರಾನ್ (Omicron) ವಿರುದ್ಧ ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ ಹಾಗೂ ಒಮಿಕ್ರಾನ್ ಅನ್ನು ತಟಸ್ಥಗೊಳಿಸುತ್ತದೆ ಎಂದು  ರಷ್ಯಾದ  ನೇರ ಹೂಡಿಕೆ ನಿಧಿ ( Russian Direct Investment Fund) ಹೇಳಿದೆ.  ಮಾತ್ರವಲ್ಲ 'ಸ್ಪುಟ್ನಿಕ್ ಲೈಟ್' (Sputnik Light)ಬೂಸ್ಟರ್ ಡೋಸ್ ನೀಡುವ ಮೂಲಕ ಇದನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮಾಡಬಹುದು ಮತ್ತು ದೇಹದಲ್ಲಿ ಶಕ್ತಿಯನ್ನು ಇದು ಹೆಚ್ಚಿಸುತ್ತದೆ ಎಂದಿದೆ. 

Follow Us:
Download App:
  • android
  • ios