Asianet Suvarna News Asianet Suvarna News

ಆಘಾತಕಾರಿ ಸುದ್ದಿ ಕೊಟ್ಟ ವಿಶ್ವ ಆರೋಗ್ಯ ಸಂಸ್ಥೆ!

* ಯುರೋಪ್‌, ಅಮೆರಿಕದಲ್ಲಿ ಸೋಂಕು ಮತ್ತೆ ಏರಿಕೆ

* ವಿಶ್ವದಲ್ಲಿ 3ನೇ ಅಲೆ ಶುರು: ಡಬ್ಲ್ಯುಎಚ್‌ಒ

* 111 ದೇಶಗಳಲ್ಲಿ ಡೆಲ್ಟಾತೀವ್ರವಾಗಿ ಹಬ್ಬಿ ಆತಂಕ

WHO issues warning We are now in the early stages of a third wave pod
Author
Bangalore, First Published Jul 16, 2021, 7:17 AM IST

ಜಿನೆವಾ(ಜು.16): ಜಗತ್ತಿನಾದ್ಯಂತ ಕೊರೋನಾ ವೈರಸ್‌ನ ರೂಪಾಂತರಿಯಾದ ಡೆಲ್ಟಾವೈರಸ್‌ ತೀವ್ರ ಪ್ರಮಾಣದಲ್ಲಿ ಹರಡುತ್ತಿದೆ. ದುರದೃಷ್ಟವಶಾತ್‌ ನಾವೀಗ ಕೋವಿಡ್‌ನ 3ನೇ ಅಲೆಯ ಆರಂಭಿಕ ಹಂತದಲ್ಲಿದ್ದೇವೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಮುಖ್ಯಸ್ಥ ಟೆಡ್ರೋಸ್‌ ಅಧನೋಮ್‌ ಘೇಬ್ರೆಯೇಸಸ್‌ ಹೇಳಿದ್ದಾರೆ.

ಇತ್ತೀಚಿನ ತಿಂಗಳುಗಳಲ್ಲಿ ಯುರೋಪ್‌ ಮತ್ತು ಉತ್ತರ ಅಮೆರಿಕದ ದೇಶಗಳಲ್ಲಿ ಲಸಿಕೆ ನೀಡುವ ಪ್ರಮಾಣ ಹೆಚ್ಚಾಗಿದ್ದರಿಂದ ಹೊಸ ಕೋವಿಡ್‌ ಪ್ರಕರಣಗಳು ಹಾಗೂ ಸಾವುಗಳ ಸಂಖ್ಯೆ ಇಳಿಕೆಯಾಗುತ್ತಿತ್ತು. ಆದರೆ ಈಗ ಮತ್ತೆ ಏರಿಕೆಯಾಗುತ್ತಿದೆ. ಜೊತೆಗೆ ವೈರಸ್‌ ಇನ್ನಷ್ಟುರೂಪಾಂತರ ಹೊಂದುತ್ತಿದೆ. ಹೀಗಾಗಿ ಹೆಚ್ಚೆಚ್ಚು ಹರಡಬಹುದಾದ ಹೊಸ ವೈರಸ್‌ಗಳು ಸೃಷ್ಟಿಯಾಗುತ್ತಿವೆ. ಡೆಲ್ಟಾವೈರಸ್‌ ಈಗ 111 ದೇಶಗಳಲ್ಲಿದೆ. ಶೀಘ್ರದಲ್ಲೇ ಇದು ಅತ್ಯಧಿಕವಾಗಿ ಹರಡಿದ ಕೊರೋನಾ ರೂಪಾಂತರಿಯಾಗಲಿದೆ ಅಥವಾ ಈಗಾಗಲೇ ಆಗಿದೆ ಎಂದು ಅಧನೋಮ್‌ ಆತಂಕ ವ್ಯಕ್ತಪಡಿಸಿದ್ದಾರೆ.

"

ಲಸಿಕೆ ಹಂಚಿಕೆಯಲ್ಲಿ ಜಗತ್ತಿನಲ್ಲಿ ಬಹಳ ತಾರತಮ್ಯವಿದೆ. ಜೊತೆಗೆ ಜೀವ ಉಳಿಸುವ ವಸ್ತುಗಳ ಲಭ್ಯತೆಯಲ್ಲೂ ಅಸಮಾನತೆಯಿದೆ. ಹೀಗಾಗಿ ಜಗತ್ತಿನಲ್ಲಿ ಎರಡು ವಿಧದ ಕೋವಿಡ್‌ಪೀಡಿತ ದೇಶಗಳು ಸೃಷ್ಟಿಯಾಗುತ್ತಿವೆ. ಒಂದು, ಹೆಚ್ಚು ಲಸಿಕೆ ಲಭ್ಯವಿರುವ ಹಾಗೂ ನಿರ್ಬಂಧಗಳನ್ನು ತೆರವುಗೊಳಿಸುತ್ತಿರುವ ದೇಶಗಳು. ಇನ್ನೊಂದು, ಲಸಿಕೆ ಲಭ್ಯವಿಲ್ಲದೆ ವೈರಸ್‌ನ ಕಪಿಮುಷ್ಟಿಗೆ ಸಿಲುಕಿರುವ ದೇಶಗಳು. ಈ ವರ್ಷಾಂತ್ಯದೊಳಗೆ ಕೊನೆಯ ಪಕ್ಷ ಜಗತ್ತಿನ ಶೇ.40ರಷ್ಟುಜನರಿಗಾದರೂ ಲಸಿಕೆ ಸಿಗುವಂತೆ ನೋಡಿಕೊಳ್ಳಬೇಕು ಎಂದು ಒತ್ತಿ ಹೇಳಿದ್ದಾರೆ.

Follow Us:
Download App:
  • android
  • ios