Asianet Suvarna News Asianet Suvarna News

ಶೇಖ್ ಹಸೀನಾ ರಾಜೀನಾಮೆಗೆ ಕಾರಣ ಇದೇ ನಾಹಿದ್ ಇಸ್ಲಾಂ, ಯಾರು ಈ ವಿದ್ಯಾರ್ಥಿ ಸಂಘಟನೆಯ ನಾಯಕ?

ಯಾವಾಗಲೂ ಹಣೆ ಮೇಲೆ ಬಾಂಗ್ಲಾದೇಶ ಧ್ವಜದ ಪಟ್ಟಿಯನ್ನು ಕಟ್ಟಿಕೊಂಡು ಕಾಣಿಸಿಕೊಳ್ಳುವ ನಾಹಿದ್ ಇಸ್ಲಾಂ, ಢಾಕಾ ವಿಶ್ವವಿದ್ಯಾಲಯದನ  ಸಮಾಜಶಾಸ್ತ್ರದ ವಿದ್ಯಾರ್ಥಿ.

Who is Nahid Islam daka university sociology student leader broke Sheikh Hasina s grip on Bangladesh mrq
Author
First Published Aug 7, 2024, 12:16 PM IST | Last Updated Aug 7, 2024, 1:25 PM IST

ಢಾಕಾ: ಬಾಂಗ್ಲಾದೇಶದಲ್ಲಿನ ಹಿಂಸೆ ನಿಲ್ಲುವ ಲಕ್ಷಣಗಳು ಸದ್ಯಕ್ಕೆ ಕಾಣಿಸುತ್ತಿಲ್ಲ. ನಗರದ ಪ್ರಮುಖ ರಸ್ತೆಗಳಲ್ಲಿ ನಿಲ್ಲಿಸಲಾಗಿದ್ದ ವಾಹನಗಳು ಬೆಂಕಿಗಾಹುತಿಯಾಗಿವೆ. ಪ್ರಧಾನಿ ಕಚೇರಿ, ನಿವಾಸ ಸೇರಿದಂತೆ ಅಂತರಾಷ್ಟ್ರೀಯ ಹೋಟೆಲ್‌ಗಳ ಮೇಲೆಯೂ ಉದ್ರಿಕ್ತರು ದಾಳಿ ನಡೆಸುತ್ತಿದ್ದಾರೆ. ಢಾಕಾ ನಗರದಲ್ಲಿಯೇ 135ಕ್ಕೂ ಅಧಿಕ ಸಾವುಗಳಾಗಿರುವ ಬಗ್ಗೆ ವರದಿಗಳಾಗುತ್ತಿವೆ. ಇತ್ತ ಪ್ರಧಾನಿ ಶೇಖ್ ಹಸೀನಾ ದೇಶ ತೊರೆದಿದ್ದು, ಶಾಂತಿ ಕಾಪಾಡುವಂತೆ ಮಿಲಟ್ರಿ ಮನವಿ ಮಾಡಿಕೊಂಡಿದೆ. ಈ ಎಲ್ಲಾ ಘಟನೆಗಳ ಹಿಂದೆ ವಿದ್ಯಾರ್ಥಿ ನಾಯಕ ನಾಹಿದ್ ಇಸ್ಲಾಂ ಹಾಗೂ ಆತನ ಸಹಚರರಿದ್ದಾರೆ ಎಂದು ಹೇಳಲಾಗುತ್ತಿದೆ.

ಬಾಂಗ್ಲಾದೇಶದಲ್ಲಿ ಶೇಖ್ ಹಸೀನಾ ಸರ್ಕಾರ ಪತನದ ಹಿಂದೆ ಜಮಾತ್-ಇ-ಇಸ್ಲಾಮಿ ಸಂಘಟನೆಯ ಪಾತ್ರವಿದೆ. ಕಳೆದ ಎರಡು ವರ್ಷಗಳಿಂದ ಬಾಂಗ್ಲಾದೇಶದ ವಿವಿಧ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿ ಶಿಬಿರಗಳಲ್ಲಿ ಹಲವರು ಇದರ ಕಾರ್ಯಕರ್ತರಾಗಿ ನೋಂದಣಿ ಮಾಡಿಕೊಂಡಿದ್ದರು. ಇಲ್ಲಿಂದಲೇ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳನ್ನು ಪ್ರಚೋದನೆಗೊಳಿಸುವ ಪ್ರಕ್ರಿಯೆ ಆರಂಭವಾಯ್ತು. ಕಳೆದ ಎರಡು ತಿಂಗಳಿನಿಂದ ರಸ್ತೆಗಿಳಿದು ಪ್ರತಿಭಟನೆ ನಡೆಸುತ್ತಿರುವ ಜನರೆಲ್ಲಾ ಇದೇ ಸಂಘಟನೆಗೆ ಸೇರಿದವರಾಗಿದ್ದಾರೆ. ಈ ಸಂಘಟನೆಯ ಮೂವರು ಮುಖ್ಯ ನಾಯಕರಿಂದಲೇ ಹಸೀನಾ ಶೇಖ್ ದೇಶ ತೊರೆಯುವ ಸಂದರ್ಭ ಬಂದಿದೆ. ಈ ಸಂಘಟನೆಯ ಮುಖ್ಯಸ್ಥನಾಗಿರುವ ನಾಹಿದ್ ಇಸ್ಲಾಂ ಯಾರು ಎಂದು ನೋಡೋಣ ಬನ್ನಿ. 

ಯಾವಾಗಲೂ ಹಣೆ ಮೇಲೆ ಬಾಂಗ್ಲಾದೇಶ ಧ್ವಜದ ಪಟ್ಟಿಯನ್ನು ಕಟ್ಟಿಕೊಂಡು ಕಾಣಿಸಿಕೊಳ್ಳುವ ನಾಹಿದ್ ಇಸ್ಲಾಂ, ಢಾಕಾ ವಿಶ್ವವಿದ್ಯಾಲಯದ  ಸಮಾಜಶಾಸ್ತ್ರದ ವಿದ್ಯಾರ್ಥಿ. ಮೃದುವಾಗಿಯೇ ಮಾತನಾಡುವ ನಾಹಿದ್, ತನ್ನ ಮಾತುಗಳು ಹಾಗೂ ಕಾರ್ಯಕ್ಷಮತೆಯಿಂದಲೇ 15 ವರ್ಷಗಳಿಂದ ಅಧಿಕಾರದಲ್ಲಿದ್ದ ಶೇಖ್ ಹಸೀನಾ ದೇಶ ತೊರೆಯುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾನೆ. 26 ವರ್ಷದ ನಾಹಿದ್ ಇಸ್ಲಾಂ ಕೆಲ ದಿನಗಳ ಹಿಂದೆಯಷ್ಟೇ ಪ್ರತಿಭಟನೆ ಆರಂಭಿಸಿದ್ದು,  ನಂತರ ಇದು 'ಶೇಖ್ ಹಸೀನಾ ಹಟಾವೋ' ಎಂದು ಬದಲಾಯ್ತು. ಜುಲೈ ಮಧ್ಯ ವಾರದಲ್ಲಿ ಪೊಲೀಸರು ಢಾಕಾ ವಿಶ್ವವಿದ್ಯಾಲಯದ ಹಲವು ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದುಕೊಂಡಿದ್ದರು. ಈ ಘಟನೆ ಬಳಿಕ ಢಾಕಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಪ್ರತಿಭಟನೆಯ ಮುನ್ನಲೆಗೆ ಬಂದರು. 

1998ರಂದು ಡಾಕಾದಲ್ಲಿ ಜನಿಸಿದ ನಾಹಿದ್ ಇಸ್ಲಾಂ ವಿವಾಹಿತನಾಗಿದ್ದು, ಈತನಿಗೆ ಓರ್ವ ಕಿರಿಯ ಸೋದರನಿದ್ದಾನೆ.  ನಾಹಿದ್ ತಂದೆ ಶಿಕ್ಷಕರಾಗಿದ್ದು, ತಾಯಿ ಗೃಹಿಣಿ. ದೇಶದಲ್ಲಿ ಬದಲಾವಣೆ ತರಲು ಅಣ್ಣ ನಾಹಿದ್ ಬೇಕು ಎಂದು ಕಿರಿಯ ಸೋದರ ನಾಕಿದ್ ಹೇಳಿದ್ದಾನೆ. ಪೊಲೀಸರು ಸೋದರನನ್ನು ಅಕ್ರಮವಾಗಿ ಬಂಧಿಸಿ, ಆತನ ಮೇಲೆ ಹಲ್ಲೆ ನಡೆಸಿ, ಅರೆಪ್ರಜ್ಞಾಸ್ಥಿತಿಯಲ್ಲಿದ್ದಾಗ ರಸ್ತೆಗೆ ಎಸೆದಿದ್ದರು. ಆದ್ರೂ ಆತ ತನ್ನ ಸಂಘರ್ಷವನ್ನು ಮುಂದುವರಿಸಿದ್ದಾನೆ. ಈ ಹೋರಾಟದಲ್ಲಿ ಸೋಲು ಒಪ್ಪಿಕೊಳ್ಳಲ್ಲ ಎಂಬ ವಿಶ್ವಾಸ ನಮಗೆಲ್ಲರಿಗೂ ಇದೆ ಎಂದು ನಾಕಿದ್ ಹೇಳುತ್ತಾನೆ. 

ಬಾಂಗ್ಲಾ ಪ್ರಧಾನಿ ಮನೆಯಲ್ಲಿ ಪ್ರತಿಭಟನಾಕಾರರ ದರೋಡೆ, ಶೇಖ್‌ ಹಸಿನಾರ 'ಬ್ರಾ..' ಕೂಡ ಬಿಡದ ಲೂಟಿಕೋರರು!

ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಬಾಂಗ್ಲಾದೇಶ ಹಿಂಸಾಚಾರದಲ್ಲಿ 400ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ. ಇದರಲ್ಲಿ ಬಹುತೇಕರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಾಗಿದ್ದಾರೆ. ನಾಹಿದ್ ಇಸ್ಲಾಂ ಸೇರಿದಂತೆ ಹಲವು ವಿದ್ಯಾರ್ಥಿ ಸಂಘಟನೆಯ ನಾಯಕರನ್ನು ಸೇನಾ ಮುಖ್ಯಸ್ಥ ವಕರ್-ಉಜ್-ಜಮಾನ್ ಭೇಟಿಗೆ ಸಮಯ ನಿಗದಿಯಾಗಿತ್ತು. ಇದಕ್ಕೂ ಮುನ್ನವೇ ಶೇಖ್ ಹಸೀನಾ ರಾಜೀನಾಮೆ ಘೋಷಣೆ ಮಾಡಿದ್ದರು. ಪ್ರಧಾನಿ ಸ್ಥಾನಕ್ಕೆ ನೊಬೆಲ್ ಪುರಸ್ಕೃತ ಮುಹ್ಮದ್ ಯುನುಸ್ ಹೆಸರನ್ನು ವಿದ್ಯಾರ್ಥಿ ಸಂಘಟನೆಗಳು ಸೂಚಿಸಿವೆ ಎನ್ನಲಾಗಿದೆ. 

ಶೇಖ್ ಹಸೀನಾ ರಾಜೀನಾಮೆ ಬಳಿಕ ಪ್ರತಿಕ್ರಿಯೆ ನೀಡಿರುವ ನಾಹಿದ್ ಇಸ್ಲಾಂ, ನಾವು ಶಿಫಾರಸ್ಸು ಮಾಡಿದವರೆ ಸರ್ಕಾರ ರಚಿಸಬೇಕು, ಬೇರೆ ಯಾವ ಸರ್ಕಾರವನ್ನು ನಾವು ಒಪ್ಪಿಕೊಳ್ಳುವದಿಲ್ಲ ಎಂದಿದ್ದಾರೆ. ದೇಶಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದವರ ಕುಟುಂಬಗಳಿಗೆ ನಾವು ಅನ್ಯಾಯ ಮಾಡಲ್ಲ. ಜೀವನ ಭದ್ರತೆ, ಸಾಮಾಜಿಕ ನ್ಯಾಯ ಮತ್ತು ಹೊಸ ರಾಜಕೀಯ ಚಿತ್ರಣದೊಂದಿಗೆ ಹೊಸ ಪ್ರಜಾಪ್ರಭುತ್ವವುಳ್ಳ ಬಾಂಗ್ಲಾದೇಶವನ್ನು ರಚನೆ ಮಾಡತ್ತೇವೆ. ಮತ್ತೊಮ್ಮೆ ಎಂದಿಗೂ ಈ ಸ್ಥಿತಿಗೆ ನಮ್ಮ ದೇಶ ಮರಳದಂತೆ ನಾವೆಲ್ಲರೂ ನೋಡಿಕೊಳ್ಳಬೇಕಿದೆ.  ಹಿಂದೂ ಅಲ್ಪಸಂಖ್ಯಾತರು ಮತ್ತು ಅವರ ಪೂಜಾ ಸ್ಥಳಗಳನ್ನು ರಕ್ಷಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

ಪತ್ನಿಯನ್ನು ಬಾಂಗ್ಲಾ ಪ್ರಧಾನಿ ಮಾಡುತ್ತೇನೆ, ಶೇಕ್ ಹಸೀನಾ ಸೀರೆ ಸೂಟ್ ಕದ್ದವನ ವೀರಾವೇಶದ ಮಾತು!

Latest Videos
Follow Us:
Download App:
  • android
  • ios