ಕೊರೋನಾ ವೈರಸ್ ಮಹಾಮಾರಿ ವಕ್ಕರಿಸಿದ ಬಳಿಕ ಆಯಾ ದೇಶದ ಆರೋಗ್ಯ ಸಚಿವಾಲಯ ಅಂಕಿ ಅಂಶ ಬಿಡುಗಡೆ ಮಾಡುತ್ತಿದೆ. ಇದರೊಂದಿಗೆ ಹೊಸ ಸಂಶೋಧನೆ, ವೈರಸ್ ತೀವ್ರತೆ ಕುರಿತು ವಿಶ್ವ ಆರೋಗ್ಯ ಸಂಸ್ಥೆ ಹೊಸ ಹೊಸ ವರದಿ ಬಿಡುಗಡೆ ಮಾಡುತ್ತಿದೆ. ಇದೀಗ ಯುವಕರಲ್ಲಿ ಕೊರೋನಾ ವೈರಸ್ ಹೆಚ್ಚಾಗುತ್ತಿರುವ ಕುರಿತು ವಿಶ್ವ ಆರೋಗ್ಯ ಸಂಸ್ಥೆ ತೀವ್ ಕಳವಳ ವ್ಯಕ್ತಪಡಿಸಿದೆ.

ಜಿನೆವಾ(ಆ.18): ಕೊರೋನಾ ವೈರಸ್ ಹರಡುವಿಕೆ ಜನರಲ್ಲಿ ಮತ್ತಷ್ಟು ಆತಂಕ ತರುತ್ತಿದೆ. ಇದೀಗ ವಿಶ್ವ ಆರೋಗ್ಯ ಸಂಸ್ಥೆ(WHO) ಹೊಸ ಅಂಕಿ ಅಂಶ ತೆರೆದಿಟ್ಟಿದೆ. ಇದು ಮತ್ತಷ್ಟು ಆತಂಕ ತರುವಂತಿದೆ. WHO ಪ್ರಕಾರಣ ಸದ್ಯ ಕೊರೋನಾ 20, 30, 40ರ ಆಸುಪಾಸಿನ ಯುವಕರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ ಎಂದು ವರದಿ ಮಾಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕರ್ನಾಟಕದ ಬಿಜೆಪಿ ಶಾಸಕಿಗೆ ಕೊರೋನಾ ದೃಢ.

ಈ ಯುವಕರಿಗೆ ಕೊರೋನಾ ವೈರಸ್ ತಗುಲಿರುವ ಕುರಿತು ಅವರಿಗೆ ಅರಿವೇ ಇರುವುದಿಲ್ಲ. 20,30,40ರ ಆಸುಪಾಸಿನಲ್ಲಿರುವವರಲ್ಲಿ ಸಾಮಾನ್ಯವಾಗಿ ರೋಗ ನಿರೋಧಕ ಶಕ್ತಿ ಹೆಚ್ಚಿದೆ. ಇಷ್ಟೇ ಅಲ್ಲ, ಈ ಗುಂಪು ಕೆಲಸ ಕಾರ್ಯಗಳು ಸೇರಿದಂತೆ ಹಲವು ಕಾರಣಗಳಿಂದ ಅನಿವಾರ್ಯವಾಗಿ ಮನೆಯಿಂದ ಹೊರಬರಬೇಕಿದೆ. ಇದರಿಂದ ಈ ವಯಸ್ಸಿನವರಲ್ಲಿ ಹೆಚ್ಚು ಕೊರೋನಾ ವೈರಸ್ ಕಾಣಿಸಿಕೊಳ್ಳುತ್ತಿದೆ.

ಒತ್ತಡಕ್ಕೆ ಮಣಿದ ಬಿಎಸ್‌ವೈ, ಗಣೇಶ್ ಹಬ್ಬ ಆಚರಣೆಗೆ ರೂಲ್ಸ್ ಚೇಂಜ್...!

ಈ ವಯಸ್ಸಿನ ಯುವಕರಲ್ಲಿ ಕೊರೋನಾ ವೈರಸ್ ಹೆಚ್ಚಿನ ಪರಿಣಾಮ ಬೀರುತ್ತಿಲ್ಲ. ಆದರೆ ಇದೇ ಗುಂಪು ಹಿರಿಯರು, ಮಕ್ಕಳ ಸಂಪರ್ಕಕ್ಕೆ ಬರುತ್ತಿರುವ ಕಾರಣ ಪರಿಸ್ಥಿತಿ ಮತ್ತಷ್ಟು ಬಿಗಾಡಾಯಿಸುತ್ತಿದೆ ಎಂದು WHO ಹೇಳಿದೆ. ಈ ಗುಂಪು ಇತರರಲ್ಲಿ ಕೊರೋನಾ ವೈರಸ್ ಹರಡುವ ಸಾಧ್ಯತೆಗಳು ಹೆಚ್ಚು. ಹೀಗಾಗಿ ಕೊರೋನಾ ಸೋಂಕಿನಿಂದ ತೀವ್ರ ಸಮಸ್ಯೆಯಾಗಿ ಆಸ್ಪತ್ರೆ ದಾಖಲಾದರೂ, ಕೊರೋನಾ ವಕ್ಕರಿಸಿದ ರೀತಿ ಅಧಿಕಾರಿಗಳಿಗೆ ಅರ್ಥವಾಗುತ್ತಿಲ್ಲ ಎಂದು WHO ಹೇಳಿದೆ.

ಕೊರೋನಾ ವೈರಸ್ ಅಬ್ಬರಕ್ಕೆ ವಿಶ್ವದಲ್ಲಿ 7,70,000 ಮಂದಿ ಸಾವನ್ನಪ್ಪಿದ್ದಾರೆ. ಇನ್ನು 22 ಮಿಲಿಯನ್ ಮಂದಿಯಲ್ಲಿ ಕರೋನಾ ವೈರಸ್ ಕಾಣಿಸಿಕೊಂಡಿದೆ. ಕೊರೋನಾ ವೈರಸ್ ಲಸಿಕೆ ಕುರಿತು ವಿಶ್ವ ಆರೋಗ್ಯ ಸಂಸ್ಥೆ ತೀವ್ರ ನಿಘಾ ವಹಿಸಿದೆ. ಸಂಶೋಧನೆ, ಅಧ್ಯಯನ ವರದಿಗಳ ಮಹತ್ವ ಮಾಹಿತಿಗಳನ್ನು ಲಸಿಕೆ ಸಂಶೋಧಕರಿಗೆ ನೀಡುತ್ತಿದೆ ಎಂದು WHO ಹೇಳಿದೆ.