Asianet Suvarna News Asianet Suvarna News

ಚೀನಾಗೆ ಖಡಕ್ ವಾರ್ನಿಂಗ್; ಕೋವಿಡ್ ಮೂಲ ಪತ್ತೆಗೆ ಸಹಕರಿಸಲು ಸೂಚಿಸಿದ WHO!

  • ಕೊರೋನಾ ಮೂಲ ಪತ್ತೆಗೆ ತನಿಖೆ ಚುರುಕು
  • ಚೀನಾಗೆ ವಿಶ್ವ ಆರೋಗ್ಯ ಸಂಸ್ಥೆಯಿಂದ ಖಡಕ್ ವಾರ್ನಿಂಗ್
  • ಜಿ7 ಶೃಂಗಸಭೆಯಲ್ಲಿ WHO ಖಡಕ್ ಮಾತು
WHO chief tedros Ghebreyesu ask china to cooperate investigation on covid 19 origins ckm
Author
Bengaluru, First Published Jun 13, 2021, 3:27 PM IST

ಜಿನೆವಾ(ಜೂ.13): ಕೊರೋನಾ ವೈರಸ್ ವಕ್ಕರಿಸಿದ ಬಳಿಕ ರಾಷ್ಟ್ರಗಳು ಪಡಬಾರದ ಸಾವಲುಗಳನ್ನು ಎದುರಿಸುತ್ತಿದೆ. ಈ ಸಾಂಕ್ರಾಮಿಕ ಪಿಡುಗಿಗೆ ಮೂಲ ಕಾರಣ ಯಾರು? ಚೀನಾದ ವುಹಾನ್‌ನಿಂದ ಆಗಮಿಸಿದ  ಈ ವೈರಸ್ ಹುಟ್ಟಿದ್ದು ಎಲ್ಲಿ? ಅನ್ನೋ ಪ್ರಶ್ನೆಗಳು ತೀವ್ರಗೊಳ್ಳುತ್ತಿದೆ. ಈ ಸಂಕಷ್ಟಕ್ಕೆ ಚೀನಾ ಕಾರಣ ಅನ್ನೋ ಆರೋಪಗಳು ಬಲವಾಗುತ್ತಿದೆ. ಆದರೆ ಚೀನಾ ನಿರಾಕರಿಸುತ್ತಲೇ ಬಂದಿದೆ. ಚೀನಾಗೆ ವಿಶ್ವ ಆರೋಗ್ಯ(WHO) ಸಂಸ್ಥೆ ಕೂಡ ಬೆನ್ನೆಲುಬಾಗಿ ನಿಂತಿವೆ ಅನ್ನೋ ಆರೋಪಗಳಿವೆ. ಇದೀಗ ಒತ್ತಡ ಹೆಚ್ಚಾಗುತ್ತಿದ್ದಂತೆ ವಿಶ್ವ ಆರೋಗ್ಯ ಸಂಸ್ಥೆ, ವೈರಸ್ ಮೂಲ ಪತ್ತೆಗೆ ಸಹಕರಿಸುವಂತೆ ಚೀನಾಗೆ ಖಡಕ್ ಸೂಚನೆ ನೀಡಿದೆ.

WHO ಕಣ್ಣಾಮುಚ್ಚಾಲೆ ಆಟದ ಹಿಂದೆ ಚೀನಾ ಕೈವಾಡ; ಅಮೆರಿಕ NSA ಅಧಿಕಾರಿ!.

ಚೀನಾ ವೈರಸ್, ವುಹಾನ್ ವೈರಸ್ ಎಂದು ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳು ಬಹಿರಂಗ ಹೇಳಿಕೆ ನೀಡಿದಾಗ, WHO ಮಧ್ಯ ಪ್ರವೇಶಿಸಿ ಆರೋಪಗಳನ್ನು ಬೇರೆಡೆಗೆ ತಿರುಗಿಸಿತ್ತು. ಆದರೆ ಇದೀಗ ಅದೇ WHO, ಚೀನಾಗೆ ತನಿಖೆಗೆ ಸಹಕರಿಸುವಂತೆ ಸೂಚನೆ ನೀಡಿದೆ. ಜಿ7 ಶೃಂಗಸಭೆಯ ವಿಡಿಯೋ ಕಾನ್ಫೆರೆನ್ಸ್‌ನಲ್ಲಿ WHO ಮುಖ್ಯಸ್ಥ ಟೆಡ್ರೋಸ್ ಅಧಾನಮ್ ಈ ಕುರಿತು ಖಡಕ್ ಸೂಚನೆ ನೀಡಿದ್ದಾರೆ.

ಕೊರೋನಾ ವೈರಸ್ ಮೂಲ ಪತ್ತೆಗೆ ತನಿಖೆ ತೀವ್ರಗೊಳ್ಳುತ್ತಿದೆ. ಹೀಗಾಗಿ ತನಿಖೆಗೆ ಸಹಕರಿಸಬೇಕು. ಜೊತೆ ಪಾರದರ್ಶಕತೆ ಅವಶ್ಯಕತೆ ಇದೆ. ಕೆಲ ಅಂಕಿ ಅಂಶಗಳು, ವರದಿಗಳಲ್ಲಿ ಪಾರದರ್ಶಕತೆ ಕಾಣುತ್ತಿಲ್ಲ. ಈ ಕುರಿತು ಚೀನಾ ಸಹಕಾರ ಅತ್ಯಗತ್ಯ ಎಂದು ಟೆಡ್ರೋಸ್ ಹೇಳಿದ್ದಾರೆ.

3 ರೂಪಾಂತರಿ ಪೈಕಿ 1 ಮಾತ್ರ ಕಳವಳಕಾರಿ: ಡಬ್ಲ್ಯುಎಚ್‌ಒ

ಕೊರೋನಾ ವೈರಸ್ ಮೂಲ ಪತ್ತೆ ಮಾಡುವಂತೆ ಅಮೇರಿಕ ಅಧ್ಯಕ್ಷ ಜೋ ಬೈಡನ್ ತನಿಖೆಗೆ ಆದೇಶಿಸಿದ್ದಾರೆ. ಹಲವು ರಾಷ್ಟ್ರಗಳು ಜಂಟಿಯಾಗಿ ತನಿಖೆ ನಡೆಸುತ್ತಿದೆ.  ಕೆಲ ವರದಿಗಳು, ಅಂಕಿ ಅಂಶಗಳು ಕೊರೋನಾ ಮೂಲ ಚೀನಾ ಎಂದು ಹೇಳುತ್ತಿದೆ. 

Follow Us:
Download App:
  • android
  • ios