Asianet Suvarna News Asianet Suvarna News

ಚಂದ್ರಯಾನ-3 ಚಂದ್ರನ ದಕ್ಷಿಣ ಧ್ರುವಕ್ಕೆ ಹೋಗೇ ಇಲ್ಲ: ಚೀನಾ ಆರೋಪ

 ಭಾರತದ ಚಂದ್ರಯಾನ-3 ಯಶಸ್ಸನ್ನು ಇಡೀ ವಿಶ್ವವೇ ಪ್ರಶಂಶಿಸುತ್ತಿರುವಾಗ ಚೀನಾ ಇದಕ್ಕೆ ಕ್ಯಾತೆ ತೆಗೆದಿದೆ. ಭಾರತ ಚಂದ್ರನ ದಕ್ಷಿಣ ಧ್ರುವಕ್ಕೆ ತೆರಳಿಲ್ಲ ಎಂದು ಆರೋಪಿಸಿದೆ

While the whole world is praising the success of Indias Chandrayaan-3, China claiming that it has not gone to the South Pole of the Moon akb
Author
First Published Sep 29, 2023, 11:08 AM IST

ಬೀಜಿಂಗ್‌: ಭಾರತದ ಚಂದ್ರಯಾನ-3 ಯಶಸ್ಸನ್ನು ಇಡೀ ವಿಶ್ವವೇ ಪ್ರಶಂಶಿಸುತ್ತಿರುವಾಗ ಚೀನಾ ಇದಕ್ಕೆ ಕ್ಯಾತೆ ತೆಗೆದಿದೆ. ಭಾರತ ಚಂದ್ರನ ದಕ್ಷಿಣ ಧ್ರುವಕ್ಕೆ ತೆರಳಿಲ್ಲ ಎಂದು ಆರೋಪಿಸಿದೆ. ಈ ಕುರಿತು ಆರೋಪಿಸಿರುವ ಚೀನಾ ಚಂದ್ರ ಯೋಜನೆಯ ಪಿತಾಮಹ ಎಂದು ಕರೆಯಲ್ಪಡುವ ಉಯಾಂಗ್‌ ಝಿಯಾನ್ (Uyang Xian), ಚಂದ್ರಯಾನ-3 (Chandrayaan-3) ಚಂದ್ರನ ದಕ್ಷಿಣ ಧ್ರುವಕ್ಕೆ ಹತ್ತಿರವೂ ತೆರಳಿಲ್ಲ. ಇದು ದಕ್ಷಿಣ ಧ್ರುವದಿಂದ 613 ಕಿಲೋಮೀಟರ್‌ ದೂರದಲ್ಲಿದೆ. ಭೂಮಿಯಲ್ಲಿ ಮಾತ್ರ ದಕ್ಷಿಣ ಮುಖದಲ್ಲಿ 69 ಡಿಗ್ರಿಗೆ ಅಂಟಾರ್ಟಿಕ ಸಿಗುತ್ತದೆ. ಆದರೆ ಚಂದ್ರನಲ್ಲಿ ದಕ್ಷಿಣ ಧ್ರುವಕ್ಕೆ 88.5-90 ಡಿಗ್ರಿ ಅಕ್ಷಾಂಶ ಇರುತ್ತದೆ. ಆದರೆ ಭಾರತ ಚಂದ್ರನಲ್ಲಿ ಕೇವಲ 69 ಡಿಗ್ರಿ ಅಕ್ಷಾಂಶದಲ್ಲಿದೆ’ ಎಂದು ಚೀನೀ ದಿನಪತ್ರಿಕೆಯ ಸಂದರ್ಶನದಲ್ಲಿ ಹೇಳಿದ್ದಾರೆ.

ಅಮೆರಿಕ ಪೌರತ್ವ ಜನ್ಮಸಿದ್ಧ ಹಕ್ಕು ನಿಯಮಕ್ಕೆ ಅಧ್ಯಕ್ಷೀಯ ಅಭ್ಯರ್ಥಿ ರಾಮಸ್ವಾಮಿ ವಿರೋಧ

ವಾಷಿಂಗ್ಟನ್‌: ಹುಟ್ಟಿನಿಂದಲೇ ದೊರೆಯುವ ಅಮೆರಿಕ ಪೌರತ್ವ ನಿಯಮಕ್ಕೆ ಬದಲಾವಣೆ ತರಬೇಕು ಎಂದು ಭಾರತೀಯ ಮೂಲದ ಅಮೆರಿಕ ಅಧ್ಯಕ್ಷೀಯ ಅಭ್ಯರ್ಥಿ ವಿವೇಕ್‌ ರಾಮಸ್ವಾಮಿ (Vivek Ramaswamy) ಆಗ್ರಹ ಮಾಡಿದ್ದಾರೆ.

ವಿದೇಶಗಳಲ್ಲಿ 1 ಕೋಟಿಗೂ ಹೆಚ್ಚು ಪಾಕಿಸ್ತಾನಿಯರಿಂದ ಭಿಕ್ಷಾಟನೆ: ವಲಸಿಗರ ಬಗ್ಗೆ ಸೌದಿ, ಇರಾಕ್ ಆಕ್ಷೇಪ

2024ನೇ ಅಧ್ಯಕ್ಷೀಯ ಚುನಾವಣೆಗೆ ಸಂಬಂಧಿಸಿದಂತೆ ನಡೆದ ರಿಪಬ್ಲಿಕನ್‌ ಪಕ್ಷದ ಸಂವಾದದಲ್ಲಿ ಮಾತನಾಡಿದ ಅವರು ಅಕ್ರಮ ವಲಸೆಗಾರರ ಮಕ್ಕಳಿಗೆ ದೊರೆಯುತ್ತಿರುವ ಅಮೆರಿಕ ಪೌರತ್ವಕ್ಕೆ ವಿರೋಧ ವ್ಯಕ್ತಪಡಿಸಿದರು. ಅಕ್ರಮವಾಗಿ ಅಮೆರಿಕಕ್ಕೆ ವಲಸೆ ಬರುವ ವಿದೇಶಿ ಪೋಷಕರ ಮಕ್ಕಳಿಗೆ ಅಮೆರಿಕದ ಪೌರತ್ವ ನೀಡುವುದಕ್ಕೆ ಕೊನೆ ಹಾಡಬೇಕು ಎಂದು ಅವರು ಹೇಳಿದರು. ವಲಸೆ ಪೋಷಕರ ಮಗನಾಗಿರುವ ವಿವೇಕ್‌ ರಾಮಸ್ವಾಮಿ, ಈ ಮೊದಲು ಎಚ್‌-1ಬಿ ವೀಸಾಗೂ ಸಹ ವಿರೋಧ ವ್ಯಕ್ತಪಡಿಸಿದ್ದರು. ವಿವೇಕ್‌ ರಾಮಸ್ವಾಮಿ ಭಾರತ ಮೂಲದ ಉದ್ಯಮಿಯಾಗಿದ್ದು, ರಿಪಬ್ಲಿಕ್‌ ಪಕ್ಷದಲ್ಲಿ ಅಧ್ಯಕ್ಷೀಯ ಚುನಾವಣೆಯಲ್ಲಿ 2ನೇ ಸ್ಥಾನ ಪಡೆದುಕೊಂಡಿದ್ದಾರೆ. ಒಂದು ವೇಳೆ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಭ್ರಷ್ಟಾಚಾರ ಪ್ರಕರಣದಲ್ಲಿ ಶಿಕ್ಷೆಗೊಳಗಾದರೆ ವಿವೇಕ್‌ ಅಧ್ಯಕ್ಷೀಯ ಅಭ್ಯರ್ಥಿಯಾಗಲಿದ್ದಾರೆ (American presidential candidate).

ದಾರಿಮಧ್ಯೆ ಸಂಕಷ್ಟಕ್ಕೊಳಗಾದ ಒಡತಿಯ ಸುರಕ್ಷಿತವಾಗಿ ಕರೆತಂದ ಶ್ವಾನ: ಕ್ಯಾಮರಾದಲ್ಲಿ ದೃಶ್ಯ ಸೆರೆ

ಸಂಸತ್ತಿಗೆ ಮಾಜಿ ನಾಜಿ ಯೋಧನ ಕರೆಸಿದ್ದು ತಪ್ಪು: ಕೆನಡಾ ಪ್ರಧಾನಿ ಕ್ಷಮೆ

ಒಟ್ಟಾವ: ಕೆನಡಾ ಸಂಸತ್ತಿಗೆ ಹಿಟ್ಲರ್‌ನ ನಾಜಿ ಪಕ್ಷದ ಯೋಧ ಯರೋಸ್ಲವ್‌ ಹುಂಕಾ (98) (Yaroslav Hunka)ರನ್ನು ಕರೆಸಿ ಸನ್ಮಾನಿಸಿದ್ದಕ್ಕೆ ಕೆನಡಾ ಪ್ರಧಾನ ಮಂತ್ರಿ ಜಸ್ಟಿನ್‌ ಟ್ರುಡೋ (Justin Trudeau) ಕ್ಷಮೆಯಾಚಿಸಿದ್ದಾರೆ. ಈ ಕುರಿತು ಮಾತನಾಡಿದ ಜಸ್ಟಿನ್‌, ನಾಜಿ ಯೋಧರನ್ನು ಸಂಸತ್ತಿಗೆ ಕರೆಸಿದ್ದು ಬಹುದೊಡ್ಡ ತಪ್ಪು ಎಂದು ನಮಗೆ ಅರಿವಾಗಿದೆ. ಇದು ನಾಜಿಗಳ ಆಕ್ರಮಣಕ್ಕೆ ತುತ್ತಾಗಿರುವ ಯಹೂದಿಗಳು, ಸಲಿಂಗಿಗಳು, ಅಕ್ಕಪಕ್ಕದ ದೇಶದವರಿಗೆ ಕೆನಡಾ ಮಾಡಿದ ದೊಡ್ಡ ಅವಮಾನ ಎಂದು ಅರಿವಾಗಿದೆ. ಯೋಧರನ್ನು ಆಹ್ವಾನಿಸಿದ ಸಂಪೂರ್ಣ ಜವಾಬ್ದಾರಿ ಸ್ಪೀಕರ್‌ರವರದ್ದೇ ಆಗಿತ್ತು. ಇದರಿಂದಾಗಿ ಕೆನಡಾಗೆ ಬಹಳ ಅವಮಾನವಾಗಿದೆ ಎಂದು ಟ್ರುಡೋ ಹೇಳಿದರು. ಕಳೆದ ವಾರ ಸಂಸತ್ತಿನಲ್ಲಿ ನಾಜಿ ಯೋಧರಿಗೆ ಎಲ್ಲರೂ ಎದ್ದು ನಿಂತು ಗೌರವ ಸಮರ್ಪಿಸಿದ್ದನ್ನು ವಿಶ್ವವೇ ಖಂಡಿಸಿತ್ತು.

Follow Us:
Download App:
  • android
  • ios