ಲಂಡನ್(ಫೆ.05)  ಸಮುದ್ರಾಚೆಗಿನ ದೂರದ ಯಾವುದೋ ಊರಲ್ಲಿ ನಮ್ಮ ಊರಿನ, ನಮ್ಮ ರಾಜ್ಯದ ಹೆಸರು ಕೇಳಿಬಂದರೆ ಎಷ್ಟು ಚೆನ್ನ ಅಲ್ಲವೇ? ಕರ್ನಾಟಕ ಹೆಮ್ಮೆ ಪಡುವ ಒಂದು ಸಂಗತಿಯನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ.

ಮೈಸೂರು ರೋಡ್.. ಅಂದ ತಕ್ಷಣ ನಮ್ಮ ನೆನಪಿಗೆ ಬರುವುದು ಬೆಂಗಳೂರು-ಕೆಂಗೇರಿ-ಬಿಡದಿ-ರಾಂನಗರ-ಮಂಡ್ಯ-ಮೈಸೂರು ಮಾರ್ಗ.. ಅಯ್ಯೋ ಧೂಳು..ಹೆವಿ ಟ್ರಾಫಿಕ್ ಎಂದು ರಸ್ತೆಯ ಹೆಸರು ಹೇಳಿದ ತಕ್ಷಣ ಶಪಿಸಲು ಆರಂಭಿಸಿಬಿಡುತ್ತೇವೆ. ಆದರೆ ಇದು ಅದೆಲ್ಲವನ್ನು ಮೀರಿದ ಸುದ್ದಿ. ಆದರೆ ಇದು ಮೈಸೂರು ರೋಡಿನದ್ದೇ ಸುದ್ದಿ.

ಹೊಸ ರಾಜಕುಮಾರನಿಗೆ ವರ್ಧಂತಿ ಸಂಭ್ರಮ..ಪೋಟೋಸ್

ಮೊದಲೇ ಹೇಳಿದ್ದೇವೆ. ಇದು ಕರ್ನಾಟಕದವರು ಹೆಮ್ಮೆ ಪಡಬೇಕಾದ ವಿಚಾರ. ಇಂಗ್ಲೆಂಡಿನ ಲಂಡನ್ ನಲ್ಲಿಯೂ ಮೈಸೂರು ರೋಡಿದೆ!  ಮೈಸೂರಿನ ಯದುವೀರ್ ಒಡೆಯರ್ ಮತ್ತು ತ್ರಿಷಿಕಾ ದಂಪತಿ ಭೇಟಿ ನೀಡಿದ ಪೋಟೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ನಮ್ಮ ಊರಿನ ಹೆಸರು ಎಲ್ಲೆ ಇದ್ದರೂ ಚೆಂದ. ದುರದ ಲಂಡನ್ ನಲ್ಲಿ ಇರುವ ಮೈಸೂರು ರಸ್ತೆಗೆ ಒಮ್ಮೆಯಾದರೀ ಭೇಟಿ ಕೊಡಬೇಕು ಅಲ್ಲವೇ?