ಟೊರ್ಶ್ವಾನ್(ಜ.10): ಗುರುತ್ವಾಕರ್ಷಣೆ ಈ ವಿಶ್ವದ ಅಸ್ತಿತ್ವದ ಪ್ರಮುಖ ಆಧಾರಸ್ತಂಭ. ಇಡೀ ಬ್ರಹ್ಮಾಂಡವೇ ಈ ಗುರುತ್ವಾಕರ್ಷಣೆ ಬಲದ ಮೇಲೆ ನಿಂತಿದೆ. ತುಸು ಏರುಪೇರಾದರೂ ಸರ್ವನಾಶ ಕಟ್ಟಿಟ್ಟ ಬುತ್ತಿ.

ಗುರುತ್ವ ಬಲದ ಕುರಿತು ವಿಶ್ವದ ಅನೇಕ ಮಹಾನ್ ವಿಜ್ಞಾನಿಗಳು ಸಿದ್ಧಾಂತ ಮಂಡಿಸಿದ್ದಾರೆ. ಕೆಲವರು ಗುರುತ್ವಾಕರ್ಷಣೆಯನ್ನೇ ದೇವರು ಎನ್ನುವವರಿದ್ದಾರೆ.

ಆದರೆ ಈ ಎಲ್ಲ ಸಿದ್ಧಾಂತಗಳಿಗೆ ಸವಾಲೊಡ್ಡುವ ಘಟನೆಯೊಂದು ಡೆನ್ಮಾರ್ಕ್‌ನ ಫೆರೊಯಿ ದ್ವೀಪದಲ್ಲಿ ನಡೆದಿದೆ. ಸಮುದ್ರ ದಡಕ್ಕೆ ಹೊಂದಿಕೊಂಡಿರುವ ಪರ್ವತದಲ್ಲಿ ವಿಸ್ಮಯವೊಂದು ನಡೆದಿದೆ.

ಜೋಗದ ವೀಕ್ಷಣೆಗಿನ್ನು ರೋಪ್‌ವೇ ಆಕರ್ಷಣೆ!

ಫೆರೊಯಿ ದ್ವೀಪದಲ್ಲಿರುವ ಪರ್ವತವೊಂದರಲ್ಲಿ ಸಮುದ್ರದ ನೀರು ಮೇಲಕ್ಕೆ ಹಾರುವ ವಿಡಿಯೋ ಭಾರೀ ವೈರಲ್ ಆಗಿದ್ದು, ಗುರುತ್ವ ನಿಯಮಕ್ಕೆ ವಿರುದ್ಧವಾಗಿ ಮೇಲಕ್ಕೆ ಚಿಮ್ಮುವ ನೀರಿನ ವಿಡಿಯೋ ಸದ್ದು ಮಾಡುತ್ತಿದೆ.

ಸ್ಯಾಮಿ ಜಾಕೊಬ್ಸೆನ್ ಎಂಬಾತ ಮಾಡಿರುವ ವಿಡಿಯೋದಲ್ಲಿ, ನೀರು ಜಲಪಾತದಂತೆ ಬೆಟ್ಟದ ಮೇಲಕ್ಕೆ ಚಿಮ್ಮುವ ದೃಶ್ಯ ಸೆರೆಯಾಗಿದೆ.

ಹವಾಮಾನ ತಜ್ಞರ ಪ್ರಕಾರ, ಬಂಡೆಯ ಅಂಚಿನಲ್ಲಿ ಗಾಳಿಯ ಸುರುಳಿಯಾಕಾರದ ಸ್ತಂಭ ನಿರ್ಮಾಣದಿಂದಾಗಿ ಹಾಗೂ ಬಂಡೆ ಗಾಳಿಯ ದಿಕ್ಕನ್ನು ತಿರುಗಿಸುವುದರಿಂದ ಕೃತಕ ಸುಂಟರಗಾಳಿ ಸೃಷ್ಟಿಯಾಗುತ್ತದೆ.

ಸೊರಬ್ಬಿ ಹಳ್ಳದಿಂದ ಉಗಮ, 50 ಅಡಿ ಎತ್ತರದಿಂದ ಧುಮ್ಮಿಕ್ಕುವ ಜಲಧಾರೆ!

ಇದರಿಂದ ಬಂಡೆಯ ಅಂಚಿಗೆ ಬಂದು ದುರ್ಬಲಗೊಳ್ಳುವ ನೀರು, ಬೆಟ್ಟವನ್ನೇ ಮಾರ್ಗವನ್ನಾಗಿಸಿಕೊಂಡು ಮೇಲಕ್ಕೆ ಚಿಮ್ಮುತ್ತದೆ. ಪ್ರಖ್ಯಾತ ಹವಾಮಾನಶಾಸ್ತ್ರಜ್ಞ ಗ್ರೆಗ್ ಡ್ವಿಹರ್ಷ್ಟ್ ಇದೊಂದು ಅಪರೂಪದ ವಿದ್ಯಮಾನ ಎಂದು ಬಣ್ಣಿಸಿದ್ದಾರೆ.