ಹಿಂದೂಗಳೆದುರು ನಮಾಜ್ ಮಾಡಿದ್ರೆ ಹೆಚ್ಚು ತೃಪ್ತಿ: ವಿವಾದ ಸೃಷ್ಟಿಸಿ, ಕ್ಷಮಿಸಿ ಎಂದ ವಕಾರ್!
*ಹಿಂದೂಗಳೆದುರು ನಮಾಜ್ ಮಾಡಿದ್ರೆ ಹೆಚ್ಚು ತೃಪ್ತಿ
*ವಿವಾದಾತ್ಮಕ ಹೇಳಿಕೆ ನೀಡಿದ್ದ ವಕಾರ್ ಯೂನಿಸ್
*ಟ್ವೀಟ್ ಮೂಲಕ ಕ್ಷಮೆಯಾಚಿಸಿದ ಮಾಜಿ ನಾಯಕ
ಪಾಕಿಸ್ತಾನ (ಅ. 27): ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ (Pakistan) ವಿರುದ್ದ ಭಾರತದ ಸೋಲಿನ ನಂತರ ಪಾಕ್ ಕ್ರಿಕೆಟ್ ಅಭಿಮಾನಿಗಳು ಭಾರತವನ್ನು ಟೀಕಿಸುವ ಸತತ ಪ್ರಯತ್ನದಲ್ಲಿ ತೊಡಗಿದ್ದಾರೆ. ಒಂದಲ್ಲ ಒಂದು ರೀತಿ ಭಾರತವನ್ನು ಮುಜುಗರಕ್ಕೀಡು ಮಾಡುವ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈ ಮಧ್ಯೆ ಪಾಕ್ ಕ್ರಿಕೆಟಿಗ ಮೊಹಮ್ಮದ್ ರಿಜ್ವಾನ್ ಹಿಂದೂಗಳ(Hindu) ಎದುರು ನಮಾಜ್(Namaz) ಮಾಡಿರುವುದು ಎಲ್ಲಕ್ಕಿಂತ ಹೆಚ್ಚು ತೃಪ್ತಿ ನೀಡಿದೆ ಎಂದು ಪಾಕಿಸ್ತಾನ ಮಾಜಿ ನಾಯಕ ವಕಾರ್ ಯೂನಿಸ್(Waqar Yunis) ಹೇಳಿದ್ದರು. ಈ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಆದರೆ ಪಾಕಿಸ್ತಾನ ಗೆದ್ದ ಸಂಭ್ರಮದಲ್ಲಿ ಈ ರೀತಿ ಹೇಳಿಕೆ ನಿಡಿದ್ದೆ, ಇದಕ್ಕೆ ನಾನು ಕ್ಷಮೆಯಾಚಿಸುತ್ತನೆ ಎಂದು ವಕಾರ್ ಈಗ ಹೇಳಿದ್ದಾರೆ.
ಪಾಕ್ ಜಯಕ್ಕೆ ಸಂಭ್ರಮಿಸಿದ ಕಾಶ್ಮೀರಿ ವಿದ್ಯಾರ್ಥಿಗಳ ವಿರುದ್ಧ ಗಂಭೀರ ಕೇಸು!
ಪಾಕಿಸ್ತಾನದ ಗೆಲುವು ಸಂಭ್ರಮಿಸುತ್ತಾ ಪಾಕಿಸ್ತಾನ ಮಾಧ್ಯಮ ಚರ್ಚಾ ಕಾರ್ಯಕ್ರಮ ನಡೆಸಿತ್ತು. ಈ ಚರ್ಚೆಯಲ್ಲಿ ವಕಾರ್ ಯೂನಿಸ್, ಮಾಜಿ ವೇಗಿ ಶೋಯೆಬ್ ಅಕ್ತರ್ (Shoaib Akhtar) ಕೂಡ ಪಾಲ್ಗೊಂಡಿದ್ದರು. ಚರ್ಚೆಯ ನಡುವೆ ರಿಜ್ವಾನ್ ಬ್ಯಾಟಿಂಗ್‌ಗಿಂತ ಹೆಚ್ಚು ತೃಪ್ತಿ ನೀಡಿರುವ ವಿಚಾರ ಎಂದರೆ, ಹಿಂದೂಗಳೆದುರು ರಿಜ್ವಾನ್ ನಮಾಜ್ ಮಾಡಿರುವುದು. ಇದು ಅತ್ಯಂತ ಖುಷಿ ಹಾಗೂ ತೃಪ್ತಿ ನೀಡುವ ವಿಚಾರ ಎಂದು ಹೇಳಿದ್ದರು. ಇದು ವಿವಾದಕ್ಕೆ ಕಾರಣವಾಗಿತ್ತು. ವಕಾರ್ ಯೂನಿಸ್ ಈ ಹೇಳಿಕೆಗೆ ಖ್ಯಾತ ಕಮೆಂಟೇಟರ್ ಹರ್ಷಾ ಬೋಗ್ಲೇ (Harsha Bhogle) ಕೂಡ ತಿರುಗೇಟು ನೀಡಿದ್ದರು ಹಾಗೂ ವಕಾರ್‌ರಿಂದ ಕ್ಷಮೆಯಾಚನೆಯನ್ನು ಬಯಸುತ್ತಿದ್ದೇನೆ ಎಂದು ಹೇಳಿದ್ದರು.
ICC T20 World Cup ಟೂರ್ನಿಯಿಂದಲೇ ಹೊರಬಿದ್ದ ಸ್ಟಾರ್ ವೇಗಿ..!
ವಕಾರ್ ಯೂನಿಸ್ ಟ್ವೀಟ್!
ಪಾಕಿಸ್ತಾನ ಮಾಜಿ ನಾಯಕ ವಕಾರ್ ಯೂನಿಸ್ ಈಗ ಟ್ವೀಟ್ ಮಾಡಿ ಕ್ಷಮೆ ಕೇಳಿದ್ದಾರೆ. "ಮಾತಿನ ಭರದಲ್ಲಿ, ನಾನು ಹೀಗೆ ಹೇಳಿದ್ದೇನೆ ಆದರೆ ನನ್ನ ಉದ್ದೇಶ ಅದಾಗಿರಲಿಲ್ಲ, ಇದು ಹಲವರ ಭಾವನೆಗಳಿಗೆ ನೋವುಂಟು ಮಾಡಿದೆ. ಇದಕ್ಕಾಗಿ ನಾನು ಕ್ಷಮೆಯಾಚಿಸುತ್ತೇನೆ, ಇದು ಉದ್ದೇಶಪೂರ್ವಕವಾಗಿ ಮಾಡಿದ್ದಲ್ಲ, ಇದು ನಿಜವಾಗಿಯೂ ತಪ್ಪು. ಕ್ರೀಡೆಯು ಜನಾಂಗ, ಬಣ್ಣ ಅಥವಾ ಧರ್ಮವನ್ನು ಲೆಕ್ಕಿಸದೆ ಜನರನ್ನು ಒಂದುಗೂಡಿಸುತ್ತದೆ" ಎಂದು ವಕಾರ್ ಟ್ವೀಟ್ ಮಾಡಿದ್ದಾರೆ. ಭಾರತ-ಪಾಕಿಸ್ತಾನ ಪಂದ್ಯದ ಡ್ರಿಂಕ್ಸ್ ಬ್ರೇಕ್ ವೇಳೆ ರಿಜ್ವಾನ್ ಪ್ರಾರ್ಥನೆ ಸಲ್ಲಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಪಾಕಿಸ್ತಾನದ ಗೆಲುವಿನ ಓಟ
ಭಾರತ ಮತ್ತು ನ್ಯೂಜಿಲೆಂಡ್ ವಿರುದ್ಧ ಪಂದ್ಯ ಗೆಲ್ಲುವ ಮೂಲಕ T20 world Cup 2021 ಟೂರ್ನಿಯಲ್ಲಿ ಪಾಕಿಸ್ತಾನದ ಗೆಲುವಿನ ಓಟ ಮುಂದುವರಿದಿದೆ. ಮೊದಲ ಪಂದ್ಯದಲ್ಲಿ ಭಾರತ ವಿರುದ್ಧ 10 ವಿಕೆಟ್ ಗೆಲುವು ಸಾಧಿಸಿತ್ತು. ಈ ಮೂಲಕ ಇದೇ ಮೊದಲ ಬಾರಿಗೆ ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ ವಿರುದ್ದ ಗೆಲುವು ಸಾಧಿಸಿದ ಹೆಗ್ಗಳಿಕೆಗ ಪಾಕಿಸ್ತಾನ ಪಾತ್ರವಾಗಿತ್ತು. ಟಿ20 ವಿಶ್ವಕಪ್ ಟೂರ್ನಿಯ 2ನೇ ಗುಂಪಿನಲ್ಲಿ ಪಾಕಿಸ್ತಾನ ಮತ್ತೆ ಅಗ್ರಸ್ಥಾನಕ್ಕೇರಿದೆ. ಎರಡು ಪಂದ್ಯದಿಂದ 2 ಗೆಲುವು ದಾಖಲಿಸಿರುವ ಪಾಕಿಸ್ತಾನ 4 ಅಂಕಗೊಳೊಂದಿಗೆ ಮೊದಲ ಸ್ಥಾನದಲ್ಲಿದೆ