Asianet Suvarna News Asianet Suvarna News

ಭೂಮಿ ಕೊಳ್ಳಲು ಬಯಸಿದ್ದೀರಾ... 2 ಕೋಟಿಗೆ ಇಡೀ ಗ್ರಾಮವೇ ಮಾರಾಟಕ್ಕಿದೆ ನೋಡಿ

ಸ್ಪೇನ್‌ನ ಗ್ರಾಮವೊಂದನ್ನು  ಕೇವಲ 2 ಕೋಟಿ ರೂಪಾಯಿಗೆ ಮಾರಾಟಕ್ಕಿಡಲಾಗಿದೆ.

want to buy a land in reasonable price, Spanish city for sale, you have to pay only 2 crore to buy it akb
Author
First Published Nov 13, 2022, 5:05 PM IST

ಸಾಮಾನ್ಯವಾಗಿ ತಲೆಮೇಲೊಂದು ಸ್ವಂತ ಸೂರು ಹೊಂದಬೇಕು ಎಂಬುದು ಬಹುತೇಕರ ಕನಸು. ಸಾಮಾನ್ಯ ಮಧ್ಯಮ ವರ್ಗದ ಜನ ಅದಕ್ಕಾಗಿ ಸಾಲ ಸೋಲ ಮಾಡಿಕೊಂಡು, ಜೀವನಪರ್ಯಂತ ದುಡಿಯುವ ಪಣತೊಟ್ಟು ಸ್ವಂತದೊಂದು ಮನೆ ಕೊಳ್ಳುವ ಕನಸಿಗೆ ಇನ್ನಿಲ್ಲದ ಕಷ್ಟಪಡುತ್ತಾರೆ. ಆದರೆ ಉಳ್ಳವರು ಇಡೀ ಊರನ್ನೇ ಕೊಳ್ಳಲು ಬಯಸುತ್ತಾರೆ. ಕೆಲ ದಿನಗಳ ಹಿಂದೆ ವಿವಾದಿತ ನಾಯಕ ಸ್ವಾಮಿ ನಿತ್ಯಾನಂದ ಒಂದು ಇಡೀ ದೇಶವನ್ನೇ ಖರೀದಿಸಿ ತನ್ನ ಸಾಮ್ರಾಜ್ಯ ಸ್ಥಾಪಿಸಿದ ವಿಚಾರ ಸಾಕಷ್ಟು ಸುದ್ದಿಯಾಗಿತ್ತು. ಆತ ತನ್ನದೇ ದ್ವೀಪ ದೇಶ ಕಟ್ಟಿದ್ದಲ್ಲದೇ ಅಲ್ಲಿನ ಕರೆನ್ಸಿಯನ್ನು ಬಿಡುಗಡೆಗೊಳಿಸಿದ್ದ ಈ ವಿಚಾರ ಈಗ್ಯಾಕೆ ಅಂತೀರಾ? ಇಲ್ಲೊಂದು ಕಡೆ ಕೇವಲ 2 ಕೋಟಿಗೆ ಇಡೀ ಊರೇ ಮಾರಾಟಕ್ಕಿದೆ.

ಹೌದು ಬಿಬಿಸಿಯ ವರದಿಯ ಪ್ರಕಾರ ಸ್ಪೇನ್ ದೇಶದ ಗ್ರಾಮವೊಂದು ಮಾರಾಟಕ್ಕಿದ್ದು, 2 ಕೋಟಿ ನೀಡಿದ್ದಲ್ಲಿ ಇದು ನಿಮ್ಮ ಕೈ ಸೇರಲಿದೆ. 30 ವರ್ಷಗಳಿಂದ ಜನವಸತಿಯಿಲ್ಲದ ಸ್ಪ್ಯಾನಿಷ್ ಗ್ರಾಮವನ್ನು ಪ್ರಸ್ತುತ  227,000 ಯೂರೋಗಳಿಗೆ ಅಂದರೆ ಸುಮಾರು 2,16,87,831 ಭಾರತೀಯ ರೂಪಾಯಿಗಳಿಗೆ ಮಾರಾಟಕ್ಕಿಡಲಾಗಿದೆ. ಈಗ ಮಾರಾಟಕ್ಕೆ ಲಭ್ಯವಿರುವ ಸ್ಪೇನ್‌ನ ಈ ಗ್ರಾಮದ ಹೆಸರು ಸಾಲ್ಟೊ ಡಿ ಕ್ಯಾಸ್ಟ್ರೊ (Salto de Castro) ಇದು ಪೋರ್ಚುಗಲ್ (Portugal) ಜೊತೆ ಗಡಿ ಹಂಚಿಕೊಂಡಿದ್ದು, ಝಮೊರಾ (Zamora) ಪ್ರಾಂತ್ಯದಲ್ಲಿದ್ದು, ಸ್ಪೇನ್‌ನ (Spain) ಮ್ಯಾಡ್ರಿಡ್‌ನಿಂದ (Madrid)  ಮೂರು ಗಂಟೆ ಪ್ರಯಾಣಿಸಿದರೆ ಈ ಪುಟ್ಟ ಗ್ರಾಮ ಸಿಗುತ್ತದೆ. ಈ ಗ್ರಾಮವೂ 44 ಮನೆಗಳು, ಹೋಟೆಲ್, ಚರ್ಚ್, ಶಾಲೆ, ಪುರಸಭೆಯ ಈಜುಕೊಳ ಮತ್ತು ಸಿವಿಲ್ ಗಾರ್ಡ್ ಇರುವಂತಹ ಬ್ಯಾರಕ್‌ಗಳ ಕಟ್ಟಡವನ್ನು ಒಳಗೊಂಡಿದೆ.

ಲಂಡನ್‌ಗೆ ಶಿಫ್ಟ್‌ ಆಗ್ತಾರಾ ಮುಕೇಶ್ ಅಂಬಾನಿ? 300 ಎಕರೆ ಭೂಮಿ ಖರೀದಿ 'ರಹಸ್ಯ' ಬಯಲು!

2000 ದಶಕದ ಆರಂಭದಲ್ಲಿ ಈ ಹಳ್ಳಿಯನ್ನು ಜನಪ್ರಿಯ ಪ್ರವಾಸಿ ತಾಣವಾಗಿ ಪರಿವರ್ತಿಸುವ ಗುರಿಯೊಂದಿಗೆ ಒಬ್ಬರು ಈ ಗ್ರಾಮವನ್ನು ಖರೀದಿಸಿದರು. ಆದಾಗ್ಯೂ, ಯೂರೋಜೋನ್  ಆರ್ಥಿಕ ಬಿಕ್ಕಟ್ಟು (eurozone crisis) ಈ ಯೋಜನೆಯನ್ನು ಯಶಸ್ವಿಯಾಗಿಸಲು ತೊಡಕಾಯಿತು ಎಂದು ಈ ಆಸ್ತಿಯ ಮಾಲೀಕರನ್ನು ಉಲ್ಲೇಖಿಸಿ ಮಾಲೀಕರ ಸಂಸ್ಥೆಯನ್ನು ಪ್ರತಿನಿಧಿಸುವ ಕಂಪನಿ ರಾಯಲ್ ಇನ್ವೆಸ್ಟ್‌ನಲ್ಲಿ ಕೆಲಸ ಮಾಡುವ ರೋನಿ ರೋಡ್ರಿಗಸ್ ಸುದ್ದಿಸಂಸ್ಥೆ ಬಿಬಿಸಿಗೆ ತಿಳಿಸಿದ್ದಾರೆ. ಮಾಲೀಕರು ಇಲ್ಲಿ ಹೋಟೆಲ್ ಹೊಂದುವ ಕನಸನ್ನು ಹೊಂದಿದ್ದರು ಆದರೆ ಎಲ್ಲವನ್ನೂ ತಡೆ ಹಿಡಿಯಲಾಗಿದೆ. ಆದರೆ ಮಾಲೀಕರು ಮಾತ್ರ ಇನ್ನೂ ಈ ಯೋಜನೆ ನನಸಾಗಲು ಬಯಸಿದ್ದಾರೆ ಎಂದು ರೋನಿ  ಹೇಳಿದ್ದಾರೆ. 

ಸ್ಪ್ಯಾನಿಷ್ ಆಸ್ತಿ (Spanish property) ವ್ಯವಹಾರದ ವೆಬ್‌ಸೈಟ್ ಐಡಿಯಲಿಸ್ಟಾದಲ್ಲಿ(Idealista) ಈ  ಆಸ್ತಿಯನ್ನು ಪಟ್ಟಿ ಮಾಡಲಾಗಿದೆ. ನಾನು ನಗರವಾಸಿಯಾಗಿರುವುದರಿಂದ ಮತ್ತು ಪಿತ್ರಾರ್ಜಿತ ವಾರಸುದಾರರು ಇಲ್ಲದ ಕಾರಣ ಅಥವಾ ಈ ಆಸ್ತಿಯನ್ನು ನೋಡಿಕೊಳ್ಳಲು ಸಾಧ್ಯವಿಲ್ಲದ ಕಾರಣ ನಾನು ಈ ಆಸ್ತಿಯನ್ನು ಮಾರಾಟ ಮಾಡುತ್ತಿದ್ದೇನೆ ಎಂದು ಮಾಲೀಕರು ಹೇಳಿದ್ದನ್ನು ಉಲ್ಲೇಖಿಸಿ ವೆಬ್‌ಸೈಟ್ ವರದಿ ಮಾಡಿದೆ.

ಗ್ರಾಮವನ್ನು 100% ದಷ್ಟು ವ್ಯವಸ್ಥಿತ ನಗರವಾಗಿಸಲು ಹಾಗೂ ಲಾಭದಾಯಕವಾಗಿಸಲು ಬೇಕಾಗುವ ಹೂಡಿಕೆಯು 2 ಮಿಲಿಯನ್ ಯುರೋಗಳನ್ನು ಮೀರುವುದಿಲ್ಲ ಎಂದು ವೆಬ್‌ಸೈಟ್ ಉಲ್ಲೇಖಿಸಿದೆ. ವೆಬ್‌ಸೈಟ್ ಐಡಿಯಲಿಸ್ಟಾದಲ್ಲಿ ಈ ಜಾಹೀರಾತನ್ನು 50,000 ಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ ಎಂದು ವರದಿ ಆಗಿದೆ. ಅಲ್ಲದೇ ಬ್ರಿಟನ್ (Britain), ಫ್ರಾನ್ಸ್ (France), ಬೆಲ್ಜಿಯಂ (Belgium) ಮತ್ತು ರಷ್ಯಾದ (Russia) 300 ಕ್ಕೂ ಹೆಚ್ಚು ಜನರ ಆಸಕ್ತಿಯನ್ನು ಇದು ಸೆಳೆದಿದೆ. ಅಲ್ಲದೇ ಒಬ್ಬ ಸಂಭಾವ್ಯ ಖರೀದಿದಾರರು ಈ ಆಸ್ತಿಯನ್ನು ಕಾಯ್ದಿರಿಸಲು ಈಗಾಗಲೇ ಹಣವನ್ನು ಹಾಕಿದ್ದಾರೆ ಎಂದು ರೋನಿ  ರೊಡ್ರಿಗಸ್ ಬಿಬಿಸಿಗೆ ತಿಳಿಸಿದ್ದಾರೆ.

ಯಾರು ಬೇಕಿದ್ದರೂ ಕೃಷಿ ಭೂಮಿ ಖರೀ​ದಿ​ಸ​ಬ​ಹು​ದು: ಸುಗ್ರೀವಾಜ್ಞೆಗೆ ರಾಜ್ಯಪಾಲ ಅಂಕಿತ!

1950 ರ ದಶಕದಿಂದಲೂ, ಈಗ ಮಾರಾಟಕ್ಕಿರುವ ಸಾಲ್ಟೊ ಡಿ ಕ್ಯಾಸ್ಟ್ರೊ ಗ್ರಾಮವೂ ವಿದ್ಯುತ್ ಉತ್ಪಾದನಾ ಸಂಸ್ಥೆಯಾದ ಇಬರ್ಡ್ಯುರೊ (Iberduero) ಇಲ್ಲಿ ಜಲಾಶಯವನ್ನು ನಿರ್ಮಿಸುವ ಉದ್ಯೋಗಿಗಳಿಗೆ ವಸತಿ ಸೌಲಭ್ಯವನ್ನು ನಿರ್ಮಿಸಿತ್ತು. ಆದರೆ ಕೆಲಸ ಮುಗಿದ ನಂತರ, ನೌಕರರು ಗ್ರಾಮವನ್ನು ತೊರೆದರು ಮತ್ತು 1980 ರ ದಶಕದಲ್ಲಿ ಆ ಗ್ರಾಮ ಸಂಪೂರ್ಣವಾಗಿ ವಾಸ್ತವ್ಯವಿಲ್ಲದ ಪ್ರದೇಶವಾಯಿತು. 
 

Follow Us:
Download App:
  • android
  • ios