6 ಅಡಿ ಅಂತರ ಕಾಯ್ದುಕೊಂಡರೂ ವೈರಸ್‌ ದಾಳಿ ತಪ್ಪಿದ್ದಲ್ಲ!

ಕೊರೋನಾ ವೈರಸ್‌ನಿಂದ ತಪ್ಪಿಸಿಕೊಳ್ಳಲು ಸಾಮಾಜಿಕ ಅಂತರ ಕಡ್ಡಾಯ| 6 ಅಡಿ ಅಂತರ ಕಾಯ್ದುಕೊಂಡರೂ ವೈರಸ್‌ ದಾಳಿ ತಪ್ಪಿದ್ದಲ್ಲ!| ಬೆಚ್ಚಿ ಬೀಳಿಸಿದೆ ಅಧ್ಯಯನ ವರದಿ

Virus can spread despite 6 feet social distancing when the wind is slight says study

ಲಂಡನ್‌(ಮೇ.21): ಕೊರೋನಾ ವೈರಸ್‌ನಿಂದ ತಪ್ಪಿಸಿಕೊಳ್ಳಲು ಸಾಮಾಜಿಕ ಅಂತರ ಕಡ್ಡಾಯ. ಕನಿಷ್ಠ ಆರು ಅಡಿ ಅಂತರ ಕಾಯ್ದುಕೊಂಡರೆ ವೈರಾಣುವಿನಿಂದ ರಕ್ಷಿಸಿಕೊಳ್ಳಬಹುದು ಎನ್ನುವುದು ತರ್ಕ. ಆದರೆ ಇದು ಸಂಪೂರ್ಣ ಸತ್ಯವಲ್ಲ ಎಂದು ಅಧ್ಯಯನ ವರದಿಯೊಂದು ತಿಳಿಸಿದೆ. 

ಸಣ್ಣ ಪ್ರಮಾದಲ್ಲಿ ಕಫ ಇದ್ದವರ ಜೊಲ್ಲು ಕಡಿಮೆ ಪ್ರಮಾಣದ ಗಾಳಿಯಲ್ಲೂ 18 ಅಡಿಗಳಷ್ಟುಸಂಚರಿಸುತ್ತದೆ. ಆದ್ದರಿಂದ 6 ಅಡಿ ಅಂತರ ಕಾಯ್ದುಕೊಂಡರೆ ಕೊರೋನಾದಿಂದ ಬಚಾವಾಗಬಹುದು ಎನ್ನುವ ವಾದವನ್ನು ಸೈಪ್ರಸ್‌ನ ನಿಕೋಸಿಯಾ ವಿಶ್ವ ವಿದ್ಯಾನಿಯಲದ ವಿಜ್ಞಾನಿಗಳು ಅಲ್ಲಗೆಳೆದಿದ್ದಾರೆ. 

ಸಣ್ಣ ಮಟ್ಟಿನ ಕಫ ಇರುವ ವ್ಯಕ್ತಿ ಗಂಟೆಗೆ ನಾಲ್ಕು ಕಿ.ಮಿ ವೇಗದಲ್ಲಿ ಚಲಿಸುವ ಗಾಳಿಯಲ್ಲಿ ಕೆಮ್ಮಿದರೆ, ಜೊಲ್ಲು 5 ಸೆಕೆಂಡ್‌ಗೆ 18 ಅಡಿಗಳಷ್ಟುದೂರ ಚಲಿಸುತ್ತದೆ. ಇದು ಎಲ್ಲಾ ವಯಸ್ಸಿನ, ಯಾವುದೇ ಎತ್ತರದ ವ್ಯಕ್ತಿಗೂ ಭಾದಿಸುತ್ತದೆ. ಕುಳ್ಳಗಿನ ವ್ಯಕ್ತಿಗಳಿಗೆ ಹಾಗೂ ಮಕ್ಕಳಿಗೆ ಇದು ಬೇಗ ಅಂಟಿಕೊಳ್ಳುತ್ತದೆ ಎಂದು ಅಧ್ಯಯನ ವರದಿಯಲ್ಲಿ ಹೇಳಲಾಗಿದೆ.

Latest Videos
Follow Us:
Download App:
  • android
  • ios