ಶ್ವಾನಗಳು ತಮ್ಮ ಜೀವದ ಹಂಗು ತೊರೆದು ತನ್ನ ಮಾಲೀಕನ ಜೀವ ಉಳಿಸಿದಂತಹ ಹಲವು ಘಟನೆಗಳು ಈಗಾಗಲೇ ನಡೆದಿವೆ. ಅದೇ ರೀತಿ ಇಲ್ಲೊಂದು ಕಡೆ ದತ್ತು ಪಡೆದಿದ್ದ ಶ್ವಾನವೊಂದು ತಾನು ನಂಬಿದ ಮನೆಯವರ ಜೀವ ಉಳಿಸಿದೆ.
ಶ್ವಾನಗಳು ಮನುಷ್ಯನ ಬೆಸ್ಟ್ ಫ್ರೆಂಡ್, ತನ್ನ ನಂಬಿದವರ ಅವುಗಳು ಎಂದೂ ಕೈ ಬಿಡುವುದಿಲ್ಲ, ಶ್ವಾನಗಳು ತಮ್ಮ ಜೀವದ ಹಂಗು ತೊರೆದು ತನ್ನ ಮಾಲೀಕನ ಜೀವ ಉಳಿಸಿದಂತಹ ಹಲವು ಘಟನೆಗಳು ಈಗಾಗಲೇ ನಡೆದಿವೆ. ಅದೇ ರೀತಿ ಇಲ್ಲೊಂದು ಕಡೆ ದತ್ತು ಪಡೆದಿದ್ದ ಶ್ವಾನವೊಂದು ತಾನು ನಂಬಿದ ಮನೆಯವರ ಜೀವ ಉಳಿಸಿದೆ. ಅಮೆರಿಕಾದಲ್ಲಿ ಈ ಘಟನೆ ನಡೆದಿದ್ದು, ಡಲ್ಬೊ ಡಾಗ್ @Dalbodog ಎಂಬ ಅಮೆರಿಕಾ ಮೂಲದ ಟ್ವಿಟ್ಟರ್ ಖಾತೆಯೊಂದು ತನ್ನ ಖಾತೆಯಲ್ಲಿ ಈ ವಿಚಾರವನ್ನು ಪೋಸ್ಟ್ ಮಾಡಿದ್ದು, ಸಾಕಷ್ಟು ವೈರಲ್ ಆಗಿದೆ.
ಅಮೆರಿಕದಲ್ಲಿ(US) ಮನೆಗೆ ಕಳ್ಳರು ನುಗ್ಗುವುದು ದರೋಡೆ ಮಾಡುವುದು ಎಲ್ಲ ಸಹಜ. ಅದೇ ರೀತಿ ಇಲ್ಲೊಂದು ಮನೆಗೆ ರಾತ್ರಿ ವೇಳೆ ಕಳ್ಳನೋರ್ವ ನುಗ್ಗಿದ್ದು, ಈ ವೇಳೆ ಮನೆ ಮಂದಿಯೆಲ್ಲಾ ಬೆಡ್‌ರೂಮ್‌ನಲ್ಲಿ (Bedroom) ಮಲಗಿದ್ದರು. ಶ್ವಾನ ಮುಟ್ಟು ಕೂಡ ಮನೆಯವರೊಂದಿಗೆ ಬೆಡ್‌ರೂಮ್‌ನಲ್ಲೇ ಮಲಗಿದ್ದು, ಮನೆಯ ಕಿಟಕಿ (Window)ಶಟರ್ ಎಳೆದ ಸದ್ದು ಕೇಳಿದ ಕೂಡಲೇ ಶ್ವಾನ ಮುಟ್ಟು ಓಡಿ ಹೋಗಿ ದರೋಡೆಕೋರನನ್ನು ಎದುರಿಸಿದೆ. ಮುರಿದ ಕಿಟಕಿಯ ಮೂಲಕ ಶ್ವಾನ ಕಳ್ಳನ ಬೆನ್ನಟಿ ಹೋಗಿದ್ದು, ಮನೆ ಮುಂಭಾಗದಲ್ಲೆಲ್ಲಾ ಆತನನ್ನು ಬೆನ್ನಟ್ಟಿ ಮರಳಿ ಬಂದಿದೆ. ಈ ವೇಳೆ ಶ್ವಾನದ (Pet Dog) ಕಾಲಿಗೆ ಬಲವಾದ ಗಾಯವಾಗಿದ್ದು, ಕಾಲಿನಲ್ಲಿ ರಕ್ತ ದರದರನೇ ಸುರಿಯುತ್ತಿತ್ತು. ಕಳ್ಳನನ್ನು ಓಡಿಸುತ್ತಾ ಹೋಗುವ ವೇಳೆ ಕಿಟಕಿಯ ತುಂಡಾದ ಗಾಜಿನ ಮೇಲೆ ಕಾಲಿಟ್ಟಿದ್ದರಿಂದ ಶ್ವಾನದ ಕಾಲು ಕುಯ್ದು ಹೋಗಿತ್ತು. ಹೀಗಾಗಿ ನಾವು ರಾತ್ರಿಯೆಲ್ಲಾ ನಮ್ಮ ದರೋಡೆಕೋರನಿಂದ ರಕ್ಷಿಸಿದ ಶ್ವಾನದ ರಕ್ಷಣೆ ಮಾಡುವ ಸಲುವಾಗಿ ಅದಕ್ಕೆ ರಕ್ತ ಸೋರುವ ಕಾಲಿಗೆ ಬಟ್ಟೆ ಸುತ್ತಿ ಬೆಳಗ್ಗಿನವರೆಗೂ ಕಾದೆವು. ಇದಾದ ಬಳಿಕ ನಾವು ಬೆಳಗ್ಗೆ ಮುಟ್ಟುವನ್ನು ಸಮೀಪದ ಪಶು ವೈದ್ಯರಲ್ಲಿಗೆ ಕರೆದೊಯ್ದೆವು. ಆತನಿಗೆ ಇಂದು ಶಸ್ತ್ರಚಿಕಿತ್ಸೆ ನಡೆಸಲಾಯ್ತು ಎಂದು ಅವರು ಬರೆದುಕೊಂಡಿದ್ದಾರೆ.
ನಾಯಿಗೆ ಬೈಯ್ದಿದ್ದನ್ನು ತಪ್ಪಾಗಿ ತಿಳಿದು ಪಕ್ಕದ ಮನೆಯವನಿಗೆ ಆಸಿಡ್ ಎರಚಿದ ದಂಪತಿ!
ನಮ್ಮ ಜೀವ ಉಳಿಸಿದ ಈ ಧೈರ್ಯವಂತ ಶ್ವಾನಕ್ಕೆ ನಾವು ಕೃತಜ್ಞರಾಗಿರುತ್ತೇವೆ. ಅದು ನಮ್ಮನ್ನು ಭೀಕರ ವ್ಯಕ್ತಿಗಳಿಂದ ರಕ್ಷಣೆ ಮಾಡಿತು. ಆತ ಓರ್ವ ನಿರಾಶ್ರಿತ ತಾಣದಲ್ಲಿ ವಾಸ ಮಾಡುತ್ತಿದ್ದ ಅನಾಥ ಶ್ವಾನವಾಗಿದ್ದ. ಹೀಗಾಗಿ ಆತ ಯಾವ ರೀತಿಯ ಶ್ವಾನ ಎಂಬುದು ನಮಗೆ ಗೊತ್ತಿಲ್ಲ, ಆದರೆ ಈಗ ಆ ನಮ್ಮ ಒಳ್ಳೆಯ ಸ್ನೇಹಿತ ಹಾಗೂ ಉತ್ತಮ ರಕ್ಷಕನಾಗಿದ್ದಾನೆ. ಶ್ವಾನವನ್ನು ದತ್ತು ಪಡೆಯಿರಿ ಆತ ನಿಮ್ಮ ಜೀವ ಉಳಿಸುತ್ತಾನೆ ಎಂದು ಅವರು ಬರೆದುಕೊಂಡಿದ್ದಾರೆ.
ಇವರ ಈ ಪೋಸ್ಟ್ ಈಗ ಇಂಟರ್‌ನೆಟ್‌ನಲ್ಲಿ ವೈರಲ್ (Viral Stories)ಆಗಿದ್ದು, ಆತ ನಿಮ್ಮನ್ನು ರಕ್ಷಿಸಿದ್ದಾನೆ ಏಕೆಂದರೆ ನೀವೂ ಒಮ್ಮೆ ಆತನನ್ನು ರಕ್ಷಿಸಿದ್ದೀರಿ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಶ್ವಾನಗಳು ಶ್ರೇಷ್ಠರು, ಅವುಗಳಿಂದ ರಕ್ಷಿಸಲ್ಪಟ್ಟವರಲ್ಲಿ ನೀವು ಒಬ್ಬರು ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಮತ್ತೊಬ್ಬರು ತಮ್ಮ ಬಾಲ್ಯದ ದಿನಗಳಲ್ಲಿ ತಮ್ಮ ಮನೆಯ ಶ್ವಾನದ ಸಾಹಸವನ್ನು ನೆನಪು ಮಾಡಿಕೊಂಡಿದ್ದು, ನಾನು ಬಾಲ್ಯದಲ್ಲಿದ್ದಾಗ ನಮ್ಮ ಮನೆಯಲ್ಲಿ ಜರ್ಮನ್ ಶೆಫರ್ಡ್ ಶ್ವಾನವಿತ್ತು. ಅದು ನಮ್ಮ ಕಾರನ್ನು ಕಳ್ಳರು ಹೊತ್ತೊಯ್ಯುವುದನ್ನು ತಪ್ಪಿಸಿತ್ತು ಎಂದು ಹೇಳಿಕೊಂಡಿದ್ದಾರೆ.
Vijayapura: ಮಟನ್ ಪೀಸ್‌ನಲ್ಲಿ ವಿಷ ಹಾಕಿ 20ಕ್ಕೂ ಹೆಚ್ಚು ಬೀದಿನಾಯಿಗಳ ದಾರುಣ ಹತ್ಯೆ!
