ನಶೆಯಲ್ಲಿದ್ದ ಮಹಿಳೆಯೊಬ್ಬಳು ಕ್ಯಾಬ್ ಚಾಲಕನ ಮೇಲೆ ಹಲ್ಲೆ ನಡೆಸಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಚಾಲಕನ ತಾಳ್ಮೆಗೆ ನೆಟ್ಟಿಗರು ಪ್ರಶಂಸೆ ವ್ಯಕ್ತಪಡಿಸಿದ್ದು, ಮಹಿಳೆಯ ವರ್ತನೆಯನ್ನು ಖಂಡಿಸಿದ್ದಾರೆ.

ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ಆಘಾತಕಾರಿಯ ವಿಡಿಯೋ ವೈರಲ್ ಆಗುತ್ತಿದೆ. ಮದ್ಯದ ನಶೆಯಲ್ಲಿದ್ದ ಮಹಿಳೆ, ಕ್ಯಾಬ್ ಚಾಲಕನ ಮೇಲೆ ಹಲ್ಲೆ ಮಾಡಿದ್ದಾಳೆ. ನನ್ನ ಮುಟ್ಟಬೇಡಿ ಪ್ಲೀಸ್ ಎಂದು ಕ್ಯಾಬ್ ಚಾಲಕ ಮನವಿ ಮಾಡಿಕೊಂಡರೂ ಮಹಿಳೆ ಹಿಂಬದಿಯಿಂದ ಬಂದು ಹಲ್ಲೆ ನಡೆಸಿದ್ದಾಳೆ. ಈ ವಿಡಿಯೋವನ್ನು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿಕೊಳ್ಳಲಾಗಿದ್ದು, ನೆಟ್ಟಿಗರು ಮಹಿಳೆಯ ವಿರುದ್ಧ ಆಕ್ರೋಶ ಹೊರಹಾಕಿದ್ದು, ಕ್ಯಾಬ್ ಚಾಲಕನ ತಾಳ್ಮೆಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಕಂಠಪೂರ್ತಿ ಮದ್ಯ ಕುಡಿದ ಮಹಿಳೆ ಕ್ಯಾಬ್ ಬುಕ್ ಮಾಡಿದ್ದಾಳೆ. ತನ್ನ ಸ್ಥಳ ಬಂದರೂ ಆಕೆ ಕಾರ್‌ನಿಂದ ಇಳಿಯಲು ಒಪ್ಪಿಲ್ಲ. ಇದು ನಾನು ಬುಕ್ ಮಾಡಿದ ಸ್ಥಳ ಅಲ್ಲಅಂತ ಒಮ್ಮೆ ಹೇಳಿದ್ರೆ, ಯಾಕೆ ಇಷ್ಟೊಂದು ಬಾಡಿಗೆ ಎಂದು ಕೂಗಾಡಿದ್ದಾಳೆ. ಈ ವಿಡಿಯೋವನ್ನು ಘರ್ ಕೇ ಕಲೇಶ್ ಹೆಸರಿನ (@gharkekalesh) ಎಕ್ಸ್ ಖಾತೆಯಲ್ಲಿ ಶೇರ್ ಮಾಡಲಾಗಿದೆ. ಈ ಘಟನೆ ದುಬೈಯದ್ದು ಎಂದು ಬರೆದುಕೊಳ್ಳಲಾಗಿದೆ. 1.88 ಲಕ್ಷಕ್ಕೂ ಅಧಿಕ ವ್ಯೂವ್ ಪಡೆದುಕೊಂಡಿದ್ದು, ನೂರಾರು ಕಮೆಂಟ್‌ಗಳು ಬಂದಿವೆ. ಓರ್ವ ನೆಟ್ಟಿಗ, ಬೇರೆ ಪ್ರದೇಶದಲ್ಲಿ ಹೇಗೆ ಅಂತ ಗೊತ್ತಿಲ್ಲ. ಆದ್ರೆ ಭಾರತದಲ್ಲಿ ಮಾತ್ರ ಈ ಮಹಿಳೆ ಅಮಾಯಕಿ ಎಮದು ಕಮೆಂಟ್ ಮಾಡಿದ್ದಾರೆ. 

ವೈರಲ್ ವಿಡಿಯೋದಲ್ಲಿ ಏನಿದೆ? 
ಕ್ಯಾಬ್ ಡ್ರೈವರ್ ವಾಹನ ನಿಲ್ಲಿಸಿ, ಮೇಡಂ ನಿಮ್ಮ ಸ್ಥಳ ಬಂದಿದೆ. ಬಾಡಿಗೆ ಪಾವತಿಸಿ ಇಳಿದುಕೊಳ್ಳಿ ಎಂದಿದ್ದಾನೆ. ಇದಕ್ಕೆ ಮಹಿಳೆ, ನನ್ನ ಸ್ಥಳಕ್ಕೆ ನನ್ನನ್ನು ಕರೆದುಕೊಂಡು ಹೋಗು ಎಂದು ಹಿಂದಿನಿಂದ ಹೊಡೆಯಲು ಆರಂಭಿಸುತ್ತಾಳೆ. ಚಾಲಕ, ಪ್ಲೀಸ್ ನನ್ನನ್ನು ಹೊಡೆಯಲು ಬರಬೇಡಿ ಮೇಡಂ. ನನ್ನನ್ನು ಟಚ್ ಮಾಡಬೇಡಿ ಎಂದು ಚಾಲಕ ಮನವಿ ಮಾಡಿಕೊಳ್ಳುತ್ತಾನೆ. ಆದ್ರೂ ಯಾಕೆ ಇಷ್ಟೊಂದು ಹಣ ಚಾರ್ಜ್ ಮಾಡಿದ್ದೀಯಾ ಎಂದು ಮತ್ತೆ ಹೊಡೆಯಲು ಬರುತ್ತಾಳೆ. ನಾನು ಸ್ಟ್ರೀಟ್-4ಗೆ ತೆರಳಬೇಕು. ಅಲ್ಲಿಗೆ ಕರೆದುಕೊಂಡು ಹೋಗು ಎಂದು ಮತ್ತೆ ಚಾಲಕನ ಮೇಲೆ ಹಲ್ಲೆ ನಡೆಸುತ್ತಾಳೆ. ಇದಕ್ಕೆ ಚಾಲಕ, ಇದುವೇ ಸ್ಟ್ರೀಟ್ ನಂಬರ್ 4 ಅಂದರೂ ಮಹಿಳೆ ಕೇಳಲು ಸಿದ್ಧವಿರಲಿಲ್ಲ. ಕೊನೆಗೆ ಚಾಲಕ ಕಾರ್‌ನಿಂದ ಕೆಳಗೆ ಬರುತ್ತಾನೆ. ಈ ಎಲ್ಲಾ ದೃಶ್ಯಗಳು ಕ್ಯಾಬ್‌ನಲ್ಲಿದ್ದ ಡ್ಯಾಶ್ ಕ್ಯಾಮೆರಾದಲ್ಲಿ ಸೆರೆಯಾಗಿವೆ.

ಇದನ್ನೂ ಓದಿ: 500 ರೂಪಾಯಿ ಆಸೆಯಿಂದಾಗಿ ರಹಸ್ಯ ಬಿಚ್ಚಿಟ್ಟ ಭಿಕ್ಷುಕ; ಹಣಕ್ಕಾಗಿ ಏನೆಲ್ಲಾ ಮಾಡ್ತಾರೆ ಗುರು!

ನೆಟ್ಟಿಗರು ಹೇಳಿದ್ದೇನು? 
ಕೆಲ ನೆಟ್ಟಿಗರು ಈ ವಿಡಿಯೋ ದುಬೈನದ್ದು ಅಲ್ಲ ಎಂದು ಹೇಳಿಕೊಂಡಿದ್ದಾರೆ. ಒಂದಿಷ್ಟು ಮಂದಿ ದುಬೈನಲ್ಲಿಯೂ ಇಂತಹ ಘಟನೆಗೆಳು ನಡೆಯುತ್ತಿರೋದು ಕಂಡು ಆಶ್ಚರ್ಯವಾಗುತ್ತಿದೆ. ಬಹುತೇಕರು ಮಹಿಳೆಯ ವರ್ತನೆಯನ್ನು ತೀವ್ರವಾಗಿ ಖಂಡಿಸಿದ್ದು, ಆಕೆಯ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಮದ್ಯದ ಕುಡಿದಾಗ ನಾವು ಏನು ಮಾಡುತ್ತಿದ್ದೇವೆ ಎಂದು ಗೊತ್ತಿರಲ್ಲ ಎಂಬುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ ಎಂದು ಹೇಳಿದ್ದಾರೆ. ಕ್ಯಾಬ್ ಚಾಲಕ ಪಾಕಿಸ್ತಾನಿ ಅಥವಾ ಭಾರತೀಯನಾಗಿರಬೇಕು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಭಾರತದಲ್ಲಿ ಆಗಿದ್ರೆ ಚಾಲಕನ ಮೇಲೆಯೇ ಗಂಭೀರ ಆರೋಪಗಳನ್ನು ಮಾಡಲಾಗುತ್ತಿತ್ತು. ಕಾರ್‌ನಲ್ಲಿ ಕ್ಯಾಮೆರಾ ಇದ್ದಿದ್ದರಿಂದ ಚಾಲಕ ದೊಡ್ಡ ಆರೋಪಗಳಿಂದ ಪಾರಾಗಿದ್ದಾನೆ. 

ಕೆಲ ತಿಂಗಳ ಹಿಂದೆ ಕ್ಯಾಬ್ ಚಾಲಕನೊಬ್ಬ ಕ್ಯಾನ್ಸಲೇಷನ್ ವಿಚಾರವಾಗಿ ಮಹಿಳೆಯೊಂದಿಗೆ ನಿಂದನೀಯ ಭಾಷೆ ಬಳಸಿ ಸಿಕ್ಕಿಬಿದ್ದಿದ್ದನು. ಈ ಘಟನೆಯ ನಂತರ ಚಾಲಕ ತನ್ನ ಕೆಲಸವನ್ನು ಕಳೆದುಕೊಂಡಿದ್ದನು. ಈ ವೇಳೆ ಮಹಿಳೆಯರು ಚಾಲಕನ ವಿರುದ್ಧ ಧ್ವನಿ ಎತ್ತಿದ್ದರು. ಈಗ ಚಾಲಕನ ಮೇಲೆಯೇ ಹಲ್ಲೆ ನಡೆದಿದ್ದು, ಎಲ್ಲಿದ್ದಾರೆ ಆ ಮಹಿಳೆಯರು ಎಂದು ಪುರುಷ ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ. 

ಇದನ್ನೂ ಓದಿ: ನಾಲ್ವರು ಹೆಂಡ್ತಿಯರಿದ್ರೂ 5ನೇ ಮದುವೆ ಆಸೆ ಹೇಳಿಕೊಂಡ ವ್ಯಕ್ತಿಗೆ ಮೌಲಾನಾ ಕೊಟ್ಟ ಸಲಹೆ ಏನು?

Scroll to load tweet…