* ಲೂಯಿಸಿಯಾನ ಮಾಲ್‌ನ ಬ್ಲೂ ಝೂ ಅಕ್ವೇರಿಯಂನಿಂದ ತಪ್ಪಿಸಿಕೊಂಡ ಹಾವು* ಎರಡು ದಿನಗಳ ಶೋಧದ ಬಳಿಕ ಪತ್ತೆ* ಎರಡು ದಿನಗಳ ಶೋಧದ ಬಳಿಕ ಪತ್ತೆಯಾಯ್ತು ಹಾವು

ವಾಷಿಂಗ್ಟನ್(ಜು.09): ಲೂಯಿಸಿಯಾನ ಮಾಲ್‌ನ ಬ್ಲೂ ಝೂ ಅಕ್ವೇರಿಯಂನ ತನ್ನ ಗೂಡಿನಿಂದ ತಪ್ಪಿಸಿಕೊಂಡ ಹಾವು ಎರಡು ದಿನಗಳ ಶೋಧದ ಬಳಿಕ ಪತ್ತೆಯಾಗಿದೆ. ಯುಪಿಐ ವರದಿಯ ಪ್ರಕಾರ, 12 ಅಡಿ ಉದ್ದದ ಹೆಬ್ಬಾವು 'ಕಾರಾ' ಸೋಮವಾರ ಸಂಜೆ ಕಾಣೆಯಾಗಿದೆ. ಈ ಕಾರಣದಿಂದಾಗಿ, ಮೃಗಾಲಯವನ್ನು ಎರಡು ದಿನಗಳವರೆಗೆ ಮುಚ್ಚಲಾಯ್ತು, ಇದರಿಂದ ಜನರಿಗೆ ಅಪಾಯವಾಗುವುದನ್ನು ತಡೆಯುವ ಜೊತೆ ಸುಲಭವಾಗಿ ಕಂಡುಹಿಡಿಯಬಹುದಾಗಿತ್ತು.

ಈ ಹಾವಾಗಿ ತಜ್ಞರ ಜೊತೆಗೆ ಮೃಗಾಲಯದ ಸಿಬ್ಬಂದಿ ಮಂಗಳವಾರ ರಾತ್ರಿ ಹೆಬ್ಬಾವಿಗಾಗಿ ಹುಡುಕಾಟ ನಡೆಸಿದ್ದಾರೆ ಆದರೆ ಯಾವುದೇ ಪ್ರಯೋಜನವಾಗಿಲ್ಲ. ಸಿಬ್ಬಂದಿ ಶೋಧ ಮುಂದುವರಿಸಿದ್ದರಿಂದ ಬುಧವಾರ ಮತ್ತೆ ಮೃಗಾಲಯವನ್ನು ಮುಚ್ಚಲಾಯಿತು. ಆದರೆ ಕೊನೆಗೂ ಗುರುವಾರ ಮುಂಜಾನೆ ಕಾರಾಳನ್ನು ಪತ್ತೆ ಹಚ್ಚಲಾಗೊದೆ. ಬ್ಲೂ ಅಕ್ವೇರಿಯಂನ ಮುಖ್ಯ ಮಾರುಕಟ್ಟೆ ಅಧಿಕಾರಿ ರೋಂಡಾ ಸ್ವಾನ್ಸನ್ ಅವರ ಪ್ರಕಾರ, ಹಾವು "ಗೋಡೆ, ಸೀಲಿಂಗ್ ಪ್ರದೇಶದಲ್ಲಿ" ಕಂಡುಬಂದಿದೆ. ಮಾಲ್‌ನಲ್ಲಿ ಸಣ್ಣ ಕ್ರಾಲ್ ಮೂಲಕ ಕಾರಾ ತನ್ನ ಅಲ್ಲಿಂದ ತಪ್ಪಿಸಿಕೊಂಡಿದ್ದಾಳೆ ಎಂದಿದ್ದಾರೆ. 

ಕಾರಾ ಗೋಡೆಯಿಂದ ಕೆಳ ಬಿದ್ದಿರುವ ದೃಶ್ಯವಿರುವ ವೀಡಿಯೋವನ್ನು ಮೃಗಾಲಯ ಸಾಮಾಜಿಕ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದೆ. ಹೆಬ್ಬಾವು ಸುರಕ್ಷಿತವಾಗಿದೆ ಎಂದು ಈ ಪೋಸ್ಟ್‌ನಲ್ಲಿ ತಿಳಿಸಲಾಗಿದೆ.