ತೇಲುವ ನಗರ ವೆನಿಸ್‌ ನೀರಿನಲ್ಲಿ ಮುಳುಗಿತು| ಭಾರೀ ಅಲೆಗಳಿಂದಾಗಿ ಜನವಸತಿ ಪ್ರದೇಶ ಪೂರ್ಣ ಜಲಾವೃತ

ವೆನಿಸ್‌[ಜ.14]: ನೀರಿನ ಮೇಲೆ ತೇಲುವ ನಗರಿ ಎಂಬ ಹೆಗ್ಗಳಿಕೆ ಹೊಂದಿರುವ ಇಟಲಿಯ ವೆನಿಸ್‌ ನಗರವೀಗ ಸಮುದ್ರದ ಉಬ್ಬರ ಹಾಗೂ ಭಾರೀ ಮಳೆಯಿಂದಾಗಿ ಪ್ರವಾಹಕ್ಕೆ ತುತ್ತಾಗಿದೆ. ಕಳೆದ 50 ವರ್ಷಗಳಲ್ಲೇ ಮೊದಲ ಬಾರಿ ನೀರಿನ ಮಟ್ಟಅತಿ ಹೆಚ್ಚು ಪ್ರಮಾಣದಲ್ಲಿ ಏರಿಕೆ ಕಂಡಿದೆ. ಪ್ರವಾಹ ಸಂಬಂಧಿತ ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.

ವೆನಿಸ್‌ನ ಬಹುತೇಕ ಭಾಗ ಸಮುದ್ರ ಮಟ್ಟದಿಂದ 1.1 ಮೀಟರ್‌ನಿಂದ 1.4 ಮೀಟರ್‌ನಷ್ಟುಎತ್ತರದಲ್ಲಿದೆ. ಆದರೆ, ಪ್ರವಾಹದ ನೀರು ಈಗಾಗಲೇ 1.87 ಮೀಟರ್‌ ಎತ್ತರ ತಲುಪಿದ್ದು, ನಗರದ ಶೇ.87ರಷ್ಟುಭಾಗ ಜಲಾವೃತಗೊಂಡಿದೆ. ಭಾರೀ ಮಳೆಯಿಂದಾಗಿ 1.60 ಮೀಟರ್‌ ಎತ್ತರದ ಸಮುದ್ರದ ಅಲೆಗಳು ಏಳುವ ಸಾಧ್ಯತೆ ಇದ್ದು, ವೆನಿಸ್‌ ಇನ್ನಷ್ಟುಅಪಾಯಕ್ಕೆ ಸಿಲುಕುವ ಸಾಧ್ಯತೆ ಇದೆ.

ಇದೇ ವೇಳೆ ವೆನಿಸ್‌ನಲ್ಲಿ ಪ್ರವಾಹದ ನೀರಿನ ಮಟ್ಟಏರಿಕೆಗೆ ಹವಾಮಾನ ಬದಲಾವಣೆಯೇ ಕಾರಣ ಎಂದು ನಗರದ ಮೇಯರ್‌ ಮೇಯರ್‌ ಲುಯಿಗಿ ಬ್ರೂಗ್ನಾರೊ ಆರೋಪಿಸಿದ್ದು, ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ.