Asianet Suvarna News Asianet Suvarna News

ಬೆಡ್‌ರೂಂನಿಂದ ಟಾಯ್ಲೆಟ್‌ವರೆಗೆ; ವರ್ಷಕಾಲ ಎಲ್ಲವೂ ಲೈವ್..ಲೈವ್!

ಇಡೀ ವರ್ಷ ಲೈವ್ ಸ್ಟ್ರೀಮ್ ನಲ್ಲಿ ಕಳೆದ ಯುವಕ/ ಜೀವನದ ದೈನಂದಿನ ಎಲ್ಲ ಘಟನೆಗಳು ನೇರ ಪ್ರಸಾರ/ ತನ್ನ ಜೀವನವನ್ನೇ ತಾನು ನೋಡಿಕೊಂಡು ಕೆಲ ಬದಲಾವಣೆ

USA Man live-streams his life for 365 days includes washroom
Author
Bengaluru, First Published Aug 25, 2020, 9:08 PM IST

ನ್ಯೂಯಾರ್ಕ್(ಆ. 25) ಬಿಗ್ ಬಾಸ್ ಮನೆಯಲ್ಲಿ ವ್ಯಕ್ತಿಗಳ ಜೀವನ ಶೈಲಿಯನ್ನು ಲೈವ್ ಆಗಿ ತೋರಿಸುತ್ತಾರೆ ಆದರೂ ಬಾತ್ ರೂಂ ನಲ್ಲಿಮ ಕ್ಯಾಮರಾ ಇಡಲ್ಲ. ನಿಮ್ಮ ಇಡೀ ದಿನದ ಬದುಕು..ಊಟ-ತಿಂಡಿ, ನಿದ್ರೆ,  ಕೆಲಸ, ಮಲ-ಮೂತ್ರ ವಿಸರ್ಜನೆ ಎಲ್ಲವೂ ಲೈವ್ ಆಗಿ ಪ್ರಸಾರವಾಗುತ್ತಿದ್ದರೆ! ಊಹೆ ಮಾಡಿಕೊಳ್ಳುವುದಕ್ಕೂ ಕಷ್ಟ ಆಗುತ್ತಿದೆ ಅಲ್ಲವೇ?

ಆದರೆ ಇಲ್ಲೊಬ್ಬ ವ್ಯಕ್ತಿ ತನ್ನ ಎ ಟು ಜಡ್ ಬದುಕನ್ನು ಒಂದು ವರ್ಷ ಲೈವ್ ನೀಡಿದ್ದಾನೆ. ಅಮೆರಿಕದ ಮೈಕಲ್ ಗ್ಯಾರಿ ಒಂದು ವರ್ಷ ಕಾಲ ತನ್ನ ಇಡೀ ಬದುಕಿನ ಕ್ಷಣಗಳನ್ನು ಲೈವ್ ನೀಡಿ ಸುದ್ದಿ ಮಾಡಿದ್ದಾನೆ. ನಾನು ಯಾಕೆ ಹೀಗೆ ಮಾಡಿದೆ ಎನ್ನುವುದಕ್ಕೆ ಇಂದಿಗೂ ನನಗೆ ಉತ್ತರ ಸಿಕ್ಕಿಲ್ಲ ಎಂದು ಮೈಕಲ್ ಹೇಳಿದ್ದಾರೆ.

ಆನ್ ಲೈನ್ ಮೀಟಿಂಗ್ ಮಧ್ಯೆಯೇ ಜೋಡಿಯ ಮುಕ್ತ ಸೆಕ್ಸ್

ಕಾಲೇಜಿನಿಂದ ಡ್ರಾಪ್ ಔಟ್ ಆದ ಮೈಕಲ್ ಆತ್ಮಹತ್ಯೆ ಮಾಡಿಕೊಳ್ಳುವ ಯೋಚನೆಯನ್ನು ಮಾಡಿದ್ದರು. ಇದೆಲ್ಲದರಿಂದ ಹೊರಬರಬೇಕು ಎಂದಾಗ ಲೈವ್ ಹೋಗುವ ಐಡಿಯಾ ಅವರ ತಲೆಗೆ ಬಂತು.

ಮನೆಯ ಎಲ್ಲ ಮೂಲೆಗಳಲ್ಲಿಯೂ ಕ್ಯಾಮರಾ ಅಳವಡಿಕೆ ಮಾಡಿ ಜೀವನ ಶುರು ಮಾಡಿದರು. ತಿನ್ನುವುದು, ಮಲಗುವುದು ಎಲ್ಲವೂ ಲೈವ್, ಲೈವ್ ..ಲೈವ್..

ಅರಿಯಾ ಇಂಥಾವೊಂಗ್ ಎಂಬುವರು ಈ ಲೈವ್ ಸ್ಟ್ರೀಮ್ ಅಲ್ಲ ಲೈಫ್ ಸ್ಟ್ರೀಮ್ ಗೆ ನನಗೆ ಪ್ರೇರಣೆಯಾದರು.  ಒಂದು ವಾರ ಕಾಲ ಅವರು ಎಲ್ಲವನ್ನು ಲೈವ್ ಮಾಡಿದ್ದರು.  ಇದೊಂದು ಕುತೂಹಲಕಾರಿ ಅಂಶ ಎಂದು ನನಗೆ ಅನ್ನಿಸಿತು ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ನನ್ನ ಲೈವ್ ಸ್ಟ್ರೀಮ್ ನಾನೇ ನೋಡಿಕೊಂಡು ಜೀವನ ಶೈಲಿಯಲ್ಲಿ ಕೆಲ ಮಾರ್ಪಾಡು ಮಾಡಿಕೊಂಡೆ.  ಮದ್ಯ ಮತ್ತು ಮಾದಕ ವಸ್ತು ಸೇವನೆಯನ್ನು ನಿಲ್ಲಿಸಿದೆ ಎಂದು ತಿಳಿಸುತ್ತಾರೆ.

 

Follow Us:
Download App:
  • android
  • ios