* ಕಾಬೂಲ್‌ನಿಂದ ತೆರಳಿದ ಅಮೆರಿಕ ಯೋಧರು* ಸೇವಾ ಶ್ವಾನಗಳ ಬಿಟ್ಟುಹೋದ ಅಮೆರಿಕ: ಭಾರೀ ಟೀಕೆ

ಕಾಬೂಲ್‌(ಸೆ.01): ಸೋಮವಾರ ರಾತ್ರಿ ಕಾಬೂಲ್‌ನಿಂದ ತೆರಳಿದ ಅಮೆರಿಕ ಯೋಧರು, ಈ ವೇಳೆ ತಮ್ಮ ಅಫ್ಘನ್‌ ಕಾರ್ಯಾಚರಣೆ ವೇಳೆ ಸೇವೆಗಾಗಿ ಬಳಸಿಕೊಂಡಿದ್ದ ಹಲವು ಶ್ವಾನಗಳನ್ನು ಏರ್‌ಪೋರ್ಟ್‌ನಲ್ಲೇ ಬಿಟ್ಟುಹೋಗಿದ್ದಾರೆ.

ಅಮೆರಿಕ ಸರ್ಕಾರದ ಈ ಕ್ರಮದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆ ವ್ಯಕ್ತವಾಗಿದೆ. ಕಾರ್ಯಾಚರಣೆ ವೇಳೆ ಬಾಂಬ್‌ ಪತ್ತೆ ಸೇರಿದಂತೆ ನಾನಾ ಕೆಲಸಗಳಿಗಾಗಿ ಇವುಗಳನ್ನು ತರಬೇತಿ ನೀಡಿ ಬಳಸಿಕೊಳ್ಳಲಾಗಿತ್ತು. ಆದರೆ ತಮ್ಮ ಕೆಲಸ ಮುಗಿಯುತ್ತಲೇ ಅವುಗಳನ್ನು ಅನಾಥರಾಗಿ ಬಿಟ್ಟುಹೋಗಿದ್ದಕ್ಕೆ ಪ್ರಾಣಿಪ್ರಿಯ ಸಂಘಟನೆಗಳು ಕಿಡಿಕಾರಿವೆ.

Scroll to load tweet…

ಈ ನಡುವೆ ಅಮೆರಿಕದ ಸಂಘಟನೆಯೊಂದು ಸ್ಥಳೀಯ ಸಂಸ್ಥೆಗಳ ಜೊತೆಗೂಡಿ ನಾಯಿಗಳನ್ನು ಸುರಕ್ಷಿತವಾಗಿ ತೆರವು ಮಾಡುವ ಕೆಲಸಕ್ಕೆ ಕೈಹಾಕಿದೆ.