ಅಮೆರಿಕ ಚುನಾವಣೆ: ಭಾರತೀಯ ಮೂಲದವರ ಬೆಂಬಲ ಕಳೆದುಕೊಂಡರೇ ಬೈಡನ್ ?
2020ರ ಅಧ್ಯಕ್ಷೀ ಯ ಚುನಾವಣೆಗೆಹೋಲಿಸಿದರೆ 2024ರಲ್ಲಿ ಅಮೆರಿಕದ ಅಧ್ಯಕ್ಷ ಜೋ ಬೈಡನ್ ರನ್ನು ಬೆಂಬಲಿಸುವ ಭಾರತ ಮೂಲದ ಅಮೆರಿಕನ್ನರ ಸಂಖ್ಯೆಯಲ್ಲಿ ಶೇ.19ರಷ್ಟು ಕುಸಿದಿದೆ.
ಅಮೆರಿಕ ಅಧ್ಯಕ್ಷ ಜೋ ಬೈಡನ್ಗೆ ಭಾರತೀಯ ಮೂಲದ ಅಮೇರಿಕನ್ನರ ಬೆಂಬಲ ಕಳೆದುಕೊಂಡಿದ್ದಾರಾ ? ಹೌದು ಎನ್ನುತ್ತಿದೆ ಸಮೀಕ್ಷೆ. ಏಷ್ಯನ್ಅಮೆರಿಕ (ಎಎವಿಎಸ್) ಮತದಾನದ ದೈವಾರ್ಷಿಕ ಸಮೀಕ್ಷೆಯಲ್ಲಿ, ಬೈಡನ್ ಭಾರತೀಯ ಮೂಲದ ಅಮೇರಿಕನ್ನರ ಬೆಂಬಲ ಕಳೆದುಕೊಂಡಿರುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.
ಬೈಡನ್ ಬೆಂಬಲಿಸುವ ಭಾರತ ಮೂಲದ ಅಮೆರಿಕನ್ನರ ಸಂಖ್ಯೆಯಲ್ಲಿ ಶೇ.19ರಷ್ಟು ಕುಸಿತ ಆಗಿದೆ’ ಎ್ನುತ್ತಿದೆ ಈ ಸಮೀಕ್ಷೆ. ಏಷ್ಯನ್ ಅಮೆರಿಕದ ಮತದಾರರನ್ನು ಒಳಗೊಂಡು ನಡೆಸಿದ ದೀರ್ಘ ಕಾಲದ ಸಮೀಕ್ಷೆ, ಬೈಡನ್ ಬೆಚ್ಚಿಬೀಳಿಸುವಂತೆ ಮಾಡಿದೆ.
ಅಧ್ಯಕ್ಷ ಜೋ ಬೈ ಡನ್ ಹಾಗೂ ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂ ಪ್ ನಡುವೆ ಜೂನ್ 27ರಂ ದು ನಡೆದ ಅಧ್ಯಕ್ಷೀಯ ಚರ್ಚೆ ಗೂ ಮುನ್ನ ಈ ಸಮೀಕ್ಷೆ ನಡೆಸಲಾಗಿತ್ತು. 2020ರ ಅಧ್ಯಕ್ಷೀ ಯ ಚುನಾವಣೆಗೆಹೋಲಿಸಿದರೆ 2024ರಲ್ಲಿ ಅಮೆರಿಕದ ಅಧ್ಯಕ್ಷ ಜೋ ಬೈಡನ್ ರನ್ನು ಬೆಂಬಲಿಸುವ ಭಾರತ ಮೂಲದ ಅಮೆರಿಕನ್ನರ ಸಂಖ್ಯೆಯಲ್ಲಿ ಶೇ.19ರಷ್ಟು ಕುಸಿದಿದೆ. ಎರಡು ದಶಕಗಳಲ್ಲಿ ಅಮೆರಿಕದಲ್ಲಿ ಮತದಾನದ ಹಕ್ಕು ಪಡೆದವರಲ್ಲಿ ಏಷ್ಯನ್–ಅಮೆರಿಕನ್ನರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ.
2016ಕ್ಕೆ ಹೋಲಿಸಿದರೆ ಮತದಾರರ ಸಂಖ್ಯೆಯಲ್ಲಿ ಶೇ.15ರಷ್ಟು ಏರಿಕೆಯಾಗಿದೆ. 2020ರಲ್ಲಿ ಮೊದಲ ಬಾರಿ ಮತ ಚಲಾಯಿಸಿದವರು ಗೆಲುವಿನ ನಿರ್ಣ ಯದಲ್ಲಿ ಪ್ರಮುಖ ವಹಿಸಿದ್ದ ರಾಜ್ಯಗಳಲ್ಲಿ ಬೈ ಡನ್ ಭಾರಿ ಮುನ್ನಡೆ ಕಾಯ್ದುಕೊಂಡಿದ್ದರು. ಈ ರಾಜ್ಯಗಳಲ್ಲಿಯೇ ಈ ಸಲ ಬೈ ಡನ್, ಬೆಂಬಲಿಸುವವರ ಪ್ರಮಾಣದಲ್ಲಿ ಕುಸಿತವಾಗಿದೆ.
ಇನ್ನು, ಅಮೆರಿಕದ ಮೊದಲ ಉಪಾಧ್ಯಕ್ಷೆಯಾಗಿ ಆಯ್ಕೆಯಾದ ಭಾರತೀಯ ಮೂಲದ ಕಮಲಾ ಹ್ಯಾರಿಸ್ ಪರ, ಶೇ.54ರಷ್ಟು ಏಷ್ಯನ್ಅಮೆರಿಕನ್ನರು ಒಲವು ಹೊಂದಿದ್ದು, ಶೇ 38ರಷ್ಟು ಮಂದಿ ಕಮಲಾ ಮರು ಆಯ್ಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಸಮೀಕ್ಷೆಗಳು ಬೈಡನ್ ಮತ್ತು ಕಮಲಾ ಹ್ಯಾರಿಸ್ ತಲೆಬಿಸಿ ಹೆಚ್ಚಿಸಿರುವುದು ಸುಳ್ಳಲ್ಲ.