ಅಮೆರಿಕದ ಪೆನ್ಸಿಲ್ವೇನಿಯಾ ರಾಜ್ಯದ ಸೂಪರ್‌ ಮಾರ್ಕೆಟ್‌ವೊಂದಕ್ಕೆ ತೆರಳಿದ ನಕಲಿ ಕೊರೋನಾ ಸೋಂಕಿತೆ 25 ಲಕ್ಷ ರು. ಮೊತ್ತದ ಆಹಾರ ಪದಾರ್ಥಗಳು, ಹಣ್ಣು- ತರಕಾರಿಗಳ ಮುಂದೆ ನಿಂತು ಕೆಮ್ಮಿದಳು ತೊಂದರೆ ಕೊಟ್ಟಿದ್ದಕ್ಕೆ ಕೋರ್ಟ್‌ ಆಕೆಗೆ 2 ವರ್ಷಗಳ ಜೈಲು ಶಿಕ್ಷೆ ಹಾಗೂ 22 ಲಕ್ಷ ರು. ದಂಡ 

ಪೆನ್ಸಿಲ್ವೇನಿಯಾ (ಆ.27) : ಕೊರೋನಾ ಸೋಂಕಿತರು ಕೆಲವೊಮ್ಮೆ ಎಲ್ಲೆಂದರಲ್ಲಿ ಓಡಾಡಿ ಆತಂಕ ಸೃಷ್ಟಿಸಿದ ಘಟನೆಗಳನ್ನು ನೋಡಿದ್ದೇವೆ. 

ಆದರೆ, ಅಮೆರಿಕದ ಪೆನ್ಸಿಲ್ವೇನಿಯಾ ರಾಜ್ಯದ ಸೂಪರ್‌ ಮಾರ್ಕೆಟ್‌ವೊಂದಕ್ಕೆ ತೆರಳಿದ ಕೊರೋನಾ ಸೋಂಕಿತೆಯೊಬ್ಬಳು 25 ಲಕ್ಷ ರು. ಮೊತ್ತದ ಆಹಾರ ಪದಾರ್ಥಗಳು, ಹಣ್ಣು- ತರಕಾರಿಗಳ ಮುಂದೆ ನಿಂತು ಕೆಮ್ಮಿ, ಎಂಜಲನ್ನು ಉಗುಳಿದ್ದಾಳೆ. 

ಏರ್‌ಪೋರ್ಟ್‌ನಲ್ಲಿ ಕೋವಿಡ್‌ ಟೆಸ್ಟ್‌ ಮಾಡಿಸಿ ಮನೆಗೆ ಹೋಗ್ಬಹುದು: ಸರ್ಕಾರ

ಅಲ್ಲದೇ ಮಾರ್ಗರೇಟ್‌ ಆನ್‌ ಸಿರ್ಕೊ ತನಗೆ ಕೊರೋನಾ ಸೋಂಕು ತಗಲಿದೆ ಎಂದು ಹೇಳಿ ಎಲ್ಲರನ್ನೂ ಬೆಚ್ಚಿ ಬೀಳಿಸಿದ್ದಾಳೆ. 

ಕೂಡಲೇ ಆಕೆಯನ್ನು ಬಂಧಿಸಿ ಪರೀಕ್ಷೆಗೆ ಒಳಪಡಿಸಿದ ವೇಳೆ ಕೊರೋನಾ ವರದಿ ನೆಗೆಟಿವ್‌ ಬಂದಿದ್ದು ಎಲ್ಲರೂ ನಿಟ್ಟುಸಿರು ಬಿಟ್ಟಿದ್ದಾರೆ. 

ಆದರೆ, ಉದ್ದೇಶಪೂರ್ವಕವಾಗಿ ಸಾರ್ವಜನಿಕರಿಗೆ ತೊಂದರೆ ಕೊಟ್ಟಿದ್ದಕ್ಕೆ ಕೋರ್ಟ್‌ ಆಕೆಗೆ 2 ವರ್ಷಗಳ ಜೈಲು ಶಿಕ್ಷೆ ಹಾಗೂ 22 ಲಕ್ಷ ರು. ದಂಡ ವಿಧಿಸಿದೆ.