*   ಫಲಿತಾಂಶ ಬರುವವರೆಗೂ ಕಾಯಬೇಕಿಲ್ಲ*   ರಾಜ್ಯ ಸರ್ಕಾರದಿಂದ ಹೊಸ ಸುತ್ತೋಲೆ ಪ್ರಕಟ*   ಆರ್‌ಟಿಪಿಸಿಆರ್‌ ಪರೀಕ್ಷೆ ಕಡ್ಡಾಯಗೊಳಿಸಿದ ಸರ್ಕಾರ  

ಬೆಂಗಳೂರು(ಆ.25): ಬ್ರೆಜಿಲ್‌ ಮತ್ತು ದಕ್ಷಿಣ ಆಫ್ರಿಕಾ ಹೊರತು ಪಡಿಸಿ ಅನ್ಯ ದೇಶಗಳಿಂದ ರಾಜ್ಯ ಪ್ರವೇಶಿಸುವ ಜನರು ವಿಮಾನ ನಿಲ್ದಾಣದಲ್ಲಿ ಕೋವಿಡ್‌ ಪರೀಕ್ಷೆಗೆ ಮಾದರಿ ನೀಡಿ ನಿಲ್ದಾಣದಿಂದ ನಿರ್ಗಮಿಸಬಹುದು ಎಂದು ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ. ಈ ಮೊದಲು ವಿದೇಶದಿಂದ ಬಂದವರು ನಿಲ್ದಾಣದಲ್ಲಿ ಕೋವಿಡ್‌ ಪರೀಕ್ಷೆಗೆ ಮಾದರಿ ನೀಡಿ ಫಲಿತಾಂಶ ಬರುವವರೆಗೆ ನಿಲ್ದಾಣ ಬಿಟ್ಟು ಹೋಗಲು ನಿರ್ಬಂಧ ವಿಧಿಸಲಾಗಿತ್ತು.

ಈಗ ಮಧ್ಯಪ್ರಾಚ್ಯ, ಯೂರೋಪ್‌ ಮತ್ತು ಯುನೈಟೆಡ್‌ ಕಿಂಗ್‌ಡಮ್‌ನಿಂದ ವಿಮಾನ ನಿಲ್ದಾಣ ಮೂಲಕ ರಾಜ್ಯ ಪ್ರವೇಶಿಸುವ ಪ್ರಯಾಣಿಕರು ನಿಲ್ದಾಣದಲ್ಲಿ ಮಾದರಿ ನೀಡಿ ತಮ್ಮ ಮನೆ ಅಥವಾ ಕಾರ್ಯಸ್ಥಾನಕ್ಕೆ ನಿರ್ಗಮಿಸಬಹುದಾಗಿದೆ. ಬ್ರೆಜಿಲ್‌ ಮತ್ತು ದಕ್ಷಿಣ ಆಫ್ರಿಕಾದಿಂದ ಆಗಮಿಸುತ್ತಿರುವವರು ನೆಗೆಟಿವ್‌ ವರದಿ ಬಂದರೆ ತಮ್ಮ ಪ್ರಯಾಣವನ್ನು ಮುಂದುವರಿಸಬಹುದಾಗಿದೆ.

ಲಸಿಕೆ ಪಡೆಯಿರಿ, ಕೋವಿಡ್‌ ಮಾರ್ಗಸೂಚಿ ಪಾಲಿಸಿ : ಉಪರಾಷ್ಟ್ರಪತಿ

ಕೊರೋನಾ ರೂಪಾಂತರಿ ವೈರಾಣು ರಾಜ್ಯ ಪ್ರವೇಶಿಸುವುದನ್ನು ತಡೆಯುವ ಉದ್ದೇಶದಿಂದ ಈ ಮೇಲಿನ ದೇಶಗಳಿಂದ ರಾಜ್ಯ ಪ್ರವೇಶಿಸುವವರು ವಿಮಾನ ಏರುವ ಮುಂಚಿನ ನೆಗೆಟಿವ್‌ ವರದಿ ಹೊಂದಿದ್ದರೂ ರಾಜ್ಯ ಪ್ರವೇಶಿಸಿದೊಡನೆ ಆರ್‌ಟಿಪಿಸಿಆರ್‌ ಪರೀಕ್ಷೆ ನಡೆಸುವುದನ್ನು ಕಡ್ಡಾಯ ಮಾಡಿ ಫೆಬ್ರವರಿಯಲ್ಲಿ ರಾಜ್ಯ ಸರ್ಕಾರ ಆದೇಶಿಸಿತ್ತು.