ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ಚೀಪ್ ಅಂಡ್ ಬೆಸ್ಟ್ ಟೂರ್ ಪ್ಯಾಕೇಜಸ್; ರೂ. 1,650 ರಿಂದ ಆರಂಭ!
ಕರ್ನಾಟಕ ಪ್ರವಾಸೋದ್ಯಮ ಇಲಾಖೆಯು ರಾಜ್ಯದ ವಿವಿಧ ಪ್ರವಾಸಿ ತಾಣಗಳಿಗೆ ಆಕರ್ಷಕ ಟೂರ್ ಪ್ಯಾಕೇಜ್‌ಗಳನ್ನು ಪ್ರಕಟಿಸಿದೆ. ಒಂದು ದಿನದಿಂದ ಒಂದು ವಾರದವರೆಗಿನ (ರೂ.1,650ರಿಂದ ರೂ.15,000ವರೆಗೆ) ಪ್ಯಾಕೇಜ್‌ಗಳಿದ್ದು, ದೇವಾಲಯಗಳು, ಕರಾವಳಿ ಪ್ರದೇಶಗಳು, ಮತ್ತು ಹಿನ್ನೀರಿನ ಪ್ರವಾಸಗಳನ್ನು ಒಳಗೊಂಡಿದೆ.
ಕರ್ನಾಟಕವನ್ನು ಒಂದು ರಾಜ್ಯ ಹಲವು ಪ್ರಪಂಚಗಳ ಎಂಬ ಟ್ಯಾಗ್‌ಲೈನ್‌ನಿಂದಿಗೆ ಕರ್ನಾಟಕ ಪ್ರವಾಸೋದ್ಯಮ ಇಲಾಖೆಯು ಅದ್ಭುತ ಪ್ರವಾಸದ ಅನುಭವವನ್ನು ನೀಡುತ್ತಿದೆ. ರಾಜ್ಯದ ಶಿಲ್ಪಕಲೆ, ಕರಾವಳಿ, ಆಧ್ಯಾತ್ಮಿಕತೆ, ನೈಸರ್ಗಿತ ತಾಣಗಳು, ಸಾಂಸ್ಕೃತಿಕ ಪರಂಪರೆ ಸೇರಿದಂತೆ ಹಲವು ಪ್ರದೇಶಗಳಿಗೆ ಪ್ರವಾಸ ಕರೆದೊಯ್ಯಲು ಪ್ಯಾಕೇಜ್ ಆರಂಭಿಸಿದೆ. ಇದರಲ್ಲಿ ಒಂದು ದಿನದಿಂದ ಒಂದು ವಾರದವರೆಗಿನ ಪ್ಯಾಕೇಜ್‌ಗಳಿದ್ದು, ರಾಜ್ಯ ಮತ್ತು ಹೊರ ರಾಜ್ಯಗಳ ಪ್ರವಾಸಿ ತಾಣಕ್ಕೂ ಟೂರ್ ಪ್ಯಾಕೇಜ್ ಆರಂಭಿಸಿದೆ. ಇಲ್ಲಿ ಒಂದು ದಿನದ ರೂ. 1,650 ರಿಂದ ಆರಂಭವಾಗುವ ಟೂರ್ ಪ್ಯಾಕೇಜ್ 6 ದಿನಗಳವರೆಗಿನ 15,000 ರೂ. ದರ ಟೂರ್ ಪ್ಯಾಜೇಜ್‌ಗಳು ಒಳಗೊಂಡಿವೆ.
ಕರ್ನಾಟಕ ದಿವ್ಯ ದರ್ಶನ ಪ್ಯಾಕೇಜ್:
ಪ್ರತಿ ಬುಧವಾರ ಬೆಂಗಳೂರಿನಿಂದ ದಕ್ಷಿಣ ಕರ್ನಾಟಕದ ದೇವಾಲಯಗಳ ದಿವ್ಯ ದರ್ಶನಕ್ಕೆ ಪ್ರವಾಸವನ್ನು ಆಯೋಜಿಸಲಾಗಿದೆ. ದಕ್ಷಿಣ ಕನ್ನಡ ಮತ್ತು ಗೋಕರ್ಣ ಪ್ರವಾಸಕ್ಕೆ 6 ದಿನಗಳ ಸಮಯ ನಿಗದಿ ಮಾಡಲಾಗಿದ್ದು, ಪ್ರತಿ ವ್ಯಕ್ತಿಗೆ 9,460 ರೂ. ದರ ನಿಗದಿಪಡಿಸಲಾಗಿದೆ. ಇದರಲ್ಲಿ ಜನಪ್ರಿಯ ಪವಿತ್ರ ಕ್ಷೇತ್ರಗಳು ಮತ್ತು ಕರಾವಳಿ ತಾಣಗಳಿಗೆ ಭೇಟಿ ನೀಡಲಾಗುತ್ತದೆ. ಇದರಲ್ಲಿಯೂ ಹಿರಿಯ ನಾಗರಿಕರಿಗೆ ಶೇ.20 ರಿಯಾಯಿತಿ ನೀಡಲಾಗುತ್ತದೆ.
ಮಹಾನಂದಿ - ಶ್ರೀಶೈಲಂ - ಹೈದರಾಬಾದ್:
ಜನಪ್ರಿಯ ಪವಿತ್ರ ಕ್ಷೇತ್ರಗಳು ಮತ್ತು ಕರಾವಳಿ ತಾಣಗಳಿಗೆ ಪ್ರವಾಸ: ಬೆಂಗಳೂರು - ಮಹಾನಂದಿ - ಶ್ರೀಶೈಲಂ - ಹೈದರಾಬಾದ್ ಪ್ರದೇಶಗಳಿಗೆ 6 ದಿನಗಳ ಪ್ರವಾಸವನ್ನು ರಾಜ್ಯ ಪ್ರವಾಸೋದ್ಯಮ ಇಲಾಖೆ ಆಯೋಜನೆ ಮಾಡಿದೆ. ಇದರಲ್ಲಿ ಪ್ರತಿ ವ್ಯಕ್ತಿಗೆ 15,900 ರೂ. ದರ ನಿಗದಿ ಮಾಡಲಾಗಿದೆ. ಹೊರ ರಾಜ್ಯಕ್ಕೆ ಪ್ರವಾಸ ಹೋಗುವುದರಿಂದ ಅಲ್ಲಿನ ತೆರಿಗೆ ವೆಚ್ಚಗಳು ಕೂಡ ಹೆಚ್ಚಾಗುವುದರಿಂದ ಪ್ರವಾಸದ ದರ ಕೂಡ ತುಸು ಹೆಚ್ಚಾಗಿದೆ. ಪ್ರತಿ ತಿಂಗಳ 2ನೇ ಮತ್ತು 4ನೇ ಬುಧವಾರ ಈ ಪ್ರವಾಸ ಆರಂಭವಾಗಲಿದೆ. ಇದರಲ್ಲಿ ಮಹಾನಂದೀಶ್ವರ ದೇವಸ್ಥಾನ, ಬೇಲಂ ಗುಹೆಗಳು, ಬಿರ್ಲಾ ಮಂದಿರ ಹಾಗೂ ರಾಮೋಜಿ ಫಿಲಂ ಸಿಟಿ ವೀಕ್ಷಣೆ ಕೂಡ ಸೇರಿದೆ.
ತೇಲುವ ದೋಣಿಯಲ್ಲಿ ವಾಸ್ತವ್ಯ:
ಕೇರಳ ನಾಡಿನ ಭವ್ಯ ಪ್ರದೇಶಗಳ ಸುಂದರ ಪ್ರವಾಸ. ಮುನ್ನಾರ್ - ತೆಕ್ಕಡಿ - ಕುಮಾರಕೋಮ್ (ಅಲೆಪ್ಪಿ ಹಿನ್ನೀರು) ಪ್ರವಾಸಕ್ಕೆ 6 ದಿನಗಳನ್ನು ನಿಗದಿ ಮಾಡಲಾಗಿದೆ. ಪ್ರತಿ ಬುಧವಾರ ಈ ಪ್ರವಾಸವನ್ನು ಆಯೋಜನೆ ಮಾಡಲಾಗಿದ್ದು, ಹೊರಡುವ ಸ್ಥಳ ಬೆಂಗಳೂರು ಆಗಿದೆ. ಒಬ್ಬರಿಗೆ 13,150 ರೂ. ದರ ನಿಗದಿ ಮಾಡಲಾಗಿದೆ. ಇಲ್ಲಿ ಅಲೆಪ್ಪಿ ಹಿನ್ನೀರಿನಲ್ಲಿ ಬೊಟಿಂಗ್ ಹೌಸ್‌ನಲ್ಲಿ ಉಳಿದುಕೊಳ್ಳುವ ಸೌಲಭ್ಯವನ್ನು ಕಲ್ಪಿಸಲಾಗುತ್ತದೆ. ಇದರಲ್ಲಿಯೂ ಹಿರಿಯ ನಾಗರಿಕರಿಗೆ ಶೇ.20 ರಿಯಾಯಿತಿ ಕೊಡಲಾಗಿದೆ.
ಬೆಂಗಳೂರು - ವಯನಾಡ್
ಪ್ರಕೃತಿಯ ತನ್ಮಯತೆಗೆ ಸಾಕ್ಷಿ ಆಗಿರುವ ಕೇರಳದ ವಯನಾಡ್ ಪ್ರವಾಸವನ್ನು ಆಯೋಜಿಸಲಾಗಿದೆ. ಈ ಪ್ರವಾಸಕ್ಕೆ ಬೆಂಗಳೂರಿನಿಂದ ವಯನಾಡಿಗೆ ಹೋಗಲಿದೆ. ಪ್ರತಿ ಶುಕ್ರವಾರ ಈ ಪ್ರವಾಸ ಆರಂಭವಾಗಲಿದ್ದು, 3 ದಿನಗಳ ಪ್ರವಾಸ ಅವಧಿಯಾಗಿದೆ. ಈ ಟೂರ್ ಪ್ಯಾಕೇಜ್‌ಗೆ ಪ್ರತಿ ವ್ಯಕ್ತಿಗೆ 7,650 ರೂ. ದರ ನಿಗದಿಪಡಿಸಲಾಗಿದೆ. ಇದರ ಜೊತೆಗೆ ಹಿರಿಯ ನಾಗರಿಕರಿಗೆ ಶೇ.20 ರಿಯಾಯಿತಿ ನೀಡಲಾಗುತ್ತದೆ.
ಗೋಲ್ಡನ್ ಟೆಂಪಲ್ ಪ್ರವಾಸ:
ಒಂದು ದಿನದ ಪ್ರವಾಸಕ್ಕೂ ಪ್ರವಾಸೋದ್ಯಮ ಇಲಾಖೆ ಅವಕಾಶ ಮಾಡಿಕೊಟ್ಟಿದೆ. ಒಂದು ದಿನದ ಪ್ರವಾಸದಲ್ಲಿ ವೆಲ್ಲೂರಿನ ಪ್ರಸಿದ್ಧ ದೇವಾಲಯದ ದರ್ಶನ ಮಾಡಲು ಅವಕಾಶ ನೀಡಲಾಗಿದೆ. ವೆಲ್ಲೂರಿನ ಮಹಾಲಕ್ಷ್ಮೀ ಗೋಲ್ಡನ್ ಟೆಂಪಲ್ ಪ್ರವಾಸಕ್ಕೆ ಪ್ರತಿ ವ್ಯಕ್ತಿಗೆ 1,650 ರೂ. ದರವನ್ನು ನಿಗದಿ ಮಾಡಲಾಗಿದೆ. ಬೆಂಗಳೂರಿನಿಂದ ಹೊರಟು ಒಂದು ದಿನದಲ್ಲಿ ಪ್ರವಾಸ ಮುಗಿಸಿಕೊಂಡು ವಾಪಸ್ ಕರೆದುಕೊಂಡು ಬರಲಾಗುತ್ತದೆ. ಇನ್ನು ವಾರದ ಪ್ರತಿ ಶುಕ್ರವಾರ, ಶನಿವಾರ ಹಾಗೂ ಭಾನುವಾರ ಈ ಪ್ರವಾಸದ ವ್ಯವಸ್ಥೆ ಮಾಡಲಾಗಿದೆ.
ಈ ಲಿಂಕ್ ಮೇಲೆ ಕ್ಲಿಕ್ ಮಾಡಿ https://www.kstdc.co/kn/# ಈ ಮೇಲಿನ ಟೂರ್ ಪ್ಯಾಕೇಜ್ ಬುಕ್ ಮಾಡಬಹುದು.