ನ್ಯೂಯಾರ್ಕ್(ಅ. 22)  ಭಾರತ, ಶ್ರೀಲಂಕಾ, ಮಾಲ್ಡೀವ್ಸ್‌ ಮತ್ತು ಇಂಡೋನೇಷಿಯಾಯಾಕ್ಕೆ  ಅಮೆರಿಕದ  ಸೆಕ್ರೆಟರಿ ಆಫ್‌ ಸ್ಟೇಟ್‌ ಮೈಕಲ್‌ ಆರ್‌. ಪಾಂಪಿಯೋ ಪ್ರವಾಸ  ಕೈಗೊಳ್ಳಲಿದ್ದಾರೆ.

ಅವರು ಅಕ್ಟೋಬರ್ 25 – 30  ಅವಧಿಯಲ್ಲಿ ಭಾರತದ ನವದೆಹಲಿ, ಶ್ರೀಲಂಕಾದ ಕೊಲೊಂಬೊ, ಮಾಲ್ಡೀವ್ಸ್‌ನ ಮಾಲೆ, ಮತ್ತು ಇಂಡೋನೇಷ್ಯಾದ ಜಕಾರ್ತಕ್ಕೆ ಭೇಟಿ ನೀಡಲಿದ್ದಾರೆ. 

ಯುಎಸ್. ಕಾನ್ಸುಲೇಟ್ ಜನರಲ್, ಸಾರ್ವಜನಿಕ ವ್ಯವಹಾರಗಳ ಅಧಿಕಾರಿ ಆನ್ ಲೀ ಶೇಷಾದ್ರಿ ಕಾರ್ಯಕ್ರಮದ ಉದ್ಘಾಟನಾ ಭಾಷಣ ಮಾಡಲಿದ್ದಾರೆ. ಮಹಾತ್ಮ ಗಾಂಧೀಜಿಯವರಿಗೆ ವಿಶೇಷ ಕೃತಜ್ಞತೆ ಸಲ್ಲಿಸುವ ಕಾರ್ಯ ನಡೆಯಲಿದೆ.

ಮಹಿಳೆಯರ ಓಲೈಕೆಗೆ ಮುಂದಾದ ಟ್ರಂಪ್.. ಕಾರಣ ಏನು?

 ಸೆಕ್ರೆಟರಿ ಪಾಂಪಿಯೋ ಮತ್ತು ಸೆಕ್ರೆಟರಿ ಆಫ್‌ ಡಿಫೆನ್ಸ್‌ ಮಾರ್ಕ್‌ ಟಿ. ಎಸ್ಪರ್‌ ಅವರು ನವದೆಹಲಿಯಲ್ಲಿ ನಡೆಯಲಿರುವ  ಸಚಿವರ ಮಟ್ಟದ ಮಾತುಕತೆಯಲ್ಲಿ ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಅಮೆರಿಕ- ಭಾರತದ ನಡುವಿನ ಸಮಗ್ರ ಜಾಗತಿಕ ಸಹಭಾಗಿತ್ವ ಮತ್ತು ವಿಶ್ವಾದ್ಯಂತ ಹಾಗೂ ಇಂಡೋ-ಫೆಸಿಪಿಕ್‌ ಪ್ರಾಂತ್ಯದ ಸಮಗ್ರ ಅಭಿವೃದ್ಧಿ ಚರ್ಚೆ ನಡೆಯಲಿದೆ.   

ಸೆಕ್ರೆಟರಿ ಪಾಂಪಿಯೋ ಅವರು ತಮ್ಮ ಕೊಲೊಂಬೊ ಭೇಟಿಯ ಸಂದರ್ಭದಲ್ಲಿ, ಅಮೆರಿಕ ಮತ್ತು ಶ್ರೀಲಂಕಾದ ವಿಚಾರಗಳನ್ನು ಮಾತನಾಡಲಿದ್ದಾರೆ. 

ಅಲ್ಲಿಂದ ಮಾಲೆಗೆ ತೆರಳಲಿರುವ ಪಾಂಪಿಯೋ, ಉಭಯ ದೇಶಗಳ ನಡುವಣ ನಿಕಟ ದ್ವಿಪಕ್ಷೀಯ ಸಂಬಂಧ, ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಎರಡೂ ದೇಶಗಳು ಒಂದಾಗಿ ಹೇಗೆ ಸಾಗಬೇಕು ಎಂಬುದನ್ನು ತಿಳಿಸಿಕೊಡಲಿದ್ದಾರೆ.

ಬಳಿಕ ಜಕಾರ್ತಕ್ಕೆ ತೆರಳಲಿರುವ ಸೆಕ್ರಟರಿ ಅವರು ಅಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಕೊರೋನಾ ಸೇರಿದಂತೆ ಅನೇಕ ವಿಚಾರಗಳಲ್ಲಿ ವಿಶ್ವವೇ ಒಂದಾಗಿ ಹೋರಾಟ ಮಾಡಬೇಕಾದ ಈ ಕಾಲದಲ್ಲಿ ಪಾಂಪಿಯೋ ಭೇಟಿ ನೀಡುತ್ತಿರುವುದು ಮಹತ್ವ ಪಡೆದುಕೊಂಡಿದೆ.