ನ್ಯೂಯಾರ್ಕ್(ನ. 03) ನಮಗಿಂತ ಸುಮಾರು ಹನ್ನೆರಡು ಗಂಟೆ ತಡವಾಗಿ ಸೂರ್ಯೋದಯ ಕಾಣುವ ದೂರದ ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆಗೆ ಮತದಾನ ಆರಂಭವಾಗಿದೆ. ಡೋನಾಲ್ಡ್ ಟ್ರಂಪ್ ಮತ್ತು ಜೋಯ್ ಬಿಡನ್ ಹಣೆಬರಹವನ್ನು  ನಾಗರಿಕರು ನಿರ್ಧಾರ ಮಾಡಲಿದ್ದಾರೆ.

ಈ ಬಾರಿ ಭಾರತೀಯ ಮೂಲದವರಿಗೆ ಎಲ್ಲಿಲ್ಲದ ಮಹತ್ವ ಸಿಕ್ಕಿರುವುದು ವಿಶೇಷ. ಉಪಾಧ್ಯಕ್ಷ ಸ್ಥಾನಕ್ಕೆ ಭಾರತೀಯ ಮೂಲದ ಕಮಲಾ ಹ್ಯಾರೀಸ್ ರೇಸ್ ನಲ್ಲಿ ಇದ್ದಾರೆ.

ಟ್ರಂಪ್ ಅಧ್ಯಕ್ಷಗಿರಿ ಬಲಿ ಪಡೆದುಕೊಳ್ಳುತ್ತಾ ಕೊರೋನಾ?

ನ್ಯೂಯಾರ್ಕ್, ನ್ಯೂ ಜೆರ್ಸಿಯಲ್ಲಿ ಮತದಾನ ಆರಂಭವಾಗಿದೆ.  ಅಧ್ಯಕ್ಷೀಯ ಸ್ಥಾನದ ಜೋಯ್ ಬಿಡನ್ ಟ್ವೀಟ್ ಮಾಡಿ ಎಲ್ಲರೂ ಹಕ್ಕು ಚಲಾಯಿಸಲು ಮನವಿ ಮಾಡಿಕೊಂಡಿದ್ದಾರೆ.

ಚುನಾವಣಾ ಪೂರ್ವ ಸಮೀಕ್ಷೆಗಳು ಟ್ರಂಪ್ ಗಿಂತಿ ಬಿಡನ್ ಮುಂದೆ ಇದ್ದಾರೆ ಎಂದು ಹೇಳಿದೆ. ಕೊರೋನಾ ಆತಂಕದ ನಡುವೆ ಹಿರಿಯಣ್ಣನ ನೇತೃತ್ವ ಯಾರು ವಹಿಸಿಕೊಳ್ಳುತ್ತಾರೆ ಎಂದುರ ನಿರ್ಧಾರ ಆಗಲಿದೆ.