ಬೀಜಿಂಗ್(ಜು.23): ಅಮೆರಿಕ ಮತ್ತು ಚೀನಾ ಮಧ್ಯೆ ರಾಜತಾಂತ್ರಿಕ ಸಮರ ತಾರಕಕ್ಕೆ ಏರಿದ್ದು, ಹೂಸ್ಟನ್‌ನಲ್ಲಿರುವ ಚೀನಾ ರಾಯಭಾರ ಕಚೇರಿಯನ್ನು ಮುಚ್ಚಲು ಅಮೆರಿಕ ಆದೇಶಿಸಿದೆ. ಇದರ ಬೆನ್ನಲ್ಲೇ ಚೀನಾ ಕೂಡ ಅಮೆರಿಕದ ರಾಯಭಾರ ಕಚೇರಿಯನ್ನು ಮುಚ್ಚುವುದಾಗಿ ಎಚ್ಚರಿಕೆ ಸಂದೇಶ ರವಾನಿಸಿದೆ.

ಸೋಶಿಯಲ್ ಮೀಡಿಯಾದಲ್ಲೇ ಸ್ತನ ಪ್ರದರ್ಶಿಸಿ ಅನುಮಾನಗಳಿಗೆ ತೆರೆ ಎಳೆದ ನಟಿ!

ಇದೇ ವೇಳೆ ತನ್ನ ಕ್ರಮವನ್ನು ಸಮರ್ಥಿಸಿಕೊಂಡಿರುವ ಅಮೆರಿಕದ ವಿದೇಶಾಂಗ ಸಚಿವಾಲಯ, ಬೌದ್ಧಿಕ ಸಂಪತ್ತು ಮತ್ತು ಖಾಸಗಿ ಮಾಹಿತಿಯನ್ನು ರಕ್ಷಿಸುವ ಸಲುವಾಗಿ ಈ ಕ್ರಮ ಕೈಗೊಳ್ಳಲಾಗಿದೆ. 72 ಗಂಟೆಗಳ ಅವಧಿಯಲ್ಲಿ (ಶುಕ್ರವಾರದ ಒಳಗಾಗಿ) ಚೀನಾ ತನ್ನ ರಾಯಭಾರ ಕಚೇರಿಯನ್ನು ಬಂದ್‌ ಮುಚ್ಚಬೇಕು ಎಂದು ತಿಳಿಸಿದೆ. ಈ ಮಧ್ಯೆ ಈ ಆದೇಶ ಹೊರ ಬಿದ್ದ ಬೆನ್ನಲ್ಲೇ, ಹೂಸ್ಟನ್‌ನಲ್ಲಿರುವ ರಾಯಭಾರ ಕಚೇರಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕಡತಗಳನ್ನು ನಾಶಪಡಿಸುವ ಸಲುವಾಗಿ ಬೆಂಕಿ ಹಾಕಲಾಗಿದೆ. ಇದರಿಂದ ಕಟ್ಟಡಕ್ಕೆ ಯಾವುದೇ ಹಾನಿ ಆಗಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿವೆ.

ಇದೇ ವೇಳೆ ಅಮೆರಿಕದ ಕ್ರಮವನ್ನು ಖಂಡಿಸಿರುವ ಚೀನಾ, ಈ ಕ್ರಮ ರಾಜತಾಂತ್ರಿಕ ಮತ್ತು ದೂತಾವಾಸ ಸಂಬಂಧದ ಕುರಿತಂತೆ ವಿಯೆನ್ನಾ ಒಪ್ಪಂದದಲ್ಲಿ ಉಲ್ಲೇಕಿಸಿರುವ ಅಂಶಗಳ ಸ್ಪಷ್ಟಉಲ್ಲಂಘನೆ ಆಗಿದೆ ಎಂದು ಆರೋಪಿಸಿದೆ.