ಡಿನ್ನರ್ ಪಾರ್ಟಿಯಲ್ಲಿ ಭಾರತದ ಸ್ವದೇಶ್ ಹಾಡು ಹಾಡಿದ ಅಮೆರಿಕ ಸೇನಾಧಿಕಾರಿಗಳು| ವೈರಲ್ ಆಯ್ತು ಸ್ವದೇಶ್ ಸಿನಿಮಾದ ಹಾಡು|
ವಾಷಿಂಗ್ಟನ್(ಮಾ.29): ಸೋಶಿಯಲ್ ಮೀಡಿಯಾದಲ್ಲಿ ಅನೇಕ ಬಗೆಯ ವಿಡಿಯೋಗಳು ವೈರಲ್ ಆಗುತ್ತಾ ಇರುತ್ತವೆ. ಆದರೆ ಸದ್ಯ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಭಾರತದ 'ಸ್ವದೇಶ್' ಸಿನಿಮಾದ ಹಾಡಿನ ಕಂಪು ವಿಶ್ವಾದ್ಯಂತ ಪಸರಿಸಿದೆ.
ಹೌದು ಅಮೆರಿಕದ ನೌಕಾಸೇನಾಧಿಕಾರಿಗಳು ಹಾಡಿರುವ ಭಾರತದ ಸ್ವದೇಶ್ ಸಿನಿಮಾದ ಹಾಡು ಸದ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. 'ಯೆ ಜೊ ದೇಶ್ ಹೇ ಮೆರಾ, ಸ್ವದೇಶ್ ಹೇ ಮೆರಾ' ಹಾಡು ಬಹಳ ಅದ್ಭುತವಾಗಿ ಹಾಡಿದ್ದಾರೆ. ಮಾರ್ಚ್ 27ರ ಡಿನ್ನರ್ ಪಾರ್ಟಿ ವೇಳೆ ಈ ಹಾಡು ಹಾಡಲಾಗಿತ್ತೆನ್ನಲಾಘಿದೆ.
ಇನ್ನು ಈ ಡಿನ್ನರ್ ಪಾರ್ಟಿಯಲ್ಲಿ ಅಮೆರಿಕದ ಚೀಫ್ ಆಫ್ ನೇವಲ್ ಆಪರೇಷನ್ಸ್ ಮೈಕಲ್ ಎಂ. ಗಿಲ್ಡೆ ಹಾಗೂ ಭಾರತದ ರಾಯಭಾರಿ ತರಣ್‌ಜೀತ್ ಸಿಂಗ್ ಸಂಧೂ ಕೂಡಾ ಇದ್ದರು. ಹೀಗಿರುವಾಗ ಈ ಹೆಮ್ಮೆಯ ಕ್ಷಣವನ್ನು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದ ಸಂಧೂ ಟ್ವೀಟ್ ಮಾಡಿದ್ದಾರೆ. ಜೊತೆಗೆ ಈ ಸ್ನಬೇಹದ ಸಂಭಂಧ ಯಾವತ್ತೂ ಮುರಿಯಲಾಗುವುದಿಲ್ಲ ಎಂದು ಬರೆದಿದ್ದಾರೆ.
2004ರಲ್ಲಿ ತೆರೆ ಕಂಡ ಸ್ವದೇಶ್ ಸಿನಿಮಾದ ಈ ಹಾಡನ್ನು ಎ. ಆರ್. ರಹಮಾನ್ ರಚಿಸಿ ಹಾಡಿದ್ದರೆಂಬುವುದು ಉಲ್ಲೇಖನೀಯ.
