Asianet Suvarna News Asianet Suvarna News

ಭಾರತಕ್ಕೆ ಲಸಿಕೆ, ಬೈಡೆನ್ ನಿರ್ಧಾರಕ್ಕೆ ಜೈ ಎಂದ ಅಮೆರಿಕದ ನಾಯಕರು!

* ಭಾರತಕ್ಕೆ ಅಮೆರಿಕದ ಲಿಸಿಕೆ ನೀಡಲು ಬೈಡೆನ್ ನಿರ್ಧಾರ

* ಬೈಡೆನ್‌ ನಿರ್ಧಾರ ಬೆಂಬಲಿಸಿದ ಅಮೆರಿಕ್ದ ನಾಯಕರು

* ಭಾರತ ಸೇರಿ ಅನೇಕ ರಾಷ್ಟ್ರಗಳಿಗೆ ಅಮೆರಿಕಾದಿಂದ ಎಂಟು ಕೋಟಿ ಲಸಿಕೆ

US lawmakers hail move to send Covid vaccines to India and other countried pod
Author
Bangalore, First Published Jun 5, 2021, 1:12 PM IST

ವಾಷಿಂಗ್ಟನ್(ಜೂ.05): ಭಾರತಕ್ಕೆ ಅಮೆರಿಕದಲ್ಲಿ ಉತ್ಪಾದಿಸಲಾದ ಲಸಿಕೆ ನೀಡುವ ಅಧ್ಯಕ್ಷ ಬೈಡೆನ್ ನಿರ್ಧಾರಕ್ಕೆ ಅನೇಕ ನಾಯಕರು ಬೆಂಬಲ ಸೂಚಿಸಿದ್ದಾರೆ. ಇದೊಂದು ಉತ್ತಮ ಬೆಳವಣಿಗೆ ಎಂದು ಅವರು ಕೊಂಡಾಡಿದ್ದಾರೆ. ಕೊರೋನಾ ಎರಡನೇ ಅಲೆಯಿಂದ ನಲುಗುತ್ತಿರುವ ಭಾರತಕ್ಕೆ ಅಮೆರಿಕಾ ತನ್ನಿಂದಾಗುವ ಎಲ್ಲಾ ಸಹಾಯ ನೀಡುವ ಭರವಸೆ ವ್ಯಕ್ತಪಡಿಸಿದೆ. ಇನ್ನು ಅಮೆರಿಕ ಅಧ್ಯಕ್ಷ ಬೈಡೆನ್ ವಿಶ್ವಾದ್ಯಂತ ಒಟ್ಟು ಎಂಟು ಕೋಟಿ ಕೊರೋನಾ ಡೋಸ್‌ ವಿತರಿಸಲು ನಿರ್ಧರಿಸಿದ್ದಾರೆ. ಇವುಗಳಲ್ಲಿ ಎಪ್ಪತ್ತು ಲಕ್ಷ ಡೋಸ್‌ಗಳು ಭಾರತ, ನೇಪಾಳ, ಬಾಂಗ್ಲಾದೇಶ ಹಾಗೂ ಪಾಕಿಸ್ತಾನಕ್ಕೆ ಸಿಗಲಿವೆ.

ಯಾರು ಏನು ಹೇಳಿದರು?

ರಿಪಬ್ಲಿಕ್ ಪಾರ್ಟಿಯ ಸೆನೇಟರ್ ಮಿಟ್‌ ರೋಮನಿ ಲಸಿಕೆ ಸಂಬಂಧ ಭಾರತಕ್ಕೆ ಸಹಾಯ ಮಾಡುವುದು ಉತ್ತಮ ಹಾಗೂ ಸುರಕ್ಷಿತ ಹೆಜ್ಜೆ ಎಂದಿದ್ದಾರೆ. ತೈವಾನ್‌ ಹಾಗೂ ಭಾರತದಂತಹ ದೇಶಗಳು ಕೊರೋನಾ ಲಸಿಕೆಗಳ ಅಗತ್ಯ ಬಹಳಷ್ಟಿದೆ. ಹೀಗಾಗಿ ಅಮೆರಿಕಾ ಸರ್ಕಾರ ತನ್ನ ಜಾಗತಿಕ ಲಸಿಕೆ ವಿತರಣೆ ಯೋಜನೆ ಜಾರಿಗೊಳಿಸುವತ್ತ ಮುಂದುವರೆಯುತ್ತಿರುವುದು ಬಹಳ ಖುಷಿ ಕೊಟ್ಟಿದೆ ಎಂದಿದ್ದಾರೆ. ಅಮೆರಿಕಾದ ಲಸಿಕೆ ರಷ್ಯಾ ಹಾಗೂ ಚೀನಾ ಲಸಿಕೆಗೆ ಹೋಲಿಸಿದರೆ ಹೆಚ್ಚು ಸೇಫ್ ಹಾಗೂ ಪರಿಣಾಮಕಾರಿ ಎಂದಿದೆ.

ಬ್ರಾಯನ್ ಫಿಟ್ಸ್‌ಪ್ಯಾಟ್ರಿಕ್ ಈ ಬಗ್ಗೆ ಟ್ವೀಟ್ ಮಾಡಿದ್ದು, ಭಾರತದಲ್ಲಿ ಕೊರೋನಾ ಎರಡನೇ ಅಲೆ ಎದುರಿಸುವ ನಿಟ್ಟಿನಲ್ಲಿ ಹಾಗೂ ವಿಶ್ವಾದ್ಯಂತ ಈ ಸೋಂಕು ನಿವಾರಿಸುವ ನಿಟ್ಟಿನಲ್ಲಿ ಔಷಧ ಹಾಘೂ ಲಸಿಕೆ ರಫ್ತು ಅಗತ್ಯ ಎಂದಿದ್ದಾರೆ.

ಅಮೆರಿಕದ ಕಾಂಗ್ರೆಸ್‌ ನಾಯಕ ಟ್ರಾಯ್‌ ನೆಹಲ್ಸ್ ಈ ಬಗ್ಗೆ ಟ್ವೀಟ್ ಮಾಡುತ್ತಾ ನ್ಮಮ ಗೆಳೆಯ ಭಾರತಕ್ಕೆ ಕೊರೋನಾ ವಿರುದ್ಧದ ಹೋರಾಟದಲ್ಲಿ ಕೂಡಲೇ ಸಹಾಯ ಒದಗಿಸಲು ಅಧ್ಯಕ್ಷರ ಬಳಿ ಮನವಿ ಮಾಡುತ್ತೇನೆ ಎಂದಿದ್ದಾರೆ.

ಗುರುವಾರದಂದು ಅಮೆರಿಕಾ ಉಪರಾಷ್ಟ್ರಪತಿ ಕಮಲಾ ಹ್ಯಾರಿಸ್ ಜೊತೆ ಮೋದಿ ಮಾತು

ಗುರುವಾರ ತಡ ರಾತ್ರಿ ಪ್ರಧಾನ ಮಂತ್ರಿ ಮೋದಿ ಅಮೆರಿಕದ ಉಪರಾಷ್ಟ್ರಪತಿ ಕಮಲಾ ಹ್ಯಾರಿಸ್‌ ಜೊತೆ ಮಾತುಕತೆ ನಡೆಸಿದ್ದರು. ಈ ಮಾತುಕತೆಯಿಂದ ಉಭಯ ದೇಶಗಳ ನಡುವಿನ ಬಂಧಗಳು ಮತ್ತಷ್ಟು ಗಟ್ಟಿಯಾಗಿವೆ. ಇನ್ನು ಈ ವೇಳೆ ಔಷಧಿ ಹಾಗೂ ಲಸಿಕೆ ವಿತರಣೆ ಬಗ್ಗೆಯೂ ಪಿಎಂ ಮೋದಿ ಹಾಗೂ ಕಮಲಾ ಹ್ಯಾರಿಸ್ ಚರ್ಚೆ ನಡೆಸಿದ್ದಾರೆನ್ನಲಾಗಿದೆ.

Follow Us:
Download App:
  • android
  • ios