ವಾಶಿಂಗ್ಟನ್(ಸೆ.12): ಭಾರತ ಹಾಗೂ ಚೀನಾ ನಡುವಿನ ಗಡಿ ಸಮಸ್ಯೆ ಬಗೆ ಬರಿದಿಲ್ಲ. ಪ್ರತಿ ದಿನ ಚೀನಾ ಒಂದಲ್ಲ ಒಂದು ಖ್ಯಾತೆ ತೆಗೆಯುತ್ತಿದೆ. ಪ್ಯಾಂಗಾಂಗ್ ಸರೋವರದ ಬಳಿ ಹೆಚ್ಚಿನ ಯೋಧರನ್ನು ಜಮಾವಣೆಗೊಳಿಸಿ ಯುದ್ಧಕ್ಕೆ ಸನ್ನದ್ಧವಾಗುತ್ತಿದೆ. ಇತ್ತ ಭಾರತ ಹಲವು ಸುತ್ತಿನ ಮಾತುಕತೆ ನಡೆಸಿ ಸಮಸ್ಯೆ ಬಗೆಬಹರಿಸಲು ಯತ್ನಿಸುತ್ತಿದೆ. ಇದರ ನಡುವೆ ಇದೀಗ ಅಮೆರಿಕ ಸಚಿವರೊಬ್ಬರು ಚೀನಾಗೆ ಮಹತ್ವದ ಸೂಚನೆ ನೀಡಿದ್ದಾರೆ.

ಭಾರತ- ಚೀನಾ ಸೈನಿಕರ ಜಮಾವಣೆ: ಗಡಿಯಲ್ಲಿ ಯುದ್ಧಾಂತಕ ತೀವ್ರ!.

ಚೀನಾ ನಡೆ ಕುರಿತು ಅಸಮಾಧಾನ ವ್ಯಕ್ತಪಡಿಸಿರುವ ಭಾರತ-ಅಮೆರಿಕ ಕಾಂಗ್ರೆಸ್‌ಮೆನ್ ಅಮಿ ಬೆರಾ, ಭಾರತ ಹಾಗೂ ಚೀನಾ ಗಡಿ ಪ್ರದೇಶದಲ್ಲಿ ಉದ್ವಿಘ್ನಿ ವಾತಾರವಣ ನಿರ್ಮಾಣವಾಗಿರುದು ಉತ್ತಮ ಬೆಳೆವಣಿಗೆಯಲ್ಲ. ಪ್ರಮುಖವಾಗಿ ಚೀನಾ ಅಂತಾರಾಷ್ಟ್ರೀಯ ಗಡಿ ನಿಯಮ ಉಲ್ಲಂಘನೆ ಮಾಡದೆ, ಶಾಂತಿಯುತವಾಗಿ ಸಮಸ್ಯೆ ಬಗೆಹರಿಸಲು ಮುಂದಾಗಬೇಕು ಎಂದಿದ್ದಾರೆ.

"

ಚೀನಾಕ್ಕೆ ಎಚ್‌ಎಎಲ್‌ ಹೆಲಿಕಾಪ್ಟರ್‌ ಸಡ್ಡು!.

ಚೀನಾದ ಅಪ್ರಚೋದಿತ ದಾಳಿಗಳನ್ನು ನಿಜಕ್ಕೂ ಆಘಾತ ತಂದಿದೆ. ಉಭಯ ದೇಶಗಳು ಸೈನಿಕರ ಜಮಾವಣೆ, ಶಸ್ತಾಸ್ತ್ರ ಜಮಾವಣೆ ಮಾಡುವುದನ್ನು ನಿಲ್ಲಿಸಬೇಕು. ಇದರಿಂದ ಉಭಯ ದೇಶದ ಸಂಬಂಧ ಹಾಳಾಗಲಿದೆ. ಇಷ್ಟೇ ಅಲ್ಲ ಎರಡೂ ದೇಶಗಳು ತೀವ್ರ ಹಿನ್ನಡೆ ಅನುಭವಿಸಲಿದೆ. ಹೀಗಾಗಿ ಚೀನಾ ಶಾಂತಿ ಮಾತುಕತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದಿದ್ದಾರೆ.