Asianet Suvarna News Asianet Suvarna News

ತಾಲಿಬಾನಿಗಳಿಗೆ ಲಾಭವಾದ ಅಮೆರಿಕದ ಹೂಡಿಕೆ!

* ಅಷ್ಘಾನಿಸ್ತಾನ ಸೇನೆಯನ್ನು ಬಲಪಡಿಸಲು ಸುಮಾರು 61 ಲಕ್ಷ ಕೋಟಿ ವೆಚ್ಚ ಮಾಡಿದ ಅಮೆರಿಕ

* ಆಫ್ಘನ್‌ ಸೇನೆ ಹೋರಾಟ ನೀಡದೇ ತಾಲಿಬಾನಿಗಳಿಗೆ ಶರಣು

* ತಾಲಿಬಾನಿಗಳಿಗೆ ಲಾಭವಾದ ಅಮೆರಿಕದ ಹೂಡಿಕೆ

US Investment In Afghanistan Helpers Taliban Organization pod
Author
Bangalore, First Published Aug 18, 2021, 10:11 AM IST

ವಾಷಿಂಗ್ಟಟನ್(ಆ.18): ಅಮೆರಿಕ ಕಳೆದ 20 ವರ್ಷಗಳಲ್ಲಿ ಅಷ್ಘಾನಿಸ್ತಾನ ಸೇನೆಯನ್ನು ಬಲಪಡಿಸಲು ಸುಮಾರು 61 ಲಕ್ಷ ಕೋಟಿಗಳನ್ನು ವೆಚ್ಚ ಮಾಡಿದೆ. ಆದರೆ ಆಫ್ಘನ್‌ ಸೇನೆ ಹೋರಾಟ ನೀಡದೇ ತಾಲಿಬಾನಿಗಳಿಗೆ ಶರಣಾಗಿದೆ. ಇದರಿಂದಾಗಿ ಅಮೆರಿಕದ ಹೂಡಿಕೆ ತಾಲಿಬಾನಿಗಳಿಗೆ ಲಾಭವಾಗಿ ಪರಿಣಮಿಸಿದೆ.

ತಾಲಿಬಾನಿಗಳು ಕೇವಲ ಅಷ್ಘಾನಿಸ್ತಾನದಲ್ಲಿ ರಾಜಕೀಯ ಬಲ ಪಡೆದದ್ದಷ್ಟೇ ಅಲ್ಲದೇ ಅಮೆರಿಕ ಪೂರೈಸಿದ್ದ ಬಂದೂಕುಗಳು, ಸ್ಫೋಟಕಗಳು, ಹೆಲಿಕಾಪ್ಟರ್‌ ಸೇರಿದಂತೆ ಆಧುನಿಕ ಶಸ್ತ್ರಾಸ್ತ್ರಗಳನ್ನು ಸಹ ಪಡೆದುಕೊಂಡಿದ್ದಾರೆ. ಕೆಲವೊಂದು ಕಡೆಗಳಲ್ಲಿ ಆಫ್ಘನ್‌ ಸೇನೆ ಕನಿಷ್ಟಪ್ರತಿರೋಧವನ್ನೂ ತೋರದೇ ತಾಲಿಬಾನಿಗಳಿಗೆ ಶರಣಾಗಿದೆ.

ಹಣಕಾಸಿನ ನೆರವು ನೀಡಿದ ಅಮೆರಿಕಕ್ಕೆ ಸುಸಜ್ಜಿತವಾದ ಆಫ್ಘನ್‌ ಸೈನ್ಯವನ್ನು ನಿರ್ಮಿಸಲು ಸಾಧ್ಯವಾಗಲಿಲ್ಲ. ಆದರೆ ಅಮೆರಿಕಾ ಸಾಕಷ್ಟುಯುದ್ದೋಪಕರಣಗಳನ್ನು ಅಷ್ಘಾನಿಸ್ತಾನಕ್ಕೆ ನೀಡಿದೆ. ಈಗ ಅವೆಲ್ಲವೂ ತಾಲಿಬಾನಿಗಳ ವಶವಾಗಿದೆ.

Follow Us:
Download App:
  • android
  • ios