* ವಿದೇಶಕ್ಕೆ ತೆರಳದಂತೆ ವಿಮಾನಗಳಿಗೆ ತಾಲಿಬಾನಿಗಳ ಅಡ್ಡಿ* 5 ವಿಮಾನದಲ್ಲಿ ಅಮೆರಿಕನ್ನರು ಸೇರಿ ನೂರಾರು ಜನರು ಬಂಧಿ

ಕಾಬೂಲ್‌(ಸೆ.07): ಆ.31ರಂದು ಅಮೆರಿಕದ ಯೋಧರು ಕಡೆಯದಾಗಿ ದೇಶ ತೊರೆದ ಬಳಿಕವೂ ಅಫ್ಘಾನಿಸ್ತಾನದಲ್ಲೇ ಉಳಿದುಕೊಂಡಿರುವ ಕೆಲ ಅಮೆರಿಕನ್ನರು ಮತ್ತು ಅಮೆರಿಕನ್ನರಿಗೆ ನೆರವಾಗಿದ್ದ ನೂರಾರ ಆಫ್ಘನ್‌ ಪ್ರಜೆಗಳನ್ನು ತಾಲಿಬಾನಿಗಳು ಒತ್ತೆಯಾಳಾಗಿ ಇಟ್ಟುಕೊಂಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬಲ್‌್ಖ ಪ್ರಾಂತ್ಯದಲ್ಲಿ ವಿದೇಶಕ್ಕೆ ತೆರಳಲೆಂದು ಕನಿಷ್ಠ 5 ವಿಮಾನಗಳಲ್ಲಿ ಅಮರಿಕನ್ನರು ಮತ್ತು ಹಲವು ಆಫ್ಘನ್ನರು ಏರಿ ಕುಳಿತಿದ್ದಾರೆ. ಆದರೆ ವಿಮಾನ ರಾಜಧಾನಿ ಮಝರ್‌ ಎ ಷರಿಫ್‌ನಿಂದ ತೆರಳದಂತೆ ತಾಲಿಬಾನಿ ಉಗ್ರರು ತಡೆಯೊಡ್ದಿದ್ದಾರೆ ಎಂದು ಅಮೆರಿಕದ ರಿಪಬ್ಲಿಕನ್‌ ಪಕ್ಷದ ಸಂಸದ ಮೈಕೆಲ್‌ ಮ್ಯಾಕೌಲ್‌ ಆರೋಪಿಸಿದ್ದಾರೆ.

ಪಂಜ್‌ಶೀರ್‌ ಸಂಪೂರ್ಣ ತಾಲಿಬಾನ್‌ ವಶಕ್ಕೆ

 ‘ಪಂಜ್‌ಶೀರ್‌ನ ಎಲ್ಲಾ 8 ಜಿಲ್ಲೆಗಳನ್ನು ವಶಪಡಿಸಿಕೊಳ್ಳುವುದರೊಂದಿಗೆ ಇಡೀ ಪ್ರಾಂತ್ಯ ನಮ್ಮ ವಶಕ್ಕೆ ಬಂದಿದೆ. ಇದ​ರೊಂದಿಗೆ ಅಷ್ಘಾ​ನಿ​ಸ್ತಾ​ನ​ದ​ಲ್ಲಿನ ಯುದ್ಧ ಮುಗಿ​ದಿ​ದೆ​’ ಎಂದು ತಾಲಿಬಾನ್‌ ಸಂಘಟನೆ ಸೋಮವಾರ ಹೇಳಿಕೆ ಘೋಷಿ​ಸಿ​ಕೊಂಡಿದೆ. ಅಲ್ಲದೆ ತನ್ನ ವಿರುದ್ಧ ತೊಡೆ ತಟ್ಟಿದ್ದ ಅಫ್ಘಾನಿಸ್ತಾನದ ಮಾಜಿ ಉಪಾಧ್ಯಕ್ಷ ಅಮ್ರುಲ್ಲಾ ಸಲೇಹ್‌ ನೆರೆಯ ಕಜಕಸ್ತಾನಕ್ಕೆ ಪರಾರಿಯಾಗಿದ್ದಾರೆ ಎಂದು ಹೇಳಿದೆ.

ಈವ​ರೆಗೆ ಬಹು​ತೇಕ ಅಷ್ಘಾ​ನಿ​ಸ್ತಾನ ತಾಲಿ​ಬಾನ್‌ ವಶಕ್ಕೆ ಬಂದಿ​ದ್ದರೂ ಪಂಜ​ಶೀರ್‌ ಮಾತ್ರ ವಿರೋಧಿ ಪಡೆ​ಗಳ ವಶ​ದ​ಲ್ಲಿತ್ತು. ಈ ಹಿನ್ನೆ​ಲೆ​ಯಲ್ಲಿ ತಾಲಿ​ಬಾ​ನ್‌ನ ಈ ಹೇಳಿ​ಕೆಗೆ ಮಹತ್ವ ಬಂದಿ​ದೆ.