ವಾಶಿಂಗ್ಟನ್(ಜ.01): ಗಗನ ಚುಂಬಿ ಕಟ್ಟದ ಮೇಲಿನ ಭಯೋತ್ಪಾದಕ ದಾಳಿ ಬಳಿಕ ಅಮೆರಿಕ ಭಯೋತ್ಪಾದನೆ ವಿರುದ್ಧ ಕಠಿಣ ಹಾಗೂ ನಿಷ್ಠುರ ನಿಲುವನ್ನು ಹೊಂದಿದೆ. ಹೀಗಾಗಿ ಮರುಕಳಿಸದಂತೆ ನೋಡಿಕೊಂಡಿದೆ. ಭಯೋತ್ಪಾದಕರ ವಿರುದ್ಧ ಅಮೆರಿಕ ಸತತ ಕಾರ್ಯಚರಣೆ ನಡೆಸುತ್ತಿದೆ. ಇದೀಗ ಪಾಕಿಸ್ತಾನದ ಲಷ್ಕರ್ ಇ ತೈಬಾ, ಜೈಷ್ ಇ ಮೊಹಮ್ಮದ್ ಸೇರಿದಂತೆ ಹರ್ಕತ್ ಉಲ್ ಮಜಾಹೀದ್ದೀನ್ ಅಲ್ ಇಸ್ಲಾಂ ಭಯೋತ್ಪಾದನೆ ಸಂಘಟನೆಗಳ ವಿದೇಶಿ ಹಣವನ್ನು ಅಮೆರಿಕ ತಡೆ ಹಿಡಿದಿದೆ.

ಕಾಶ್ಮೀರ ನಿವಾಸಿ ಪ್ರಮಾಣ ಪತ್ರ ಪಡೆದ ಬೆನ್ನಲ್ಲೇ ಪಂಜಾಬಿ ಆಭರಣ ವ್ಯಾಪರಿ ಹತ್ಯೆ!

2019ರಲ್ಲಿ ಪಾಕಿಸ್ತಾನ ಸೇರಿದಂತೆ ಕೆಲ ಭಯೋತ್ಪಾದಕ ಸಂಘಟನೆಗಳ ಬರೋಬ್ಬರಿ 460 ಕೋಟಿ ರೂಪಾಯಿಗೂ ಅಧಿಕ ಹಣವನ್ನು ತಡೆ ಹಿಡಿದಿದೆ. ವಿಧ್ವಂಸಕ ಕೃತ್ಯಕ್ಕೆ ಬಳಸಲು ಪಾಕಿಸ್ತಾನದ ಮೂರು ಸಂಘಟನೆಗಳ ಹಣ ವರ್ಗಾವಣೆ ಮಾಡುತ್ತಿತ್ತು. ಆದರೆ ಭಯೋತ್ಪಾದಕ ಸಂಘಟನೆಗಳ ಆರ್ಥಿಕ ವ್ಯವಹಾರ ಕುರಿತು ಅಮೆರಿಕ ಹದ್ದಿನ ಕಣ್ಣಿಟ್ಟಿತು. 

ಸತತ 18 ಗಂಟೆಗಳ ಗನ್‌ಫೈಟ್; ಮೂವರ ಉಗ್ರರ ಹೆಡೆಮುರಿ ಕಟ್ಟಿದ ಭಾರತೀಯ ಸೇನೆ

ಪಾಕಿಸ್ತಾನ ಹರ್ಕತ್ ಉಲ್ ಮಜಾಹಿದ್ದೀನ್ ಅಲ್ ಇಸ್ಲಾಂ ಸಂಘಟನೆ ಕಾಶ್ಮೀರದಲ್ಲಿ ಹಲವು ಭಯೋತ್ಪಾದನೆ ಚಟುವಟಿಕೆಯಲ್ಲಿ ತೊಡಗಿದೆ. ಇದಕ್ಕೆ ಪಾಕಿಸ್ತಾನ ಸೇರಿದಂತ  ಹಲವು ರಾಷ್ಟ್ರಗಳಿಂದ ಹಣ ಸಂಗ್ರಹ ಮಾಡಲಾಗುತ್ತದೆ. ಈ ಹಣವನ್ನು ಹಲವು ರೀತಿಯಲ್ಲಿ ವರ್ಗಾವಣೆ ಮಾಡಲಾಗುತ್ತಿತ್ತು. ಅಮೆರಿಕ ತಡೆ ಹಿಡಿರುವು 460 ಕೋಟಿ ರೂಪಾಯಿಗಳಲ್ಲಿ ಬಹುಪಾಲು ಪಾಕಿಸ್ತಾನ ಭಯೋತ್ಪಾದನೆ ಸಂಘಟನೆಗಳೇ ಇವೆ.