ಬಂಧಿತರ ಕೂದಲಿಂದ ಚೀನಾ ತಯಾರಿಸಿದ್ದ 13 ಟನ್‌ ಉತ್ಪನ್ನ ವಶ| ಮಾನವರ ತಲೆಕೂದಲಿನಿಂದ ನೇಯಲಾಗಿದೆ ಎನ್ನಲಾದ ವಸ್ತು|

ನ್ಯೂಯಾರ್ಕ್(ಜು.05): ಮಾನವರ ತಲೆಕೂದಲಿನಿಂದ ನೇಯಲಾಗಿದೆ ಎನ್ನಲಾದ ವಸ್ತುಗಳು ಸೇರಿದಂತೆ 13 ಟನ್‌ ತೂಕದ ಸೌಂದರ್ಯ ವರ್ಧಕ ಉತ್ಪನ್ನಗಳನ್ನು ಅಮೆರಿಕದ ಸುಂಕ ಮತ್ತು ಗಡಿ ರಕ್ಷಣೆ ಅಧಿಕಾರಿಗಳು ನ್ಯೂಯಾರ್ಕ್ ಬಂದರಿನಲ್ಲಿ ವಶಪಡಿಸಿಕೊಂಡಿದ್ದಾರೆ.

ಈ ಉತ್ಪನ್ನಗಳ ಮೌಲ್ಯ ಸುಮಾರು 600 ಕೋಟಿ ರು. ಎಂದು ಅಂದಾಜಿಸಲಾಗಿದೆ. ಈ ಉತ್ಪನ್ನಗಳು ಚೀನಾದ ಕ್ಸಿನ್‌ಜಿಯಾಂಗ್‌ ಪ್ರಾಂತ್ಯಕ್ಕೆ ಸೇರಿದ್ದಾಗಿವೆ.

ಕೊರೋನಾ ಬಗ್ಗೆ WHOಗೂ ಹೇಳಿರಲಿಲ್ಲ ಕಪಟ ಚೀನಾ!

ಈ ಪ್ರಾಂತ್ಯದಲ್ಲಿ 1.1 ಕೋಟಿ ಉಯಿಗುರ್‌ ಮುಸ್ಲಿಂ ಜನಾಂಗದವರಿದ್ದಾರೆ. ಜನಸಂಖ್ಯೆ ಕುಗ್ಗಿಸಲು ಅಲ್ಲಿನ ಜನರನ್ನು ಬಲವಂತವಾಗಿ ಬಂಧಿಸಲಾಗುತ್ತಿದೆ. ಬಂಧಿತರಿಂದ ತಲೆಗೂದಲು ಸಂಗ್ರಹಿಸಿ, ಸೌಂದರ್ಯ ವರ್ಧಕಗಳನ್ನು ತಯಾರಿಸಿರಬಹುದು ಎಂಬ ಅನುಮಾನಗಳು ವ್ಯಕ್ತವಾಗಿವೆ.

10 ಲಕ್ಷಕ್ಕೂ ಹೆಚ್ಚು ಉಯಿಗುರ್‌ ಮುಸ್ಲಿಮರು ಬಂಧನಕ್ಕೆ ಒಳಗಾಗಿದ್ದಾರೆ ಎಂದು ಅಮೆರಿಕದ ವಿದೇಶಾಂಗ ಇಲಾಖೆ ಅಂದಾಜಿಸಿದೆ.