ವಾಷಿಂಗ್ಟನ್(ಜ.25): ವಿಶೇಷ ಸ್ಥಾನಮಾನ ರದ್ದತಿ ಬಳಿಕ ಗೃಹ ಬಂಧನದಲ್ಲಿ ಇರಿಸಿರುವ ಜಮ್ಮು ಮತ್ತು ಕಾಶ್ಮೀರದ ರಾಜಕೀಯ ನಾಯಕರನ್ನು ಕೂಡಲೇ ಬಿಡುಗಡೆ ಮಾಡುವಂತೆ ಅಮೆರಿಕ ಒತ್ತಾಯಿಸಿದೆ.

ಇತ್ತೀಚಿಗೆ ಕಣಿವೆಗೆ ಬಂದಿದ್ದ 15 ರಾಷ್ಟ್ರಗಳ ನಿಯೋಗದಲ್ಲಿದ್ದ ಅಮೆರಿಕದ ದಕ್ಷಿಣ ಮತ್ತು ಮಧ್ಯ ಏಷ್ಯಾದ ಪ್ರಧಾನ ಉಪ ಸಹಾಯಕ ಕಾರ್ಯದರ್ಶಿ ಅಲೈಸ್ ವೆಲ್ಸ್, ನಿಯೋಗದ ಭೇಟಿ ಫಲಪ್ರದ ಎಂದು ಹೇಳಿದ್ದಾರೆ.

ಕಣಿವೆಯಲ್ಲಿ ಪ್ರೀಪೇಯ್ಡ್ ಮೊಬೈಲ್, ಎಸ್ಎಂಎಸ್ ಸೇವೆ ಮತ್ತೆ ಆರಂಭ!

ಕಣಿವೆಯ ಪರಿಸ್ಥಿತಿ ಉತ್ತಮವಾಗಿದ್ದು, ಗೃಹ ಬಂಧನದಲ್ಲಿರುವ ರಾಜಕೀಯ ನಾಯಕರನ್ನು ಬಿಡುಗಡೆಗೊಳಿಸಲು ಇದು ಸೂಕ್ತ ಕಾಲ ಎಂಧು ಅಲೈಸ್ ವೆಲ್ಸ್ ಅಭಿಪ್ರಾಯಪಟ್ಟಿದ್ದಾರೆ.

ಗೃಹ ಬಂಧನದಲ್ಲಿರುವ ರಾಜಕೀಯ ನಾಯಕರನ್ನು ಭೇಟಿ ಮಾಡಲು ಕೇಂದ್ರ ಸರ್ಕಾರ ನಿಯೋಗಕ್ಕೆ ಅವಕಾಶ ನೀಡಲಿಲ್ಲ. ಆದರೆ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಸರ್ಕಾರ ಯಶಸ್ವಿಯಾಗಿದೆ ಎಂದು ಅಲೈಸ್ ವೆಲ್ಸ್ ಹೇಳಿದ್ದಾರೆ.

ಕಾಶ್ಮೀರಕ್ಕೆ 15 ದೇಶಗಳ ಅಂತಾರಾಷ್ಟ್ರೀಯ ನಿಯೋಗ: ಜನರ ಪ್ರತಿಕ್ರಿಯೆಗೆ ಸಂತಸ!

ಇದೇ ವೇಳೆ ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಪ್ರತಿಕ್ರಿಯೆ ನೀಡಿರುವ ಅಲೈಸ್ ವೆಲ್ಸ್, ಸಿಎಎ ಎಲ್ಲ ಧರ್ಮಗಳನ್ನು ಸಮಾನವಾಗಿ ಕಾಣಬೇಕಿದೆ ಎಂದು ಹೇಳಿದ್ದಾರೆ.

ಕಾನೂನು ಎಲ್ಲ ಧರ್ಮಗಳನ್ನು ಸಮಾನವಾಗಿ ಕಾಣಬೇಕು ಎಂಬುದು ಅಮೆರಿಕದ ನಿಲುವಾಗಿದ್ದು, ಅದರಂತೆ ಸಿಎಎ ಕೂಡ ಎಲ್ಲ ಧರ್ಮೀಯರಿಗೂ ಸಮಾನ ಅವಕಾಶ ಕಲ್ಪಿಸಬೇಕು ಎಂದು ಅಲೈಸ್ ವೆಲ್ಸ್ ಆಗ್ರಹಿಸಿದ್ದಾರೆ.