ಮರಭೂಮಿಯ ದಿಬ್ಬದ ಮೇಲೆ ಬೆತ್ತಲೆಯಾಗಿ ಪೋಸ್ ನೀಡಿದ ಪ್ರವಾಸಿಗರು, ಸರ್ಕಾರದ ಆಕ್ರೋಶ!
ಪ್ರಸಿದ್ಧ ತಾಣದಲ್ಲಿ ಬೆತ್ತಲೆಯಾಗಿ ಪೋಸ್ ನೀಡಿದ ಪ್ರವಾಸಿಗರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯ ಮಾಡಲಾಗಿದೆ. ಪ್ರವಾಸಿಗರ ವರ್ತನೆಯಿಂದ ನಮಗೆ ಅಚ್ಚರಿಯಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ತಿಳಿಸಿವೆ.
ನವದೆಹಲಿ (ಏ. 29): ಇತ್ತೀಚೆಗೆ ಉತ್ತರಾಖಂಡದ ರಿಷಿಕೇಶದ ಗಂಗಾ ನದಿಯಲ್ಲಿ ವಿದೇಶಿ ಪ್ರವಾಸಿಗರು ಅರೆಬೆತ್ತಲೆಯಾಗಿ ಸ್ನಾನಕ್ಕೆ ಇಳಿದಿದ್ದು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಈಗ ಆಫ್ರಿಕಾ ದೇಶ ನಮೀಬಿಯಾದಲ್ಲೂ ಇಂಥದ್ದೇ ಘಟನೆ ನಡೆದಿದೆ. ನಮೀಬಿಯಾದ ಪ್ರಖ್ಯಾತ ಪ್ರವಾಸೋದ್ಯಮನ ತಾಣವಾಗಿರು ನಮೀಬ್ ಮರುಭೂಮಿಯ ಬಿಗ್ ಡ್ಯಾಡಿ ಡ್ಯೂನ್‌ಗೆ ಭೇಟಿ ನೀಡಿದ್ದಇಬ್ಬರು ಪ್ರವಾಸಿಗರು ಸಂಪೂರ್ಣ ಬೆತ್ತಲೆಯಾಗಿ ಪೋಸ್ ನೀಡಿದ್ದರು. ದೇಶದ ಪ್ರಖ್ಯಾತ ಟೂರಿಸ್ಟ್ ಸ್ಪಾಟ್‌ನಲ್ಲಿ ಬೆತ್ತಲೆಯಾಗಿ ಪೋಸ್ ನೀಡಿದ ಇಬ್ಬರು ಪ್ರವಾಸಿಗರ ವಿರುದ್ಧ ಇಡೀ ನಮೀಬಿಯಾ ಆಕ್ರೋಶ ವ್ಯಕ್ತಪಡಿಸಿದೆ. ಪ್ರಸಿದ್ಧ ತಾಣದಲ್ಲಿ ಬೆತ್ತಲೆಯಾಗಿ ಪೋಸ್ ನೀಡಿದ ಪ್ರವಾಸಿಗರ ವಿರುದ್ಧ ಗರಿಷ್ಠ ಪ್ರಮಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಸಾಕಷ್ಟು ಪ್ರವಾಸಿಗರು ಕೂಡ ಇಂಥ ವರ್ತನೆ ಸರಿಯಲ್ಲ ಎಂದು ಹೇಳಿದ್ದಾರೆ. ಪ್ರವಾಸಿಗರ ವರ್ತನೆಗಳು ಅಭಿಮಾನಿಗಳಿಗೆ ಅಚ್ಚರಿಕೆ ನೀಡಿದ್ದು ಮಾತ್ರವಲ್ಲ, ಕೆಲವರಿಗೆ ಆಘಾತವನ್ನೂ ನೀಡಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ.
ಪ್ರವಾಸೋದ್ಯಮ ಸಚಿವಾಲಯದ ಅಧಿಕಾರಿಯೊಬ್ಬರು, ಈ ಪ್ರವಾಸಿಗರನ್ನು ಗುರುತಿಸಿ ಅವರನ್ನು ಕಪ್ಪುಪಟ್ಟಿಗೆ ಸೇರಿಸಬೇಕು ಎಂದು ಹೇಳಿದ್ದಾರೆ. ನಮೀಬಿಯಾದ ಯಾವುದೇ ಪ್ರವಾಸಿ ತಾಣಗಳಿಗೆ ಅವರ ಭೇಟಿಗೆ ಅವಕಾಶ ನೀಡಬಾರದೂ ಎಂದೂ ತಿಳಿಸಲಾಗಿದೆ. ಪ್ರವಾಸಿಗರು ಬೆತ್ತಲೆಯಾಗಿ ಪೋಸ್ ನೀಡಿದ ದೃಶ್ಯಗಳು ಇಂಟರ್ನೆಂಟ್‌ನಲ್ಲಿ ವ್ಯಾಪಕವಾಗಿ ಹಂಚಿಕೆಯಾಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ನಮೀಬಿಯಾದ ಪ್ರಜೆ ಮತ್ತು ಪ್ರವಾಸೋದ್ಯಮ ಅಸೋಸಿಯೇಷನ್‌ನ ಉನ್ನತ ಮಟ್ಟದ ಅಧಿಕಾರಿ ಕೆನ್ನೆತ್ ನೆಪೆಂಡಾ ಈ ಬಗ್ಗೆ ಮಾತನಾಡಿದ್ದು, ಈ ಘಟನೆ ತಪ್ಪು ಸಂದೇಶವನ್ನು ರವಾನಿಸಿದೆ. ಇಂಥ ಘಟನೆಗಳು ನಮೀಬಿಯಾದಲ್ಲಿ ಸಾಮಾನ್ಯ ಎನ್ನುವ ಪ್ಪು ಅಭಿಪ್ರಾಯವನ್ನು ಹೊಂದಿರಲು ಕಾರಣವಾಗುತ್ತದೆ ಎಂದಿದ್ದಾರೆ ಇದೊಂದು ಕೆಟ್ಟ ಘಟನೆ ಎಂದ ಅವರು ಕುಟುಂಬ ಸಮೇತ ಪ್ರವಾಸಕ್ಕೆ ಹೋಗಲು ಉತ್ತಮ ತಾಣವಾಗಿರುವ ಈ ಪ್ರದೇಶದಲ್ಲಿ ಕ್ಯಾಮೆರಾದ ಎದುರು ಬೆತ್ತಲೆಯಾಗಿ ಹೋಗುವ ಮುನ್ನ ಎರಡು ಬಾರಿ ಯೋಚನೆ ಮಾಡಬೇಕಿತ್ತು ಎಂದಿದ್ದಾರೆ.
ಮರಳಿನ ದಿಬ್ಬದಲ್ಲಿ ಮೂವರು ಪುರುಷ ಪ್ರವಾಸಿಗರು ಬೆತ್ತಲೆಯಾಗಿ ಕಾಣಿಸಿಕೊಂಡ ಫೋಟೋಗಳು ಮತ್ತು ವೀಡಿಯೊ ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗಿದೆ. ಯಾರು ಫೋಟೋವನ್ನು ಕ್ಲಿಕ್ ಮಾಡಿದ್ದಾರೆ ಅಥವಾ ವೀಡಿಯೊವನ್ನು ಚಿತ್ರೀಕರಿಸಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ ಆದರೆ ದೃಶ್ಯಗಳು ಕೆಲವೇ ಸಮಯದಲ್ಲಿ ವೈರಲ್ ಆಗಿವೆ ಮತ್ತು ನಮೀಬಿಯಾದ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶದ ಬಿರುಗಾಳಿಯನ್ನೇ ಎಬ್ಬಿಸಿತ್ತು.
ನಮೀಬಿಯಾದ ಅಧ್ಯಕ್ಷ ಹಗೆ ಜಿಂಗೋಬ್ ಕ್ಯಾನ್ಸರ್‌ಗೆ ಬಲಿ
ನಮೀಬಿಯಾದಲ್ಲಿ ವಿವಾದವು ಚರ್ಚೆಯಾಗುವ ಹೊತ್ತಿಗೆ ಪ್ರವಾಸಿಗರು ದೇಶವನ್ನು ತೊರೆದಿದ್ದಾರೆ ಎಂದು ವರದಿಯಾಗಿದೆ ಮತ್ತು ನಮೀಬಿಯಾದ ಕಾನೂನಿನಡಿಯಲ್ಲಿ ಪ್ರವಾಸಿಗರ ವರ್ತನೆ ಶಿಕ್ಷಾರ್ಹವಾಗಿದೆ ಎನ್ನಲಾಗುತ್ತದೆ. ಇದರ ನಡುವೆ ಪ್ರವಾಸಿಗರ ಮೂಲ ದೇಶದೊಂದಿಗೆ ಚರ್ಚೆ ಮಾಡಿ ಅವರಿಗೆ ಶಿಕ್ಷೆ ನೀಡುವ ನಿಟ್ಟಿನಲ್ಲಿ ನಮೀಬಿಯಾ ಹೋರಾಟ ಮಾಡಲಿದೆಯೇ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ.
ಕುನೋ ಉದ್ಯಾನವನದಲ್ಲಿ 4 ಮರಿಗಳಿಗೆ ಜನ್ಮ ನೀಡಿದ ಚೀತಾ... ಮರಿಗಳ ವೀಡಿಯೋ ವೈರಲ್